Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಲಕ್ಷ್ಮಿ ಲಾಂಚ್ ಕಾರ್ಯಕ್ರಮಕ್ಕೆ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿರುವ ಯತೀಂದ್ರ ಸಿದ್ದರಾಮಯ್ಯಗೆ ಲೋಕ ಸಭಾ ಚುನಾವಣೆಯ ಮೇಲೆ ಕಣ್ಣಿದೆಯಾ?

ಗೃಹಲಕ್ಷ್ಮಿ ಲಾಂಚ್ ಕಾರ್ಯಕ್ರಮಕ್ಕೆ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿರುವ ಯತೀಂದ್ರ ಸಿದ್ದರಾಮಯ್ಯಗೆ ಲೋಕ ಸಭಾ ಚುನಾವಣೆಯ ಮೇಲೆ ಕಣ್ಣಿದೆಯಾ?

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 28, 2023 | 7:52 PM

ಸಿದ್ದಾಮಯ್ಯನರ ಕ್ಷೇತ್ರವನ್ನು ಯತೀಂದ್ರ ನೋಡಿಕೊಳ್ಳುತ್ತಿರೋದು ಗೊತ್ತಿರುವ ಸಂಗತಿಯೇ. ಗೃಹಲಕ್ಷ್ಮಿ ಲಾಂಚ್ ಕಾರ್ಯಕ್ರಮನ್ನು ಮೈಸೂರಲ್ಲಿ ಮಾಡಲು ಮತ್ತೊಂದು ಕಾರಣವೂ ಇದೆ. ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಯತೀಂದ್ರರನ್ನು ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿಸುವ ಯೋಚನೆ ಸಿದ್ದರಾಮಯ್ಯ ಜೊತೆ ಹೈಕಮಾಂಡ್ ಗೂ ಇರುವಂತಿದೆ. ಹಾಗಾಗೇ ಈ ಪಾಟಿ ತಯಾರಿ!

ಮೈಸೂರು: ನಾಡಿನ ಮುಖ್ಯಮಂತ್ರಿಯ ಮಗ ಅಂದ್ರೆ ಸುಮ್ನೇನಾ? ಇಲ್ನೋಡಿ, ಮುಖ್ಯಮಂತ್ರಿ ಸಿದ್ದರಾಮಯಯ್ಯ (Siddaramaiah) ಅವರ ಮಗ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಹಿಂದೆ ಕಾರ್ಯಕರ್ತರ ದಂಡು! ಈಗಾಗಲೇ ವರದಿಯಾಗಿರುವಂತೆ ಬುಧವಾರ ಗೃಹಲಕ್ಷ್ಮಿ ಲಾಂಚ್ ಕಾರ್ಯಕ್ರಮ (Gruha Lakshmi launch programme) ಮೈಸೂರಲ್ಲಿ ನಡೆಯಲಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಅದ್ದೂರಿ ಮತ್ತು ಬಹತ್ ಪ್ರಮಾಣದಲ್ಲಿ ನಡೆಯಲಿದ್ದು ಅದರ ಉಸ್ತುವಾರಿಯನ್ನು ಯತೀಂದ್ರ ನೋಡುಕೊಳ್ಳುತ್ತಿದ್ದಾರೆ. ನಿಸ್ಸಂದೇಹವಾಗಿ ಅವರು ಬಹಳ ಮುತುವರ್ಜಿಯಿಂದ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಸಿದ್ದಾಮಯ್ಯನರ ಕ್ಷೇತ್ರವನ್ನು ಯತೀಂದ್ರ ನೋಡಿಕೊಳ್ಳುತ್ತಿರೋದು ಗೊತ್ತಿರುವ ಸಂಗತಿಯೇ. ಗೃಹಲಕ್ಷ್ಮಿ ಲಾಂಚ್ ಕಾರ್ಯಕ್ರಮನ್ನು ಮೈಸೂರಲ್ಲಿ ಮಾಡಲು ಮತ್ತೊಂದು ಕಾರಣವೂ ಇದೆ. ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಯತೀಂದ್ರರನ್ನು ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿಸುವ ಯೋಚನೆ ಸಿದ್ದರಾಮಯ್ಯ ಜೊತೆ ಹೈಕಮಾಂಡ್ ಗೂ ಇರುವಂತಿದೆ. ಹಾಗಾಗೇ ಈ ಪಾಟಿ ತಯಾರಿ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ