ರಾಷ್ಟ್ರಧ್ವಜ ಹಾರಿಸಿದಕ್ಕಲ್ಲ, ಹನುಮ ಧ್ವಜ ತೆರವುಗೊಳಿಸಿದ್ದರ ವಿರುದ್ಧ ನಮ್ಮ ಹೋರಾಟ: ಸಿಟಿ ರವಿ, ಬಿಜೆಪಿ ನಾಯಕ

ಅರುಣ್​ ಕುಮಾರ್​ ಬೆಳ್ಳಿ

Updated on: Jan 29, 2024 | 1:05 PM

ಕೆರಗೋಡುನಲ್ಲಿ ಧ್ವಜಸ್ತಂಭ ಇರೋದು ಸರ್ಕಾರಿ ಜಾಗ ಅಂತ ಸರ್ಕಾರ ಈಗ ಹೇಳುತ್ತಿದೆ, ಅದರೆ ಹಿಂದೂ ಕಾರ್ಯಕರ್ತರು ಚಂದಾ ಎತ್ತಿ ಧ್ವಜಸ್ತಂಭದ ನಿರ್ಮಾಣ ಮಾಡಿದ್ದಾರೆ, ಹಿಂದೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಆಗಿನ ಕಾಂಗ್ರೆಸ್ ಸರ್ಕಾರ ತಮ್ಮ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿ ಕೊಂದು ಹಾಕಿತ್ತು ಎಂದು ರವಿ ಆವೇಶದಲ್ಲಿ ಹೇಳಿದರು

ಮಂಡ್ಯ: ಕೆರಗೋಡುನಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದನ್ನು ವಿರೋಧಿಸಿ ಸಿಟಿ ರವಿ (CT Ravi) ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪಾದಯಾತ್ರೆ (padayatra) ನಡೆಸುತ್ತಿದ್ದು ಟಿವಿ9 ವರದಿಗಾರ ಮಾಜಿ ಸಚಿವರನ್ನು ಮಾತಾಡಿಸಿದ್ದಾರೆ. ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ (DC office) ಮುತ್ತಿಗೆ ಹಾಕಿದ ಬಳಿಕ ಮುಂದಿನ ಹೋರಾಟವನ್ನು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ನಿರ್ಧರಿಸಲಿದ್ದೇವೆ ಎಂದ ರವಿ, ರಾಷ್ಟ್ರಧ್ವಜ ಹಾರಿಸಿದ್ದಕ್ಕೆ ಬಿಜೆಪಿಯ ಅಭ್ಯಂತರವಿಲ್ಲ, ರಾಷ್ಟ್ರಧ್ಚಜ ಸರ್ವಮಾನ್ಯ, ಅದಕ್ಕೆ ಗೌರವ ಸಲ್ಲಿಸುವುದನ್ನು ತಾವು ಕಾಂಗ್ರೆಸ್ ನಿಂದ ಕಲಿಯಬೇಕಿಲ್ಲ, ತಮ್ಮ ಹೋರಾಟವಿರೋದು ಹನುಮ ಧ್ವಜವನ್ನು ತೆರವುಗೊಳಿಸಿರುವುದರ ವಿರುದ್ಧ ಎಂದು ಹೇಳಿದರು.

ಕೆರಗೋಡುನಲ್ಲಿ ಧ್ವಜಸ್ತಂಭ ಇರೋದು ಸರ್ಕಾರಿ ಜಾಗ ಅಂತ ಸರ್ಕಾರ ಈಗ ಹೇಳುತ್ತಿದೆ, ಅದರೆ ಹಿಂದೂ ಕಾರ್ಯಕರ್ತರು ಚಂದಾ ಎತ್ತಿ ಧ್ವಜಸ್ತಂಭದ ನಿರ್ಮಾಣ ಮಾಡಿದ್ದಾರೆ, ಹಿಂದೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಆಗಿನ ಕಾಂಗ್ರೆಸ್ ಸರ್ಕಾರ ತಮ್ಮ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿ ಕೊಂದು ಹಾಕಿತ್ತು ಎಂದು ರವಿ ಆವೇಶದಲ್ಲಿ ಹೇಳಿದರು. ಸರ್ಕಾರ ನಿಷೇಧಾಜ್ಞೆ ಹೇರಿರಬಹುದು, ಆದರೆ ಮಂಡ್ಯದ ಜನ ಲಾಠಿಗೆ, ಗುಂಡಿಗೆ ಹೆದರುವವರಲ್ಲ, ಹಿಂದೂ ವಿರೋಧಿ ಸರ್ಕಾರದ ವಿರುದ್ಧ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.