ಬೆಳಗಾವಿ ಅಧಿವೇಶನ: ಸ್ಪೀಕರ್ ಖಾದರ್ ಅವರು ಜಮೀರ್ ಅಹ್ಮದ್​ರನ್ನು ​ಉಚ್ಚಾಟಿಸಿದ್ದರೆ ಗೌರವ ಮತ್ತಷ್ಟು ಹೆಚ್ಚುತಿತ್ತು: ಬಸನಗೌಡ ಯತ್ನಾಳ್

|

Updated on: Dec 11, 2023 | 5:30 PM

ಜಮೀರ್ ಅವರನ್ನು ಉಚ್ಚಾಟನೆ ಮಾಡುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ ಬರ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಲೇಬೇಕಿದೆ, ಸರ್ಕಾರ ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಬೆಳಗಾವಿ ಅಧಿವೇಶನವನ್ನು ಒಂದು ವಾರದ ಮಟ್ಟಿಗೆ ವಿಸ್ತರಿಸಲಿ ಎಂದು ಹೇಳಿದರು.

ಬೆಳಗಾವಿ: ಜಮೀರ್​ ಅಹ್ಮದ್ (Zameer Ahmed) ಸ್ಪೀಕರ್ ಹುದ್ದೆಗೆ ಅವಮಾನ ಮಾಡಿದ್ದಾರೆ ಅಂತ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ನಡೆಸುತ್ತಿರುವ ಧರಣಿ ಜೋರು ಹಿಡಿದಿದ್ದು ಮುಗಿಯುವ ಲಕ್ಷಣಗಳಿಲ್ಲ. ಅಧೀವೇಶನದ ಲಂಚ್ ಟೈಮ್ ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಬರ ಮತ್ತು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಬೇಕಿರುವ ಅರಿವು ತಮಗಿದೆ, ಅದರೆ ಅದಕ್ಕೂ ಮೊದಲು ಸಭಾಧ್ಯಕ್ಷನ ಪೀಠದ ಪಾವಿತ್ರ್ಯತೆಯನ್ನು (sanctity of the Chair) ಒಂದು ಕೋಮಿಗೆ ಹೋಲಿಸಿ ಅಪಮಾನ ಮಾಡಿರುವ ಜಮೀರ್ ಅಹ್ಮದ್ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಹೇಳಿದರು. ಹಿಂದೆ ಲೋಕಸಭೆಯಲ್ಲಿ ದಿವಂಗತ ಜಾರ್ಜ್​ ಫರ್ನಾಂಡೀಸ್ (George Fernandes) ಅವರನ್ನು ಹೇಗೆ ಮೂಲೆಮಾಡಲಾಗಿತ್ತು ಅನ್ನೋದನ್ನು ಉಲ್ಲೇಖಿಸಿದ ಯತ್ನಾಳ್ ಜಮೀರ್​ ವಿಷಯದಲ್ಲಿ ಸಭಾಧ್ಯಕ್ಷರು ಜಮೀರ್ ಆಡಿದ ಮಾತು ತಪ್ಪು ಅಂತಅ ಹೇಳಿ ಅವರನ್ನು ಉಚ್ಚಾಟಿಸದಿರುವುದು ನಿಜಕ್ಕೂ ದುರ್ದೈವದ ಸಂಗತಿ ಅಂತ ಹೇಳಿದರು. ಸ್ಪೀಕರ್ ಹುದ್ದೆ ಜಾತಿ ಆಧಾರಿತ ಆಗಿರಲ್ಲ, ಅವರು ಎಲ್ಲ 224 ಶಾಸಕರಿಗೆ ಸಭಾಧ್ಯಕ್ಷರಾಗಿರುತ್ತಾರೆ ಆದರೆ, ಕೇವಲ ಮುಸಲ್ಮಾನರನ್ನು ಓಲೈಸಲು ಜಮೀರ್ ಪೀಠಕ್ಕಿರುವ ಗೌರವವನ್ನು ಹಾಳು ಮಾಡಿದ್ದ್ದಾರೆ ಎಂದು ಯತ್ನಾಳ್ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us on