ಐಪಿಎಲ್ ಮ್ಯಾಚ್ ನೋಡಲು ಹೋಗುವ ಕ್ರಿಕೆಟ್ ಅಭಿಮಾನಿಗಳೇ ಈ ಮಹಿಳೆಯ ಮಾತು ಕೇಳಿ

Updated on: Mar 30, 2026 | 6:17 PM

ಈಗಾಗಲೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಟೂರ್ನಿ 2026ಕ್ಕೆ ಚಾಲನೆ ಸಿಕ್ಕಿದೆ. ಆರ್​​ಸಿಬಿ ಹಾಗೂ ಸನ್ ರೈಸರ್ಸ್​ ಉದ್ಘಾಟನಾ ಪಂದ್ಯವಾಡಿದ್ದು, ತವರಿನ ಅಂಗಳದಲ್ಲಿ ಆರ್​​ಸಿಬಿ ಶುಭಾರಂಭ ಮಾಡಿದೆ. ಇನ್ನು ಕಾಲ್ತುಳಿತ ದುರಂತ ಸಂಬಂಧ ಪೊಲೀಸರು ಹಾಗೂ ಕೆಎಸ್​ಸಿಯಿಂದ ಯಾವುದೇ ಗೊಂದಲಗಳು ಆಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಪ್ರೇಕ್ಷಕರಿಗೆ ಆಗಮನ ಮತ್ತು ನಿರ್ಗಮನದಲ್ಲಿ ಯಾವುದೇ ನೂಕುನುಗ್ಗಲು ಆಗಿಲ್ಲ. ಆದ್ರೆ, ಕಳ್ಳರು ಮಾತ್ರ ತಮ್ಮ ಕೈಚಳ ತೋರಿಸಿದ್ದಾರೆ.

ಬೆಂಗಳೂರು, (ಮಾರ್ಚ್ 30): ಈಗಾಗಲೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಟೂರ್ನಿ 2026ಕ್ಕೆ ಚಾಲನೆ ಸಿಕ್ಕಿದೆ. ಆರ್​​ಸಿಬಿ ಹಾಗೂ ಸನ್ ರೈಸರ್ಸ್​ ಉದ್ಘಾಟನಾ ಪಂದ್ಯವಾಡಿದ್ದು, ತವರಿನ ಅಂಗಳದಲ್ಲಿ ಆರ್​​ಸಿಬಿ ಶುಭಾರಂಭ ಮಾಡಿದೆ. ಇನ್ನು ಕಾಲ್ತುಳಿತ ದುರಂತ ಸಂಬಂಧ ಪೊಲೀಸರು ಹಾಗೂ ಕೆಎಸ್​ಸಿಯಿಂದ ಯಾವುದೇ ಗೊಂದಲಗಳು ಆಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಪ್ರೇಕ್ಷಕರಿಗೆ ಆಗಮನ ಮತ್ತು ನಿರ್ಗಮನದಲ್ಲಿ ಯಾವುದೇ ನೂಕುನುಗ್ಗಲು ಆಗಿಲ್ಲ. ಆದ್ರೆ, ಕಳ್ಳರು ಮಾತ್ರ ತಮ್ಮ ಕೈಚಳ ತೋರಿಸಿದ್ದಾರೆ.

ಹೌದು…ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಮತ್ತು ಹೈದರಾಬಾದ್ ನಡುವಿನ ಉದ್ಘಾಟನಾ ಪಂದ್ಯದ ವೇಳೆ ಕ್ರಿಕೆಟ್ ಪ್ರೇಮಿಗಳ ಜೇಬಿಗೆ ಕಳ್ಳರು ಕನ್ನ ಹಾಕಿದ್ದಾರೆ. ಪಂದ್ಯ ನೋಡಲು ಹೋಗಿದ್ದ ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ತಮ್ಮ ಪತಿಯ ಮೊಬೈಲ್ ಫೋನ್ ಕೂಡ ಕಳ್ಳತನವಾಗಿರುವುದಾಗಿ ನೋವು ಹೇಳಿಕೊಂಡಿದ್ದಾರೆ. ಕ್ರಿಕೆಟ್ ನೋಡಲು ಬರುವವರು ಹುಷಾರಾಗಿರಿ, ಇಲ್ಲಿ ಸಂಭ್ರಮದ ನಡುವೆಯೇ ಮೊಬೈಲ್ ಕಳ್ಳತನ ಮಾಡುವ ದೊಡ್ಡ ಜಾಲವೇ ಇದೆ ಎಂದು ಮಹಿಳೆ ಐಪಿಎಲ್ ಅಭಿಮಾನಿಗಳಿಗೆ ಹುಷಾರಾಗಿರಲು ಕರೆ ನೀಡಿದ್ದಾರೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More