ಬಹಳ ದಿನಗಳ ನಂತರ ತೆರೆಮೇಲೆ ಕಾಣಿಸಿಕೊಂಡಿರುವ ಚಿರಂಜೀವಿ ಅಭಿಮಾನಿಗಳಿಗೆ ಸಂಭ್ರಮಿಸಲು ಬೇರೆ ಕಾರಣವೂ ಇದೆ

ಬಹಳ ದಿನಗಳ ನಂತರ ತೆರೆಮೇಲೆ ಕಾಣಿಸಿಕೊಂಡಿರುವ ಚಿರಂಜೀವಿ ಅಭಿಮಾನಿಗಳಿಗೆ ಸಂಭ್ರಮಿಸಲು ಬೇರೆ ಕಾರಣವೂ ಇದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 29, 2022 | 10:12 PM

ಬಹಳ ದಿನಗಳ ನಂತರ ಚಿರಂಜೀವಿ ಅಭಿನಯದ ಚಿತ್ರವೊಂದು ಬಿಡುಗಡೆಯಾಗುತ್ತಿರೋದು ಅಭಿಮಾನಿಗಳಲ್ಲಿ ಸಂತೋಷ ತಂದಿದೆ. ಅದರಲ್ಲೂ ಅವರು ತಮ್ಮ ಮಗನ ಜೊತೆ ಕಾಣಿಸಿಕೊಂಡಿದ್ದಾರೆ.

Chikkaballapura: ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ (Chiranjeevi) ಮತ್ತು ಅವರ ಮಗ ಹಾಗೂ ಟಾಲಿವುಡ್ ನ (Tollywood) ಸದ್ಯದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾಗಿರುವ ರಾಮಚರಣ ತೇಜ (Ram Charan Teja) ಒಟ್ಟಿಗೆ ನಟಿಸಿರುವ ಬಹು ನಿರೀಕ್ಷಿತ ‘ಆಚಾರ್ಯ’ (Acharya) ತೆಲುಗು ಸಿನಿಮಾ ಇವತ್ತು (ಶುಕ್ರವಾರ) ತೆರೆಕಂಡಿದೆ. ತೆಲುಗು ಇಂಡಸ್ಟ್ರೀಯಿಂದ ಈ ವರ್ಷ ಮೆಗಾ ಹಿಟ್ ಚಿತ್ರಗಳು ತೆರೆಕಂಡಿವೆ. ಮೊದಲಿಗೆ ‘ಪುಷ್ಪಾ’ ಮತ್ತು ನಂತರ ‘ಆರ್ ಆರ್ ಆರ್’. ಯಶ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ ‘ಕೆಜಿಎಫ್: ಚಾಪ್ಟರ್ 2’ ಚಿತ್ರ ತೆಲುಗಿಗೆ ಡಬ್ ಆಗಿರುವುದರಿಂದ ಅದನ್ನೂ ಮೇಲಿನ ಚಿತ್ರಗಳ ಸಾಲಿಗೆ ಸೇರಿಸಬಹುದು. ಓಕೆ ವಿಷಯವೇನೆಂದರೆ ‘ಆಚಾರ್ಯ’ ಚಿಕ್ಕಬಳ್ಳಾಪುರದಲ್ಲೂ ತೆರೆಕಂಡಿದೆ. ಜಿಲ್ಲೆಯಲ್ಲಿ ತೆಲುಗು ಮಾತಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಅವರಲ್ಲಿ ಚಿರಂಜೀವಿ ಅಭಿಮಾನಿಗಳು ಬೇಕಾದಷ್ಟಿದ್ದಾರೆ.

ಬಹಳ ದಿನಗಳ ನಂತರ ಚಿರಂಜೀವಿ ಅಭಿನಯದ ಚಿತ್ರವೊಂದು ಬಿಡುಗಡೆಯಾಗುತ್ತಿರೋದು ಅಭಿಮಾನಿಗಳಲ್ಲಿ ಸಂತೋಷ ತಂದಿದೆ. ಅದರಲ್ಲೂ ಅವರು ತಮ್ಮ ಮಗನ ಜೊತೆ ಕಾಣಿಸಿಕೊಂಡಿದ್ದಾರೆ. ನಿಮಗೆ ಗೊತ್ತಿರಬಹುದು, ಚಿರಂಜೀವಿಗೆ 67ರ ಪ್ರಾಯ ಮತ್ತು ರಾಮ್ ಚರಣ್ ಗೆ 37. ಸಿನಿಮಾ ವೀಕ್ಷಿಸಿದವರು ಹೇಳುವ ಪ್ರಕಾರ ಕುಣಿತ ಮತ್ತು ಹೊಡೆದಾಟ ದೃಶ್ಯಗಳಲ್ಲಿ ಚಿರಂಜೀವಿ ಮಗನಿಗೆ ಭರ್ಜರಿ ಪೈಪೋಟಿ ನೀಡಿದ್ದಾರಂತೆ!

ಓಕೆ, ಚಿಕ್ಕಬಳ್ಳಾಪುರದ ಈ ಚಿತ್ರಮಂದಿರಕ್ಕೆ ಬರೋಣ. ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಕ್ಷೀರಾಭಿಷೇಕ ಮಾಡುತ್ತಿದ್ದಾರೆ. ಪೋಸ್ಟರ್ ಗಳಿಗೆ ದೊಡ್ಡ ಹೂವಿನ ಹಾರಗಳನ್ನು ಹಾಕಿ ಸಿಂಗಾರ ಮಾಡಿದ್ದಾರೆ. ಚಿರಂಜೀವಿ ಮತ್ತು ರಾಮಚರಣ ಅವರಿಗೆ ಜೈಕಾರ ಕೂಗುತ್ತಿದ್ದಾರೆ.

ಅಂದಹಾಗೆ, ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಆಚಾರ್ಯ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ.

ಇದನ್ನೂ ಓದಿ:   Acharya: ರಾಮ್​ ಚರಣ್-ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ವಿವರ