I N D I A; ಹಳೇ ಕಳ್ಳರು ಅಂತ ಹೊಸ ಹೆಸರಿಟ್ಟುಕೊಂಡು ಜನರ ಬಳಿ ಹೋಗಲು ನಿರ್ಧರಿಸಿದ್ದಾರೆ: ಸಿಟಿ ರವಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
ರಾಜಕಾರಣ ನಿಂತ ನೀರಲ್ಲ ಮತ್ತು ಅದರಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಮತ್ತು ಮಿತ್ರರಲ್ಲ ಅಂತ ತಾನು ಪದೇಪದೆ ಹೇಳುವುದು ಸಾಬೀತಾಗುತ್ತಿದೆ ಎಂದು ರವಿ ಹೇಳಿದರು.
ಬೆಂಗಳೂರು: ಯುಪಿಎ (UPA) ಭಾಗವಾಗಿದ್ದ ಭಷ್ಟಾಚಾರಿಗಳು, ಹಿಂಸೆಗಳನ್ನು ಸೃಷ್ಟಿಸಿದವರು, ಹಲವಾರು ಹಗರಣಗಳಲ್ಲಿ ಆರೋಪಿಗಳು ಇಂಡಿಯ ಅಂತ ಹೊಸ ಹೆಸರಿಟ್ಟುಕೊಡು ಜನರ ಮುಂದೆ ಹೋಗುವ ನಿರ್ಧಾರ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರವಿ, ರಾಜಕಾರಣ ನಿಂತ ನೀರಲ್ಲ ಮತ್ತು ಅದರಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಮತ್ತು ಮಿತ್ರರಲ್ಲ ಅಂತ ತಾನು ಪದೇಪದೆ ಹೇಳುವುದು ಸಾಬೀತಾಗುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಅರವಿಂದ್ ಕೇಜ್ರಿವಾಲ್ (Aravind Kejriwal) ಮೈತ್ರಿಕೂಟದ ಹೊಸ ಸದಸ್ಯ, ಪಂಚಾಯತ್ ಚುನಾವಣೆಯಲ್ಲಿ ಅವ್ಯಾಹತ ಹಿಂಸೆ ನಡೆಸಿದ ಟಿಎಮ್ ಸಿ ಮತ್ತು ದನಗಳನ್ನು ತಿನ್ನುವ ಮೇವು ತಿಂದು ಜೈಲಿಗೆ ಹೋಗಿದ್ದ ಲಾಲೂ ಪ್ರಸಾದ್ ಯಾದವ್ ಮೊದಲಾದವರೆಲ್ಲ ಸದಸ್ಯರು ಎಂದು ರವಿ ಗೇಲಿ ಮಾಡಿದರು. ಹಳೇ ಕಳ್ಳರೇ ಹೊಸ ಹೆಸರಿಟ್ಟುಕೊಂಡು ಜನರ ಮುಂದೆ ಹೋಗಲಿದ್ದಾರೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ