ಜನಾರ್ಧನ ರೆಡ್ಡಿಗೆ ಶಿಕ್ಷೆ; ನ್ಯಾಯಾಂಗ ವ್ಯವಸ್ಥೆಯಲ್ಲಿ ನಮ್ಮ ವಿಶ್ವಾಸ ಇಮ್ಮಡಿಗೊಂಡಿದೆ: ಎಸ್ ಅರ್ ಹಿರೇಮಠ

Updated on: May 06, 2025 | 8:05 PM

ಜನಾರ್ಧನ ರೆಡ್ಡಿ ಶಿಕ್ಷೆ ಸಿಗವಂತಾಗಲು ತಾವು ನಡೆಸಿದ ಹೋರಾಟ ಬೇರೆ; ಅದರೆ ಯಶಸ್ಸಿನ ಸಿಂಹಪಾಲು ಹೈದರಾಬಾದ್ ಸಿಬಿಐ ಕಚೇರಿಯಲ್ಲಿ ಡಿವೈಎಸ್​ಪಿ ಯಾಗಿ ಕಾರ್ಯ ನಿರ್ವಹಿಸುತ್ತಿರುವ ಅರ್ ಎಂ ಖಾನ್ ಮತ್ತು ಹೈದರಾಬಾದ್ ಮತ್ತು ಬೆಂಗಳೂರು ಎರಡೂ ವಿಭಾಗಗಳ ಸಿಬಿಐ ಮುಖ್ಯಸ್ಥರಾಗಿರುವ ಲಕ್ಷ್ಮಿನಾರಾಯಣ ಅವರಿಗೆ ಸಲ್ಲುತ್ತದೆ ಎಂದು ಎಸ್ ಆರ್ ಹಿರೇಮಠ ಹೇಳಿದರು.

ಬೆಂಗಳೂರು, ಮೇ 6: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಾಲಿ ಜನಾರ್ಧನ ರೆಡ್ಡಿಯವರಿಗೆ 7-ವರ್ಷ ಸಿಗುವಂತಾಗಲು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ (social activist SR Hiremath) ಅವರು ನಡೆಸಿದ ಹೋರಾಟವೂ ಮುಖ್ಯ ಕಾರಣ ಎನ್ನಲಾಗಿದೆ. ನಮ್ಮ ವರದಿಗಾರನಿಗೆ ಪ್ರಥಮ ಪ್ರತಿಕ್ರಿಯೆ ನೀಡಿರುವ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿ ಅನೇಕ ಪ್ರಕರಣಗಳು ವಿಚಾರಣೆಗಾಗಿ ಕಾಯುತ್ತಿವೆ, ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಮಹತ್ವದ ಪ್ರಕರಣಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಲಂಗುಲಾಗಾಮಿಲ್ಲದೆ, ಸ್ವೇಚ್ಛೆಯಿಂದ, ಬೇಜವಾಬ್ದಾರಿಯಿಂದ ಕೊಳ್ಳೆ ಹೊಡೆದ ಗಣಿ ಮಾಫಿಯಾದವರಿಗೆ, 15 ವರ್ಷಗಳ ನಂತರವೂ ಶಿಕ್ಷೆಯಾಗುತ್ತದೆ ಎಂದರೆ ನ್ಯಾಯಾಂಗ ವ್ಯವಸ್ಥೆ ಮೇಲಿರುವ ನಮ್ಮ ವಿಶ್ವಾಸ ಇಮ್ಮಡಿಗೊಂಡಿದೆ ಎಂದರು.

ಇದನ್ನೂ ಓದಿ: OMC Mining Case, ಜನಾರ್ದನ್​ ರೆಡ್ಡಿಗೆ ಜಾಮೀನು ಸಿಗುವ ಸಾಧ್ಯತೆ: ವಕೀಲ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ