ಸಿಲಿಂಡರ್ ಸ್ಫೋಟದಿಂದ ಬಾಗೇಪಲ್ಲಿಯ ಕುಟುಂಬವೊಂದರ ಸ್ಥಿತಿ ಅಕ್ಷರಶಃ ಮೂರಾಬಟ್ಟೆಯಾಗಿದೆ
ತೀವ್ರ ಸ್ವರೂಪದ ಸ್ಫೋಟ ಮ್ಯಾಕಲಪಲ್ಲಿ ಗ್ರಾಮದ ಜನರನ್ನು ಬೆಚ್ಚಿ ಬೀಳಿಸಿದೆ. ಅನಾಹುತ ಸಂಭವಿಸಿರುವ ಮನೆಯ ಸದಸ್ಯರಂತೂ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಅವರ ತಲೆ ಮೇಲೆ ಸೂರು ಇಲ್ಲದಂತಾಗಿದೆ.
Bagepalli: ಈ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು (cylinder blast) ಅಗಿರುವ ಅನಾಹುತ ನೋಡುಗರನ್ನು ದಂಗಾಗಿಸುತ್ತದೆ. ಒಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಳ್ಳುವುದರ ಜೊತೆಗೆ ಇಡೀ ಮನೆ ಕುಸಿದು ಬೀಳುವಂತೆ ಮಾಡಿದೆ. ಛಾವಣಿ ಜೊತೆ ಮನೆಯ ಗೋಡೆಗಳು ಛಿದ್ರಗೊಂಡಿವೆ. ಸ್ಫೋಟದಿಂದ ಮರಣ ಹೊಂದಿರುವ ವ್ಯಕ್ತಿಯನ್ನು 62-ವರ್ಷ ವಯಸ್ಸಿನ ಎಮ್ ಬಿ ಲಕ್ಷ್ಮಣ (MB Laxman) ಎಂದು ಗುರುತಿಸಲಾಗಿದೆ. ಅಂದಹಾಗೆ, ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಮ್ಯಾಕಲಪಲ್ಲಿ (Mykalapalli) ಹೆಸರಿನ ಗ್ರಾಮದಲ್ಲಿ. ಈ ಗ್ರಾಮ ಚೇಳೂರು ಪೊಲೀಸ್ ಠಾಣೆಯಲ್ಲಿ ಬರುತ್ತದೆ ಎಂದು ಟಿವಿ9 ಕನ್ನಡ ವಾಹಿನಿಯ ಚಿಕ್ಕಮಗಳೂರು ವರದಿಗಾರ ತಿಳಿಸುತ್ತಾರೆ.
ತೀವ್ರ ಸ್ವರೂಪದ ಸ್ಫೋಟ ಮ್ಯಾಕಲಪಲ್ಲಿ ಗ್ರಾಮದ ಜನರನ್ನು ಬೆಚ್ಚಿ ಬೀಳಿಸಿದೆ. ಅನಾಹುತ ಸಂಭವಿಸಿರುವ ಮನೆಯ ಸದಸ್ಯರಂತೂ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಅವರ ತಲೆ ಮೇಲೆ ಸೂರು ಇಲ್ಲದಂತಾಗಿದೆ. ಬದುಕನ್ನು ಹೇಗೆ ಮುಂದುವರಿಸುವುದು ಅನ್ನೋದು ಸಹ ಅವರಿಗೆ ತೋಚುತ್ತಿಲ್ಲ. ಎಲ್ಲವನ್ನೂ ಅವರು ಶೂನ್ಯದಿಂದ ಆರಂಭಿಸಬೇಕಿದೆ.
ಇಂಥ ಅನಾಹುತಗಳಿಗೆ ಸರ್ಕಾರದಿಂದ ನೆರವು ಕೂಡ ಸಿಗೋದಿಲ್ಲ. ಮನೆ ಮೇಲೆ ವಿಮೆ ಮಾಡಿಸುವ ಸಂಗತಿ ಅವರಿಗೆ ಗೊತ್ತಿರಲಾರದು. ಗ್ರಾಮ ಪಂಚಾಯಿತಿಯಿಂದ ನೆರವು ಒದಗಿಸಬಹುದಾದ ಸಾಧ್ಯತೆ ಇದೆ, ಆದರೆ ಖರ್ಚನ್ನು ಯಾವ ಬಾಬತ್ತಿನಲ್ಲ ತೋರಿಸಬಹುದು? ಹಾಗಾಗಿ, ಕ್ಷೇತ್ರದ ಶಾಸಕರೇ ವೈಯಕ್ತಿಕವಾಗಿ ಮತ್ತು ತಮ್ಮ ಅನುದಾನದಿಂದ ಸಹಾಯ ಮಾಡಬಹುದು ಅನಿಸುತ್ತದೆ.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ