Padma Awards 2022: ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ತಯಾರಕರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ
ಪ್ರಾತಿನಿಧಿಕ ಚಿತ್ರ

Padma Awards 2022: ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ತಯಾರಕರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ

| Updated By: ganapathi bhat

Updated on: Jan 26, 2022 | 9:16 AM

Padma Bhushan: ಲಸಿಕಾ ಅಭಿಯಾನದಲ್ಲಿ ಮುಖ್ಯವಾಗಿ ಕೆಲಸ ಮಾಡಿದ ಎರಡು ಭಾರತೀಯ ಸಂಸ್ಥೆಗಳು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಹಾಗೂ ಪುಣೆ ಮೂಲದ ಸೆರಂ ಇನ್​ಸ್ಟಿಟ್ಯೂಟ್. ಇದೀಗ ಆ ಎರಡೂ ಸಂಸ್ಥೆಯ ಸಂಸ್ಥಾಪಕರಿಗೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ದೆಹಲಿ: ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಕಂಡುಕೇಳರಿಯದಂತ ಸಂಕಷ್ಟ ಸೃಷ್ಟಿಸಿದ ಕೊರೊನಾ ಎಂಬ ಮಹಾಮಾರಿ. ಕೊವಿಡ್19 ಜಗತ್ತಿನ ಸಮಗ್ರ ಚಟುವಟಿಕೆಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಬುಡಮೇಲು ಮಾಡಿತ್ತು. ಲಾಕ್​ಡೌನ್, ಕ್ವಾರಂಟೈನ್, ವ್ಯಾಕ್ಸಿನ್, ಐಸೋಲೇಷನ್, ವೀಕೆಂಡ್, ನೈಟ್ ಕರ್ಫ್ಯೂ.. ಹೀಗೆ ಹಲವು ವಿಚಾರಗಳು ನಡೆದುಹೋದವು. ಒಂದು ದಿನ ಬಂದ್ ಎಂದರೆ ನಷ್ಟ ಎನ್ನುತ್ತಿದ್ದವರು ತಿಂಗಳುಗಳ ಕಾಲ ಏನೂ ಮಾಡದೆ ಮನೆಯೊಳಗೆ ಕೂರುವಂತಾಯಿತು. ಕೊವಿಡ್ ಎಂಬ ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಹೊರಬರಲು ಜಗತ್ತಿನ ವಿವಿಧ ದೇಶಗಳು ಲಸಿಕೆಯ ಮೊರೆ ಹೋದವು.

ಭಾರತವೂ ಕೂಡ ಲಸಿಕೆ ತಯಾರಿಕೆಯಲ್ಲಿ ಹಿಂದೆ ಬೀಳಲಿಲ್ಲ. ಅಸಲಿಗೆ ಭಾರತವೇ ಲಸಿಕೆ ತಯಾರಿಕೆಯ ವೇಗ ಹೆಚ್ಚಿಸಿ ಅಪಾರ ಪ್ರಮಾಣದ ಲಸಿಕೆ ಪೂರೈಕೆ ಮಾಡಿತು. ಭಾರತದ ಜನರಿಗೆ ಮಾತ್ರವಲ್ಲದೆ ಇತರ ಕೆಲವು ದೇಶಗಳಿಗೆ ಕೂಡ ಭಾರತದಿಂದ ಲಸಿಕೆ ರಫ್ತಾಯಿತು. ಈ ಲಸಿಕಾ ಅಭಿಯಾನದಲ್ಲಿ ಮುಖ್ಯವಾಗಿ ಕೆಲಸ ಮಾಡಿದ ಎರಡು ಭಾರತೀಯ ಸಂಸ್ಥೆಗಳು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಹಾಗೂ ಪುಣೆ ಮೂಲದ ಸೆರಂ ಇನ್​ಸ್ಟಿಟ್ಯೂಟ್. ಇದೀಗ ಆ ಎರಡೂ ಸಂಸ್ಥೆಯ ಸಂಸ್ಥಾಪಕರಿಗೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಭಾರತದ ಲಸಿಕೆ ತಯಾರಕರಿಗೆ ದೇಶದ ಪ್ರತಿಷ್ಠಿತ ಗೌರವವಾದ ಪದ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹೈದರಾಬಾದ್ ಮೂಲದ ಸಂಸ್ಥೆ, ಭಾರತದ ಲಸಿಕೆ ಕೊವ್ಯಾಕ್ಸಿನ್ ಕಂಡುಹಿಡಿದು ತಯಾರು ಮಾಡಿದ ಕೃಷ್ಣ ಎಲ್ಲಾ ಮತ್ತು ಸುಚಿತ್ರಾರಿಗೆ ಪ್ರಶಸ್ತಿ ಪ್ರಕಟವಾಗಿದೆ. ಪೂನಾವಾಲ ಕುಟುಂಬದ ಒಡೆತನದಲ್ಲಿ ಇರುವ, ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದ ಸೆರಂ ಸಂಸ್ಥೆಯ ಹಾಗೂ ಕೊವಿಶೀಲ್ಡ್ ತಯಾರಕ ಸೈರಸ್ ಪೂನಾವಾಲಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Padma Awards 2022: ದಲಿತ ಸಂವೇದನೆಗೆ ಅಕ್ಷರಲೋಕದಲ್ಲಿ ಶಾಶ್ವತ ಸ್ಥಾನ ದೊರಕಿಸಿದ ಕವಿ ಸಿದ್ದಲಿಂಗಯ್ಯಗೆ ಪದ್ಮಶ್ರೀ ಪ್ರಶಸ್ತಿ: ಹರ್ಷ ವ್ಯಕ್ತಪಡಿಸಿದ ಪುತ್ರಿ ಮಾನಸಾ

ಇದನ್ನೂ ಓದಿ: Padma awards 2022: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅಮೈ ಮಹಾಲಿಂಗ ನಾಯ್ಕರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Published on: Jan 26, 2022 09:03 AM