Assembly Session: ದಲಿತ ಸಭಾಧ್ಯಕ್ಷನ ಮೇಲೆ ಪೇಪರ್ ಎಸೆದ ನಿರ್ಲಜ್ಜ ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡಿ ಎಫ್ ಐ ಆರ್ ದಾಖಲಿಸಬೇಕು: ಕೆಎಂ ಶಿವಲಿಂಗೇಗೌಡ, ಶಾಸಕ
ಒಬ್ಬ ದಲಿತ ಸಭಾಧ್ಯಕ್ಷನ ಮೇಲೆ ಹರಿದ ಪೇಪರ್ ಎಸೆಯವುದು ನಾಚಿಕೆಗೇಡಿನ ಸಂಗತಿ ಎಂದು ಶಿವಲಿಂಗೇಗೌಡರು ಹೇಳಿದರು.
ಬೆಂಗಳೂರು: ಬಿಜೆಪಿ ಶಾಸಕರು ಸದನದಲ್ಲಿಂದು ಧರಣಿ ನಡೆಸುವ ನೆಪದಲ್ಲಿ ಬಜೆಟ್ ಪ್ರತಿಗಳನ್ನು ಹರಿದು ಸಭಾಧ್ಯಾಕ್ಷರ ಪೀಠದಲ್ಲಿ ಆಸೀನರಾಗಿದ್ದ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ (Rudrappa Lamani) ಅವರ ಮೇಲೆ ಎಸೆದಿದ್ದನ್ನು ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ (KM Shivalingegowda) ಉಗ್ರವಾಗಿ ಖಂಡಿಸಿದರು. ಬೆಂಗಳೂರಲ್ಲಿ ನಡೆದ ವಿರೋಧ ಪಕ್ಷಗಳ ನಾಯಕರನ್ನು ಬರಮಾಡಿಕೊಳ್ಳಲು ಶಿಷ್ಟಾಚಾರದ ಪ್ರಕಾರವೇ ಏರ್ಪೋರ್ಟ್ ಗಳಿಗೆ ಕಳಿಸಿಲಾಗಿತ್ತು. ಅದು ಹೊಸ ಸಂಗತಿಯೇನೂ ಅಲ್ಲ, ತನಿಖೆ ನಡೆದರೆ ಹಿಂದೆ ನಡೆದ ಸಂದರ್ಭಗಳು ಬೆಳಕಿಗೆ ಬರುತ್ತವೆ ಎಂದು ಗೌಡರು ಹೇಳಿದರು. ಪ್ರತಿಭಟನೆ ನಡೆಸುವ ಹಕ್ಕು ಬಿಜೆಪಿ ಶಾಸಕರಿಗೆ ಖಂಡಿತವಾಗಿಯೂ ಇದೆ, ಆದರೆ ಒಬ್ಬ ದಲಿತ ಸಭಾಧ್ಯಕ್ಷನ (Dalit Speaker) ಮೇಲೆ ಹರಿದ ಪೇಪರ್ ಎಸೆಯವುದು ನಾಚಿಕೆಗೇಡಿನ ಸಂಗತಿ, ನಿರ್ಲಜ್ಜತೆ ಪ್ರದರ್ಶಿಸಿದ ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡಬೇಕು ಮತ್ತು ಅವರ ವಿರುದ್ಧ ಎಫ್ ಐ ಆರ್ ದಾಖಲಿಸಬೇಕು ಎಂದು ಶಿವಲಿಂಗೇಗೌಡರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ