ಅತ್ತಿಬೆಲೆ ಪಟಾಕಿ ದುರಂತಕ್ಕೆ ಸಂಬಂಧಿಸಿದಂತೆ ಮೂವರನ್ನು ಸಸ್ಪೆಂಡ್ ಮಾಡಲು ಸೂಚಿಸಲಾಗಿದೆ: ಸಿದ್ದರಾಮಯ್ಯ

|

Updated on: Oct 10, 2023 | 4:46 PM

ಮೃತಪಟ್ಟ ಯುವಕರು ತಮಿಳುನಾಡು ವಿದ್ಯಾರ್ಥಿಗಳಾಗಿದ್ದರು ಮತ್ತು ರಜೆಗಳಿದ್ದ ಕಾರಣ ದಿನಗೂಲಿ ಲೆಕ್ಕದಲ್ಲಿ ಕೆಲಸ ಮಾಡಲು ಬೆಂಗಳೂರಿಗೆ ಬಂದಿದ್ದರು ಎಂದು ಮುಖ್ಯಮಂತ್ರಿ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಇದ್ದರು.

ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತವನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತಿದೆ. ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಘಟನೆಯ ವಿವರಣೆ ನೀಡಿದರಲ್ಲದೆ, ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹೇಳಿದರು. ಅಂಗಡಿಯ ಮಾಲೀಕ ರಾಮಸ್ವಾಮಿ ರೆಡ್ಡಿ (Ramaswamy Reddy) ಎನ್ನುವ ವ್ಯಕ್ತಿ ಪಟಾಕಿ ಮಾರಲು ಪರವಾನನಿಗೆ ಪಡೆದಿದ್ದ ಆದರೆ ಗೋಡೌನ್ ನಲ್ಲಿ 7-8 ಸಾವಿರ ಕೇಜಿಗಳಷ್ಟು ಪಟಾಕಿಗಳ ದಾಸ್ತಾನು ಇಟ್ಟಿದ್ದ. ಅವಘಢ ನಡೆದ ರಾತ್ರಿ ಕೂಡ ಪಟಾಕಿ ಲೋಡ್ ಬಂದಿತ್ತು ಮತ್ತು ಅನ್ಲೋಡ್ ಮಾಡುವ ಸಂದರ್ಭದಲ್ಲಿ ದುರಂತ ಸಂಭವಿಸುತ್ತು ಎಂದು ಸಿದ್ದರಾಮಯ್ಯ ಹೇಳಿದರು. ರಾಮಸ್ವಾಮಿಗೆ ಲೈಸೆನ್ಸ್ ನೀಡಿದ ತಹಸೀಲ್ದಾರ್ (tahsildar), ಸಂಬಂಧಪಟ್ಟ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ (police inspector) ಮತ್ತ ಚೀಫ್ ಫೈರ್ ಆಫೀಸರ್ (chief fire officer)-ಮೂವರನ್ನು ಸಸ್ಪೆಂಡ್ ಮಾಡುವಂತೆ ಸೂಚಿಸಲಾಗಿದೆ ಮತ್ತು ಸಂಬಂಧಪಪಟ್ಟ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾದಿಕಾರಿಗೂ ನೋಟೀಸ್ ನೀಡುವಂತೆ ತಿಳಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಮೃತಪಟ್ಟ ಯುವಕರು ತಮಿಳುನಾಡು ವಿದ್ಯಾರ್ಥಿಗಳಾಗಿದ್ದರು ಮತ್ತು ರಜೆಗಳಿದ್ದ ಕಾರಣ ದಿನಗೂಲಿ ಲೆಕ್ಕದಲ್ಲಿ ಕೆಲಸ ಮಾಡಲು ಬೆಂಗಳೂರಿಗೆ ಬಂದಿದ್ದರು ಎಂದು ಮುಖ್ಯಮಂತ್ರಿ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಇದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ