ಮುಖ್ಯಮಂತ್ರಿ ಸ್ಥಾನಕ್ಕೆ ನಮ್ಮ ಪಕ್ಷದಲ್ಲೇ ಸಾಕಷ್ಟು ಅಭ್ಯರ್ಥಿಗಳಿದ್ದಾರೆ, ಸಿದ್ದರಾಮಯ್ಯನವರನ್ನು ಕರೆತರುವುದು ಬೇಕಿಲ್ಲ: ಯತ್ನಾಳ್
ಶ್ರೀರಾಮುಲು ತಾವು ಬೇಕಾದರೆ ಮುಖ್ಯಮಂತ್ರಿಯಾಗ್ತೀನಿ ಅಂತ ಹೇಳಲಿ, ಆದರೆ ಸಿದ್ದರಾಮಯ್ಯನವರನ್ನು ಬಿಜೆಪಿಗೆ ಕರೆತಂದು ಮುಖ್ಯಮಂತ್ರಿ ಮಾಡುವ ಅಗತ್ಯ ಮತ್ತು ಅನಿವಾರ್ಯತೆ ಇಲ್ಲ, ಅ ಸ್ಥಾನಕ್ಕೆ ನಮ್ಮಲ್ಲೇ ಬೇಕಾದಷ್ಟು ಅಭ್ಯರ್ಥಿಗಳಿದ್ದಾರೆ ಎಂದು ಯತ್ನಾಳ್ ಹೇಳಿದರು.
ಬೆಂಗಳೂರು: ಬಿಜೆಪಿಯ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ಸಚಿವರಾದ ಜೆಸಿ ಮಾಧುಸ್ವಾಮಿ (JC Madhu Swamy) ಮತ್ತು ಬಿ ಶ್ರೀರಾಮುಲು (B Sriramulu) ಅವರ ಹೇಳಿಕೆಗಳಿಗೆ ಹೆಚ್ಚಿನ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಶ್ರೀರಾಮುಲು ತಾವು ಬೇಕಾದರೆ ಮುಖ್ಯಮಂತ್ರಿಯಾಗ್ತೀನಿ ಅಂತ ಹೇಳಲಿ, ಆದರೆ ಸಿದ್ದರಾಮಯ್ಯನವರನ್ನು ಬಿಜೆಪಿಗೆ ಕರೆತಂದು ಮುಖ್ಯಮಂತ್ರಿ ಮಾಡುವ ಅಗತ್ಯ ಮತ್ತು ಅನಿವಾರ್ಯತೆ ಇಲ್ಲ, ಅ ಸ್ಥಾನಕ್ಕೆ ನಮ್ಮಲ್ಲೇ ಬೇಕಾದಷ್ಟು ಅಭ್ಯರ್ಥಿಗಳಿದ್ದಾರೆ ಎಂದು ಯತ್ನಾಳ್ ಹೇಳಿದರು.