ಜಲಾವೃತಗೊಂಡಿದ್ದ ಊರಲ್ಲಿ ಸಿಲುಕಿದ್ದ ನಾಯಿ ಮತ್ತು ಅದರ ಮರಿಗಳನ್ನು ರಕ್ಷಿಸಿದ ಕಾರ್ಯಾಚರಣೆ ಶ್ಲಾಘನೀಯ!
ಊರಲ್ಲಿ ನಾಯಿಯ ಕುಟುಂಬ ಬಿಟ್ಟರೆ ಬೇರೆ ಯಾರೂ ಇಲ್ಲ. ಅದರೆ ತಾಯಿ ನಾಯಿ ಧೃತಿಗೆಟ್ಟಿಲ್ಲ. ಮನೆಯೊಂದರ ಪಂಪ್ ಸೆಟ್ ಕಟ್ಟೆಯ ಮೇಲೆ ಮರಿಗಳನ್ನು ತನ್ನ ಒಡಲಲ್ಲಿ ಹಾಕಿಕೊಂಡು ನೆರವು ಯಾವಾಗ ಬಂದೀತು, ಎಲ್ಲಿಂದ ಬಂದೀತು ಅಂತ ಕಾಯುತ್ತಾ ಕುಳಿತಿದೆ. ಎರಡು ದಿನಗಳಿಂದ ಅದರ ಹೊಟ್ಟೆ ಖಾಲಿ.
Davanagere: ನಿಜಕ್ಕೂ ಇದೊಂದು ಮಹತ್ವದ ಕಾರ್ಯಾಚರಣೆ ಮಾರಾಯ್ರೆ. ಈ ತೆಪ್ಪದಲ್ಲಿ ಕಾಣುತ್ತಿರುವ ಕಿಟ್ಟಪ್ಪ ಅವರೊಂದಿಗಿರುವ ಮತ್ತೊಬ್ಬ ವ್ಯಕ್ತಿಯಲ್ಲಿ ಮೂಕ ಪ್ರಾಣಿಗಳೆಡೆ ಇರುವ ಮಮತೆ ಮತ್ತು ಕಳಕಳಿಯನ್ನು ಮೆಚ್ಚದಿರುವುದು ಸಾಧ್ಯವಿಲ್ಲ. ಈ ವಿಡಿಯೋವನ್ನು ದಾವಣಗೆರೆ (Davanagere) ಜಿಲ್ಲೆಯ ಒಂದು ಹಳ್ಳಿಯಲ್ಲಿ ಶೂಟ್ ಮಾಡಲಾಗಿದೆ. ಅಕಾಲಿಕ ಮಳೆ ದಾವಣಗೆರೆಯಲ್ಲೂ ಸುರಿಯುತ್ತಿದ್ದು ಈ ಗ್ರಾಮದಲ್ಲಿ ಪ್ರವಾಹದಂಥ (flood-like situation) ಸ್ಥಿತಿ ತಲೆದೋರಿದೆ ಮತ್ತು ಊರಿಗೆ ಊರೇ ಜಲಾವೃತಗೊಂಡಿರುವುದನ್ನು (marooned) ನೀವು ನೋಡಬಹುದು. ಗ್ರಾಮದ ನಿವಾಸಿಗಳು ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಬೇರೆ ಸ್ಥಳಗಳಿಗೆ ಹೋಗಿದ್ದಾರೆ.
ಅದರೆ ಯಾರಿಗೂ ಈ ನಾಯಿ ಮತ್ತು ಅದರ 5 ಮರಿಗಳು ಕಂಡಿಲ್ಲ. ಎರಡು ದಿನಗಳಿಂದ ಮಳೆ ಸುರಿಯುತ್ತಿದೆ ಮತ್ತು ಊರಲ್ಲಿ ನಾಯಿಯ ಕುಟುಂಬ ಬಿಟ್ಟರೆ ಬೇರೆ ಯಾರೂ ಇಲ್ಲ. ಅದರೆ ತಾಯಿ ನಾಯಿ ಧೃತಿಗೆಟ್ಟಿಲ್ಲ. ಮನೆಯೊಂದರ ಪಂಪ್ ಸೆಟ್ ಕಟ್ಟೆಯ ಮೇಲೆ ಮರಿಗಳನ್ನು ತನ್ನ ಒಡಲಲ್ಲಿ ಹಾಕಿಕೊಂಡು ನೆರವು ಯಾವಾಗ ಬಂದೀತು, ಎಲ್ಲಿಂದ ಬಂದೀತು ಅಂತ ಕಾಯುತ್ತಾ ಕುಳಿತಿದೆ. ಎರಡು ದಿನಗಳಿಂದ ಅದರ ಹೊಟ್ಟೆ ಖಾಲಿ.
ಆದರೆ, ಟಿವಿ9 ಕನ್ನಡ ವಾಹಿನಿಯ ದಾವಣಗೆರೆ ವರದಿಗಾರನಿಗೆ ನಾಯಿಗಳ ಬಗ್ಗೆ ಗೊತ್ತಾಗಿ ಮೀನುಗಾರ ಕಿಟ್ಟಪ್ಪ ಜೊತೆ ಮಾತಾಡಿ ಎರಡು ತೆಪ್ಪಗಳಲ್ಲಿ ಅಲ್ಲಿಗೆ ಹೋಗಿದ್ದಾರೆ. ಒಂದರಲ್ಲಿ ಕಿಟ್ಟಪ್ಪ ಮತ್ತು ಅವರ ಸಂಗಡಿಗ ಮತ್ತೊಂದರಲ್ಲಿ ನಮ್ಮ ವರದಿಗಾರ ಮತ್ತು ಕೆಮೆರಾಮನ್.
ಮಳೆ ಸುರಿಯುತ್ತಿದ್ದರೂ ಕೊಡೆಗಳನ್ನು ತೆಗೆದುಕೊಂಡು ನಾಯಿಗಳಿದ್ದಲ್ಲಿಗೆ ಹೋಗಿ ತಾಯಿ ನಾಯಿ ಮತ್ತು ಅದರ 5 ಮರಿಗಳನ್ನು ತೆಪ್ಪದಲ್ಲಿ ಹಾಕಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಕಿಟ್ಟಪ್ಪ, ಅವರ ಸಂಗಡಿಗ ಮತ್ತು ನಮ್ಮ ದಾವಣಗೆರೆಯ ವರದಿಗಾರ ಹಾಗೂ ಕೆಮೆರಾಮನ್ ಅವರ ಕಾರ್ಯಾಚರಣೆ ಶ್ಲಾಘನೀಯ.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ