ಬಾಣಸವಾಡಿಯಲ್ಲಿ ಬೆಂಕಿಗಾಹುತಿಯಾದ 4-ಮಹಡಿ ಕಟ್ಟಡ ಮಾಲೀಕರ ರೋದನೆ ನೋಡುಗರಲ್ಲಿ ಕಸಿವಿಸಿ ಉಂಟು ಮಾಡುತ್ತದೆ

ಬಾಣಸವಾಡಿಯಲ್ಲಿ ಬೆಂಕಿಗಾಹುತಿಯಾದ 4-ಮಹಡಿ ಕಟ್ಟಡ ಮಾಲೀಕರ ರೋದನೆ ನೋಡುಗರಲ್ಲಿ ಕಸಿವಿಸಿ ಉಂಟು ಮಾಡುತ್ತದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 13, 2023 | 11:22 AM

ಬೆಂಕಿಗಾಹುತಿಯಾದ 4-ಮಹಡಿಯ ಮಾಲೀಕ ಶಂಕರ್ ಮತ್ತವರ ಧರ್ಮಪತ್ನಿಯ ರೋದನೆ, ದಃಖ ಮತ್ತು ಯಾತನೆ ಅರ್ಥವಾಗುವಂಥದ್ದೇ. ಬಾಣಸವಾಡಿಯಂಥ ಪಾಶ್ ಏರಿಯಾದಲ್ಲಿ ಅದೂ ರಿಂಗ್ ರೋಡ್ ಪಕ್ಕ ಪ್ರಾಪರ್ಟಿ ಹೊಂದುವುದು ಸಾಮಾನ್ಯ ಸಂಗತಿಯಲ್ಲ. ಹಲವು ಕೋಟಿ ಮೌಲ್ಯದ ಅಸ್ತಿ ಸುಟ್ಟುಕರಕಲಾಗಿರುವ ಸ್ಥಿತಿಯಲ್ಲಿ ನೋಡಿದಾಗ ಅವರಿಗೆ ಹೇಗಾಗಿರಬೇಡ?

ಬೆಂಗಳೂರು: ಎಂಥವರಲ್ಲೂ ಸಂಕಟ ಮತ್ತು ಸಹಾನುಭೂತಿ ಉಂಟು ಮಾಡುವ ದೃಶ್ಯವಿದು. ದೃಶ್ಯಗಳಲ್ಲಿ ಕಾಣುತ್ತಿರುವವರು ಶಂಕರ್ ಮತ್ತು ಅವರ ಧರ್ಮಪತ್ನಿ. ಬಾಣಸವಾಡಿ ಔಟರ್ ರಿಂಗ್ ರೋಡ್​ನಲ್ಲಿ (Banaswadi Outer Ring Road) ಇಂದು ಬೆಂಕಿಗಾಹುತಿಯಾದ 4-ಮಹಡಿಯ ಮಾಲೀಕ ಶಂಕರ್ (Shankar) ಮತ್ತವರ ಧರ್ಮಪತ್ನಿ. ಅವರ ರೋದನೆ, ದಃಖ ಮತ್ತು ಯಾತನೆ ಅರ್ಥವಾಗುವಂಥದ್ದೇ. ಬಾಣಸವಾಡಿಯಂಥ ಪಾಶ್ ಏರಿಯಾದಲ್ಲಿ ಅದೂ ರಿಂಗ್ ರೋಡ್ ಪಕ್ಕ ಪ್ರಾಪರ್ಟಿ ಹೊಂದುವುದು ಸಾಮಾನ್ಯ ಸಂಗತಿಯಲ್ಲ. ಹಲವು ಕೋಟಿ ಮೌಲ್ಯದ ಅಸ್ತಿ (property worth a few crore rupees) ಸುಟ್ಟುಕರಕಲಾಗಿರುವ ಸ್ಥಿತಿಯಲ್ಲಿ ನೋಡಿದಾಗ ಅವರಿಗೆ ಹೇಗಾಗಿರಬೇಡ? ಶಂಕರ್ ಚಿಕ್ಕಮಗುವಿನಂತೆ ಅಳುತ್ತಿದ್ದಾರೆ. ದಂಪತಿಯೊಂದಿಗೆ ಕನ್ನಡಕ ಧರಿಸಿರುವ ಒಬ್ಬ ಯುವಕನಿದ್ದಾನೆ, ಪ್ರಾಯಶಃ ಅವರ ಮಗನಿರಬಹುದು. ಪೋಷಕರನ್ನು ಸಂತೈಸುವ ಪ್ರಯತ್ನ ಅವನು ಮಾಡುತ್ತಿದ್ದಾನೆ. ಕಟ್ಟಡದ ಎಲ್ಲ 4 ಮಹಡಿಗಳನ್ನು ಬಾಡಿಗೆಗೆ ನೀಡಲಾಗಿತ್ತು. ನೆಲ ಮತ್ತು ಮೊದಲ ಮಹಡಿಯಲ್ಲಿ ಫರ್ನಿಚರ್ ಶೋರೂಮ್, ಎರಡನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಮತ್ತು ಮೇಲಿನ ಎರಡು ಮಹಡಿಗಳನ್ನು ಐಟಿ ಕಂಪನಿಯೊಂದಕ್ಕೆ ಬಾಡಿಗೆ ಕೊಡಲಾಗಿತ್ತು ಎಂದು ಶಂಕರ್ ಹೇಳಿದ್ದಾರೆ. ಕಟ್ಟಡದ ವಿಮೆಮಾಡಿಸಿದ್ದರೆ ಪರಿಹಾರ ಅವರಿಗೆ ಸಿಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ