‘ನಮ್ಮ ಹಳೇ ಬಾಸ್ ಕುಮಾರಸ್ವಾಮಿ ಭಸ್ಮಾಸುರನಂತೆ’: ಹೆಚ್ಡಿಕೆ ವಿರುದ್ಧ ಸಚಿವ ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ
ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭಸ್ಮಾಸುರನಿಗೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬರೀ ಕಥೆ ಹೇಳಿಕೊಂಡ ಓಡಾಡಿದ್ರೆ ಏನೂ ಆಗಲ್ಲ. ಹೆಚ್ಡಿಕೆಯವರು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ರಾಜ್ಯದಲ್ಲಿ ಎಲ್ಲೂ ಕೂಡ ಒಂದು ಕೈಗಾರಿಕೆ ಮಾಡಲಿಲ್ಲ. ಎಲ್ಲರಿಗೂ ಚಾಕೊಲೇಟ್ ಕೊಡುತ್ತಾ ಹೋಗುತ್ತಿದ್ದಾರೆ ಎಂದವರು ಕಿಡಿ ಕಾರಿದ್ದಾರೆ.
ರಾಮನಗರ, ನವೆಂಬರ್ 19: ನಮ್ಮ ಹಳೇ ಬಾಸ್ ಕುಮಾರಸ್ವಾಮಿ ಭಸ್ಮಾಸುರ ಇದ್ದ ಹಾಗೆ, ಅವರು ಎಲ್ಲಿ ಹೋಗುತ್ತಾರೆ ಅಲ್ಲಿ ಅವರ ತಲೆಯ ಮೇಲೆ ಕೈ ಇಡ್ತಾರೆ ಎಂದು ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ಮುಂದೆ ಎನ್ಡಿಎ ಸರ್ಕಾರ ಬರಲಿದೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ನಾವು ನಮ್ಮ ಸರ್ಕಾರದ ಬರಲಿದೆ ಎಂದು ಹೇಳುತ್ತೇವೆ. ಏನೇ ಆಗಿದ್ದರೂ ಅಂತಿಮವಾಗಿ ಜನರು ತೀರ್ಪು ಕೊಡುತ್ತಾರೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ವಿರೋಧಿಗಳು ನಮ್ಮ ಸರ್ಕಾರದ ಕೆಲಸಗಳನ್ನು ಹೊಗಳುವುದಿಲ್ಲ. ಕುಮಾರಸ್ವಾಮಿ ಅವರಿಗೆ ಕೇಂದ್ರದಿಂದ ನಮಗೆ ಸಾಮಾಜಿಕ ನ್ಯಾಯ ಕೊಡಿಸಲು ಹೇಳಿ. ಕೈಗಾರಿಕೆ ಮಾಡಿದ್ರೆ ಮಾಗಡಿಯಲ್ಲಿ 150 ಎಕರೆ ಜಾಗ ಕೊಡುತ್ತೇವೆ. ಕೈಗಾರಿಕೆ ಸ್ಥಾಪನೆ ಮಾಡಿ ಉದ್ಯೋಗ ಕೊಡುತ್ತಾರಾ ಕೇಳಿ. ಬರೀ ಕಥೆ ಹೇಳಿಕೊಂಡ ಓಡಾಡಿದ್ರೆ ಏನೂ ಆಗಲ್ಲ. ಹೆಚ್ಡಿಕೆಯವರು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ರಾಜ್ಯದಲ್ಲಿ ಎಲ್ಲೂ ಕೂಡ ಒಂದು ಕೈಗಾರಿಕೆ ಮಾಡಲಿಲ್ಲ. ಎಲ್ಲರಿಗೂ ಚಾಕೊಲೇಟ್ ಕೊಡುತ್ತಾ ಹೋಗುತ್ತಿದ್ದಾರೆ ಎಂದು ಹೆಚ್.ಸಿ.ಬಾಲಕೃಷ್ಣ ಕಿಡಿಕಾರಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
