ಬೆಳಗಾವಿ ಅದಿವೇಶನ: ಸ್ಪೀಕರ್ ಯುಟಿ ಖಾದರ್ ಹೇಳುವ ಮಾರ್ಮಿಕ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ

ಬೆಳಗಾವಿ ಅದಿವೇಶನ: ಸ್ಪೀಕರ್ ಯುಟಿ ಖಾದರ್ ಹೇಳುವ ಮಾರ್ಮಿಕ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 11, 2023 | 4:11 PM

Belagavi Assembly Winter Session: ವಿಧಾನ ಸಭೆಯ ಸ್ಪೀಕರ್ ಆಗಿರುವ ತನಗೆ ಆಡಳಿತ ಶಾಸಕರು ಅಥವಾ ವಿರೋಧ ಪಕ್ಷದ ಶಾಸಕರು ಮುಖ್ಯವಲ್ಲ, ತನಗೆ ರಾಜ್ಯದ ಜನತೆ ಮುಖ್ಯ ಅಂತ ಯುಟಿ ಖಾದರ್ ಹೇಳುವ ಮಾತು ಕೇವಲ ಸದನದಲ್ಲಿ ಗಲಾಟೆ ಮಾಡುತ್ತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ಶಾಸಕರಷ್ಟೇ ಅಲ್ಲ, ಕಾಂಗ್ರೆಸ್ ನಾಯಕರಿಗೂ ನಾಟುತ್ತದೆ. ಅವರ ಮಾತಿಗೆ ಬಿಜೆಪಿ ಶಾಸಕರು ನಿರುತ್ತರರಾಗುತ್ತಾರೆ.

ಬೆಳಗಾವಿ: ವಿಧಾನ ಸಭಾಧ್ಯಕ್ಷ ಯುಟಿ ಖಾದರ್ (UT Khader) ಮೆತ್ತಗೆ ಮಾತಾಡೋದು ನಿಜವಾದರೂ ಚಾಟಿ ಬೀಸಿದರೆ ಮುಟ್ಟಿ ನೋಡಿಕೊಳ್ಳುವಂತೆ ಬೀಸುತ್ತಾರೆ. ಸಚಿವ ಜಮೀರ್ ಅಹ್ಮದ್ ರನ್ನು (Zameer Ahmed) ಸದನದಿಂದ ವಜಾ ಮಾಡಬೇಕೆಂದು ಬಿಜೆಪಿ ಶಾಸಕರು (BJP MLAs) ಇಂದು ಸದನದ ಬಾವಿಗಿಳಿದು ಪ್ರತಿಭಟಿಸುತ್ತಾರೆ. ಅವರ ಪ್ರತಿಭಟನೆಯ ನಡುವೆಯೇ ಸಭಾಧ್ಯಕ್ಷರು ಕಡ್ಡಾಯ ಸೇವೆ ತಿದ್ದುಪಡಿ ವಿಧೇಯಕವನ್ನು ಧ್ವನಿಮತದಿಂದ ಪಾಸು ಮಾಡಿಸುತ್ತಾರೆ. ನಂತರ ಬಿಜೆಪಿ ಶಾಸಕರನ್ನು ಉದ್ದೇಶಿಸಿ ಮಾತಾಡುವ ಸ್ಪೀಕರ್, ಸಚಿವ ಜಮೀರ್ ಹೊರರಾಜ್ಯದಲ್ಲಿ ಮಾತಾಡಿರುವುದಕ್ಕೆ ತಾನು ಹೇಳಬೇಕಾಗಿರುವುದನ್ನು ಹೇಳಿಯಾಗಿದೆ ಮತ್ತು ಸಚಿವರ ಸಹ ಸಷ್ಟನೆ ನೀಡಿದ್ದಾರೆ. ಶುಕ್ರವಾರದಂದು ವಿಧೇಯಕಗಳ ಮಂಡನೆ ಮಾಡುವ ಸಂಗತಿ ಪ್ರಸ್ತಾಪಿಸಿದಾಗ, ಸೋಮವಾರ ಅವುಗಳನ್ನು ಪಾಸುಮಾಡಲು ಸಹಕರಿಸಿರವುದಾಗಿ ಹೇಳಿದ್ದ ವಿರೋಧ ಪಕ್ಷದ ನಾಯಕರು ಯಾವುದೇ ನೋಟೀಸ್ ನೀಡದೆ ಹೀಗೆ ಪ್ರತಿಭಟನೆ ಮಡೋದು ಸರಿಯಲ್ಲ ಎಂದು ಖಾದರ್ ಹೇಳುತ್ತಾರೆ.

ರಾಜ್ಯದ ಜನತೆಯ ಪ್ರಯೋಜನಕ್ಕಾಗಿ ಅಸೆಂಬ್ಲಿ ಅಧಿವೇಶನ ನಡೆಸಲಾಗುತ್ತದೆ, ಬರ ಮತ್ತು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಬೇಕಿದೆ, ಸದನದ ಕಾರ್ಯಕಲಾಪಕ್ಕೆ ಹೀಗೆ ಅಡ್ಡಿಯುಂಟು ಮಾಡಿದರೆ, ಅಧಿವೇಶನ ನಡೆಸಲು ಖರ್ಚಾಗುವ ರೂ. 20 ಕೋಟಿಯನ್ನು ಸುಖಾಸುಮ್ಮನೆ ವ್ಯರ್ಥಮಾಡಿದಂತಾಗುತ್ತದೆ ಎಂದು ಸ್ಪೀಕರ್ ಖಾದರ್ ಹೇಳಿದಾಗ, ಬಿಜೆಪಿ ಶಾಸಕರ ಗಲಾಟೆ ಕಡಿಮೆಯಾಗುತ್ತದೆ,

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ