AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಕ್ಫ್ ಭೂಕಬಳಿಕೆ ವಿರುದ್ಧ ನಮ್ಮ ಹೋರಾಟ, ಇದರಲ್ಲಿ ರಾಜಕೀಯ ಸ್ವಾರ್ಥ ಇಲ್ಲ: ಬಸನಗೌಡ ಯತ್ನಾಳ್

ವಕ್ಫ್ ಭೂಕಬಳಿಕೆ ವಿರುದ್ಧ ನಮ್ಮ ಹೋರಾಟ, ಇದರಲ್ಲಿ ರಾಜಕೀಯ ಸ್ವಾರ್ಥ ಇಲ್ಲ: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 25, 2024 | 7:37 PM

Share

ಕೆಲ ಮುಸ್ಲಿಂ ನಾಯಕರ ಹೆಸರುಗಳನ್ನು ಉಲ್ಲೇಖಿಸಿದ ಬಸನಗೌಡ ಯತ್ನಾಳ್, ಅವರೆಲ್ಲರಿಗೆ ಜಗದ್ಗುರು ಎಂದರೆ ಮಲ್ಲಿಕಾರ್ಜುನ ಖರ್ಗೆ ಎಂದರು. ಅವರ ಮಗ ಪ್ರಿಯಾಂಕ್ ಖರ್ಗೆ ಹಿಂದೂಗಳ ಮೇಲೆ ಹಲ್ಲೆ ನಡೆಸುತ್ತಿದ್ದ ರಜಾಕ್​ರು ಮುಸಲ್ಮಾನರಲ್ಲ ಹಿಂದೂಗಳು ಎನ್ನುತ್ತಾರೆ ಎಂದು ಗೇಲಿ ಮಾಡಿದರು. ಇಂಥವರೆಲ್ಲ ನಮ್ಮ ರಾಜ್ಯವನ್ನು ಆಳುತ್ತಿದ್ದಾರೆ ಎಂದು ಅವರು ಹೇಳಿದರು.

ಬೀದರ್: ವಕ್ಫ್ ಬೋರ್ಡ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ನೇತೃತ್ವದಲ್ಲಿ ಬಿಜೆಪಿಯಲ್ಲಿ ಭಿನ್ನಮತೀಯರೆಂದು ಗುರುತಿಸಿಕೊಂಡಿರುವ ನಾಯಕರು ಇಂದಿನಿಂದ ಜನಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ನಗರದ ಗಣೇಶ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿ ಯತ್ನಾಳ್ ಮಾತಾಡಿದರು. ಈ ಹೋರಾಟ ಉಪ ಚುನಾವಣೆಗಾಗಿ ಅಂತ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಹೋರಾಟ ಮಾಡುತ್ತಿದ್ದೇವೆ, ರೈತರು, ಮಠಮಾನ್ಯಗಳು ಮತ್ತು ಜನಸಾಮಾನ್ಯರ ಭೂಮಿಗಳನ್ನು ವಕ್ಫ್ ಕದಂಬ ಬಾಹುಗಳಿಂದ ರಕ್ಷಿಸಲು ಹೋರಾಟ ನಡೆಸಲಾಗಿದೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾಯ್ತು ಎಫ್​ಐಆರ್; ಕಾರಣ?