Assembly Polls | ನಮಗೆ ಕೇವಲ ಕಾಂಗ್ರೆಸ್ ಪಕ್ಷದ ಮಾತ್ರ ಯೋಚನೆ; ಬೇರೆ ಪಾರ್ಟಿ, ಅಭ್ಯರ್ಥಿಗಳನ್ನು ಕುರಿತು ಯೋಚಿಸುವುದಿಲ್ಲ: ಡಿಕೆ ಶಿವಕುಮಾರ್

|

Updated on: Feb 02, 2023 | 1:10 PM

ಕಾಂಗ್ರೆಸ್ ಜನರಿಗೆ ಹತ್ತಿರವಿರುವ, ಜನರೊಂದಿಗೆ ಬೆರೆಯುವ ಮತ್ತು ಜನರ ಸೇವೆ ಮಾಡುತ್ತಾ ಅವರ ಬದುಕನ್ನು ಹಸನಾಗಿಸುವ ಪಕ್ಷ, ತಾವು ತಮ್ಮ ಪಕ್ಷದ ಬಗ್ಗೆ ಮಾತ್ರ ಯೋಚಿಸುವುದಾಗಿ ಶಿವಕುಮಾರ್ ಹೇಳಿದರು.

ಬಳ್ಳಾರಿ ಕ್ಷೇತ್ರದಿಂದ ಕೆಆರ್ ಪಿಪಿ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿಯವರು (Gali Janardhan Reddy) ತಮ್ಮ ಧರ್ಮಪತ್ನಿ ಅರುಣ ಲಕ್ಷ್ಮಿಯವರನ್ನು ಸ್ಪರ್ಧೆಗೆ ಇಳಿಸುತ್ತಿರುವುದರಿಂದ ಬಿಜೆಪಿ ಆಭ್ಯರ್ಥಿಯ ವೋಟುಗಳು ವಿಭಜಿಸುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆಯೇ ಅಂತ ಕೇಳಿದಾಗ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು, ಎಲ್ಲ ಪಕ್ಷಗಳು ತಮ್ಮ ತತ್ವಸಿದ್ಧಾಂತಗಳ ಮೇಲೆ ಹೋರಾಡುತ್ತವೆ, ತಮ್ಮದು ಬಹು ದೊಡ್ಡ ಇತಿಹಾಸವಿರುವ ಪಕ್ಷ, ತಾವು ತಮ್ಮ ಸಿದ್ಧಾಂತಗಳ (ideology) ಮೇಲೆ ಹೋರಾಡುವುದಾಗಿ ಹೇಳಿದರು. ಕಾಂಗ್ರೆಸ್ ಜನರಿಗೆ ಹತ್ತಿರವಿರುವ, ಜನರೊಂದಿಗೆ ಬೆರೆಯುವ ಮತ್ತು ಜನರ ಸೇವೆ ಮಾಡುತ್ತಾ ಅವರ ಬದುಕನ್ನು ಹಸನಾಗಿಸುವ ಪಕ್ಷ, ತಾವು ತಮ್ಮ ಪಕ್ಷದ ಬಗ್ಗೆ ಮಾತ್ರ ಯೋಚಿಸುವುದಾಗಿ ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Feb 02, 2023 01:09 PM