ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಾರದ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಅಸಮಾಧಾನ!
ಮೂಲಗಳ ಪ್ರಕಾರ ಅವರು ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿಗೆ ತೆರಳಿದ್ದರಂತೆ. ಅವರ ವರ್ತನೆಯಿಂದ ಸಹನೆ ಕಳೆದುಕೊಂಡ ಪ್ರಜ್ವಲ್ ಕಚೇರಿಯೊಳಗೆ ಹೋಗಿ ಅಲ್ಲಿದ್ದ ಬೇರೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಾಪ, ಜಿಲ್ಲಧಿಕಾರಿಗಳ ಕಚೇರಿ ಸಿಬ್ಬಂದಿಯಾದರೂ ಏನು ಮಾಡಿಯಾರು? ಅವರೊಂದಿಗೆ ಕೋಪದಲ್ಲಿ ಮಾತಾಡಿ, ಹೊರಬಂದ ಪ್ರಜ್ವಲ್ ಪ್ರತಿಭಟನೆ ಮುಂದುವರಿಸಿದರು.
ಹಾಸನ: ಹೆಚ್ ಡಿ ರೇವಣ್ಣ (HD Revanna) ಕುಟುಂಬ ಮತ್ತು ಹಾಸನ ಜಿಲ್ಲೆಯ ಅಧಿಕಾರಿಗಳ ನಡುವೆ ಎಣ್ಣೆ-ಸೀಗೇಕಾಯಿ ಸಂಬಂಧ ಇರುವಂತಿದೆ. ರೇವಣ್ಣ ಅವರು ಅಧಿಕಾರಿಗಳ ಮೇಲೆ ರೇಗಾಡುತ್ತಿರುತ್ತಾರೆ. ಇವತ್ತು ಅವರ ಮಗ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಹಾಸನ ಜಿಲ್ಲಾಧಿಕಾರಿ ಸಿ ಸತ್ಯಭಾಮಾ (Satyabhama C) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸನ್ನಿವೇಶ ಸೃಷ್ಟಿಯಾಯಿತು. ವಿಷಯವೇನೆಂದರೆ, ಪ್ರಜ್ವಲ್ ಸಾರ್ವಜನಿಕರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಶುರುವಾಗಿ ಸಾಕಟ್ಟು ಸಮಯ ಕಳೆದರೂ ಜಿಲ್ಲಾಧಿಕಾರಿ ಸತ್ಯಭಾಮ ಪ್ರತಿಭಟನೆಕಾರರಿಂದ ಮನವಿ ಪತ್ರ ಸ್ವೀಕರಿಸಲು ಬರಲಿಲ್ಲ. ಮೂಲಗಳ ಪ್ರಕಾರ ಅವರು ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿಗೆ ತೆರಳಿದ್ದರಂತೆ. ಅವರ ವರ್ತನೆಯಿಂದ ಸಹನೆ ಕಳೆದುಕೊಂಡ ಪ್ರಜ್ವಲ್ ಕಚೇರಿಯೊಳಗೆ ಹೋಗಿ ಅಲ್ಲಿದ್ದ ಬೇರೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಾಪ, ಜಿಲ್ಲಧಿಕಾರಿಗಳ ಕಚೇರಿ ಸಿಬ್ಬಂದಿಯಾದರೂ ಏನು ಮಾಡಿಯಾರು? ಅವರೊಂದಿಗೆ ಕೋಪದಲ್ಲಿ ಮಾತಾಡಿ, ಹೊರಬಂದ ಪ್ರಜ್ವಲ್ ಪ್ರತಿಭಟನೆ ಮುಂದುವರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ