Acharya: ರಾಮ್ ಚರಣ್-ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ವಿವರ
Acharya Movie First Half Review: ‘ಆರ್ಆರ್ಆರ್’ ಚಿತ್ರದಿಂದ ರಾಮ್ ಚರಣ್ ಖ್ಯಾತಿ ಹೆಚ್ಚಿದೆ. ಆ ಚಿತ್ರದ ಬಳಿಕ ‘ಆಚಾರ್ಯ’ ತೆರೆಗೆ ಬರುತ್ತಿದೆ. ಹಾಗಾದರೆ, ‘ಆಚಾರ್ಯ’ ಸಿನಿಮಾದ ಮೊದಲಾರ್ಧ ಹೇಗಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ರಾಮ್ ಚರಣ್ (Ram Charan) ಹಾಗೂ ಚಿರಂಜೀವಿ (Chiranjeevi) ನಟನೆಯ ‘ಆಚಾರ್ಯ’ ಸಿನಿಮಾ ಇಂದು (ಏಪ್ರಿಲ್ 29) ರಿಲೀಸ್ ಆಗಿದೆ. ಈ ಸಿನಿಮಾದ ಕಥೆ ಕಾಡಿನಲ್ಲಿ ನಡೆಯಲಿದೆ ಅನ್ನೋದು ಟ್ರೇಲರ್ ಮೂಲಕ ಗೊತ್ತಾಗಿತ್ತು. ಈ ಸಿನಿಮಾದಲ್ಲಿ ತಂದೆ-ಮಗ ಒಟ್ಟಾಗಿ ನಟಿಸಿರುವುದು ಅಭಿಮಾನಿಗಳಿಗೆ ಖುಷಿ ಇದೆ. ಟ್ರೇಲರ್ ಮೂಲಕ ಸಿನಿಮಾ ಹೇಗಿದೆ ಎನ್ನುವ ಝಲಕ್ ಸಿಕ್ಕಿತ್ತು. ಕೊರಟಾಲ ಶಿವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಮಿರ್ಚಿ’, ‘ಭರತ್ ಅನೆ ನೇನು’ ಮೊದಲಾದ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ‘ಆರ್ಆರ್ಆರ್’ ಚಿತ್ರದಿಂದ ರಾಮ್ ಚರಣ್ ಖ್ಯಾತಿ ಹೆಚ್ಚಿದೆ. ಆ ಚಿತ್ರದ ಬಳಿಕ ‘ಆಚಾರ್ಯ’ ತೆರೆಗೆ ಬರುತ್ತಿದೆ. ಹಾಗಾದರೆ, ‘ಆಚಾರ್ಯ’ ಸಿನಿಮಾದ ಮೊದಲಾರ್ಧ (Acharya Movie First Half Review) ಹೇಗಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
- ‘ಆಚಾರ್ಯ’ ಸಿನಿಮಾದ ಪೂರ್ತಿ ಕಥೆ ಕಾಡಿನಲ್ಲೇ ಸಾಗುತ್ತದೆ. ಫಸ್ಟ್ ಹಾಫ್ ಬಹುತೇಕ ಕಾಡಿನ ದೃಶ್ಯಗಳೇ ತುಂಬಿಕೊಂಡಿವೆ.
- ಈ ಸಿನಿಮಾದಲ್ಲಿ ಚಿರಂಜೀವಿ ಮತ್ತು ರಾಮ್ ಚರಣ್ ನಟಿಸಿದ್ದಾರೆ. ರಾಮ್ ಚರಣ್ ಅವರದ್ದು ಅತಿಥಿ ಪಾತ್ರ. ಮಧ್ಯಂತರಕ್ಕಿಂತ ಮುನ್ನ ಅವರ ಎಂಟ್ರಿ ಆಗುತ್ತದೆ.
- ಪೂಜಾ ಹೆಗ್ಡೆ ಅವರಿಗೆ ‘ಆಚಾರ್ಯ’ ಚಿತ್ರದ ಮೊದಲಾರ್ಧದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಕೇವಲ ಎರಡು ದೃಶ್ಯಗಳಲ್ಲಿ ಮಾತ್ರ ಅವರು ಕಾಣಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಲಿದೆ.
- ‘ಆಚಾರ್ಯ’ ಫಸ್ಟ್ ಹಾಫ್ನಲ್ಲಿ ಭರ್ಜರಿ ಫೈಟ್ ಇದೆ. ಎರಡು ಹಾಡುಗಳಿವೆ. ಐಟಂ ಸಾಂಗ್ ಬಯಸುವ ಪ್ರೇಕ್ಷಕರಿಗೆ ಮೊದಲಾರ್ಧದಲ್ಲಿ ಮನರಂಜನೆ ಇದೆ.
- ಈ ಸಿನಿಮಾದ ಮೊದಲಾರ್ಧದ ಕಥೆ ತುಂಬ ನಿಧಾನಗತಿಯಲ್ಲಿ ಸಾಗುತ್ತದೆ. ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತದೆ.
- ಹೇಳಿಕೊಳ್ಳುವಂತಹ ಗಟ್ಟಿಯಾದ ಕಥಾಹಂದರ ಈ ಚಿತ್ರದಲ್ಲಿ ಇಲ್ಲ. ಸಣ್ಣ ವಿಷಯವನ್ನೇ ಎಳೆದಾಡಿದಂತಿದೆ.
ಇದನ್ನೂ ಓದಿ: Kajal Aggarwal: ‘ಆಚಾರ್ಯ’ ಚಿತ್ರದಲ್ಲಿ ಕಾಜಲ್ ಪಾತ್ರ ಏಕಿಲ್ಲ? ಕಾರಣ ಬಹಿರಂಗಪಡಿಸಿದ ನಿರ್ದೇಶಕ
Urfi Javed: ರಾಮ್ ಚರಣ್ ನೆಚ್ಚಿನ ನಟ ಎಂದ ಉರ್ಫಿ ‘ಕೆಜಿಎಫ್’ ಬಗ್ಗೆ ಹೇಳಿದ್ದೇನು? ಇಲ್ಲಿದೆ ನೋಡಿ