ಜನತೆ ಮತ್ತು ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದು ನಮ್ಮ ಕೆಲಸ, ಕುಮಾರಸ್ವಾಮಿ ಹೇಳಿದ್ದನ್ನು ಮಾಡುವುದಲ್ಲ: ಎನ್ ಚಲುವರಾಯಸ್ವಾಮಿ, ಸಚಿವ

|

Updated on: Aug 28, 2023 | 7:02 PM

ಮೋಡ ಬಿತ್ತನೆ ಪ್ರಸ್ತಾಪದ ಬಗ್ಗೆ ಮಾತಾಡಿದ ಅವರು, ಹಿಂದಿನ ಪ್ರಯತ್ನಗಳು ವಿಫಲವಾಗಿರುವುದರಿಂದ ಸದ್ಯಕ್ಕೆ ಸರ್ಕಾರಕ್ಕೆ ಆ ಯೋಚನೆ ಇಲ್ಲ ಎಂದು ಹೇಳಿದರು. ರಾಜ್ಯದ ಎಲ್ಲ ತಾಲ್ಲುಕುಗಳಲ್ಲಿನ ಮಳೆ-ಬೆಳೆ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಬಂದು ಬಳಿಕ ಅವುಗಳನ್ನು ಆಧರಿಸಿ ಬರದ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಸಚಿವ ಹೇಳಿದರು.

ಮಂಡ್ಯ: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವೆ ಮುಗಿಯದ ಕೋಳಿ ಜಗಳ ಮಾರಾಯ್ರೇ. ಸಚಿವ ಮಾಧ್ಯಮದವರೊಂದಿಗೆ ಮಾತಾಡುವಾಗ ಕುಮಾರಸ್ವಾಮಿ ಪ್ರಸ್ತಾಪ ಅದ್ಹೇಗೋ ಉದ್ಭವಿಸಿಬಿಡುತ್ತದೆ. ಇವತ್ತ್ತು ಮಂಡ್ಯ ನಗರದಲ್ಲಿ ರೈತರು ತಮ್ಮ ಉತ್ಪಾನೆಗಳು ಮಾರುವುದು, ಕಡಿಮೆ ನೀರು ಬಳಸಿ ಹೆಚ್ಚು ಫಸಲು ತೆಗೆಯುವುದು, ಅವರು ಬಳಸಬೇಕಾದ ಉಪಕರಣಗಳು ಮೊದಲಾದವುಗಳ ಬಗ್ಗೆ ಒಂದು ಅತ್ಯುತ್ತಮವಾದ ಕಾರ್ಯಗಾರ (workshop) ನಡೆದಿದೆ, ಅಧಿಕಾರಿಗಳು ಕಾರ್ಯಕ್ರಮ ಸಾಧ್ಯವಾಗಿಸಲು ಬಹL ಶ್ರಮಪಟ್ಟಿದ್ದಾರೆ, ದಯವಿಟ್ಟು ಉತ್ತಮ ಕವರೇಜ್ ನೀಡಿ ಅಂತ ಮಾಧ್ಯಮಗಳಿಗೆ ವಿನಂತಿಸಿದರು. ಪತ್ರಕರ್ತರೊಬ್ಬರು ರೈತರ ವಿಷಯದಲ್ಲಿ ಕುಮಾರಸ್ವಾಮಿ ಮಾಡಿದ ಕಾಮೆಂಟ್ ಬಗ್ಗೆ ಹೇಳಿದಾಗ, ಸಿದ್ದರಾಮಯ್ಯ ಸರ್ಕಾರ ಆಡಳಿತ ನಡೆಸುತ್ತಿರೋದು ರೈತರಿಗೆ ಮತ್ತು ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು; ಕುಮಾರಸ್ವಾಮಿ ಅಥವಾ ಬಿಜೆಪಿಯವರು ಹೇಳಿದಂತೆ ಕೇಳಲು ಅಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು. ಮೋಡ ಬಿತ್ತನೆ (cloudseeding) ಪ್ರಸ್ತಾಪದ ಬಗ್ಗೆ ಮಾತಾಡಿದ ಅವರು, ಹಿಂದಿನ ಪ್ರಯತ್ನಗಳು ವಿಫಲವಾಗಿರುವುದರಿಂದ ಸದ್ಯಕ್ಕೆ ಸರ್ಕಾರಕ್ಕೆ ಆ ಯೋಚನೆ ಇಲ್ಲ ಎಂದು ಹೇಳಿದರು. ರಾಜ್ಯದ ಎಲ್ಲ ತಾಲ್ಲುಕುಗಳಲ್ಲಿನ ಮಳೆ-ಬೆಳೆ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಬಂದು ಬಳಿಕ ಅವುಗಳನ್ನು ಆಧರಿಸಿ ಬರದ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ