AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದ್ಮಶ್ರೀ ಅಂಕೇಗೌಡರ ಗ್ರಂಥಾಲಯದಲ್ಲಿ ಎಷ್ಟು ಪುಸ್ತಕಗಳಿವೆ ಗೊತ್ತಾ? ಸರ್ಕಾರಕ್ಕೆ ಅವರ ಮನವಿಯೇನು? ಇಲ್ಲಿದೆ ನೋಡಿ

ಪದ್ಮಶ್ರೀ ಅಂಕೇಗೌಡರ ಗ್ರಂಥಾಲಯದಲ್ಲಿ ಎಷ್ಟು ಪುಸ್ತಕಗಳಿವೆ ಗೊತ್ತಾ? ಸರ್ಕಾರಕ್ಕೆ ಅವರ ಮನವಿಯೇನು? ಇಲ್ಲಿದೆ ನೋಡಿ

ದಿಲೀಪ್​, ಚೌಡಹಳ್ಳಿ
| Edited By: |

Updated on: Jan 26, 2026 | 8:59 AM

Share

ಪದ್ಮಶ್ರೀ ಪುರಸ್ಕೃತ ಅಂಕೇಗೌಡರು ಮಂಡ್ಯ ಜಿಲ್ಲೆಯ ಚಿನಕುರಳಿ ಗ್ರಾಮದಲ್ಲಿ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಗ್ರಂಥಾಲಯ ಸ್ಥಾಪಿಸಿದ್ದಾರೆ. ನೂರು ವರ್ಷ ಹಳೆಯ ಕೃತಿಗಳು, 3000 ರಾಮಾಯಣ ಆವೃತ್ತಿಗಳು, ಭಗವದ್ಗೀತೆ, ಗಾಂಧಿ ಕುರಿತು ಸಾವಿರಾರು ಪುಸ್ತಕಗಳಿರುವ ಈ ಗ್ರಂಥಾಲಯ ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಅಕ್ಷರಶಃ ಜ್ಞಾನದ ಆಗರವಾಗಿದೆ.

ಮಂಡ್ಯ, ಜನವರಿ 26: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಅಂಕೇಗೌಡರು 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ, ತಮ್ಮದೇ ಆದ ‘ಪುಸ್ತಕಾ ಮನೆ’ ಎಂಬ ಬೃಹತ್ ಗ್ರಂಥಾಲಯವನ್ನು ನಿರ್ಮಿಸಿರುವುದು ಅವರು ಈ ಗೌರವಕ್ಕೆ ಭಾಜನರಾಗಲು ಕಾರಣವಾಗಿದೆ. ನೂರು ವರ್ಷಗಳಿಗೂ ಹಳೆಯದಾದ ಷೇಕ್ಸ್‌ಪಿಯರ್ ಕೃತಿಗಳು ಸೇರಿದಂತೆ ಅನೇಕ ಅಮೂಲ್ಯ ಗ್ರಂಥಗಳನ್ನು ಅವರ ಮನೆಯಲ್ಲಿ ಸಂಗ್ರಹಿಸಿಡಲಾಗಿದೆ.

ಅಂಕೇಗೌಡರು ತಮ್ಮ ಗ್ರಂಥಾಲಯವನ್ನು ಕೇವಲ ಪುಸ್ತಕ ಸಂಗ್ರಹವಾಗಿ ನೋಡದೆ, ಮುಂದಿನ ಪೀಳಿಗೆಗೆ ಪೂರ್ವಿಕರ ಇತಿಹಾಸ ಮತ್ತು ಜ್ಞಾನವನ್ನು ತಲುಪಿಸುವ ಸಾಧನವೆಂದು ಪರಿಗಣಿಸಿದ್ದಾರೆ. ಇಲ್ಲಿ ಭಗವದ್ಗೀತೆ ಕುರಿತು 2,500, ಮಹಾತ್ಮ ಗಾಂಧಿ ಕುರಿತು 2,500 ಹಾಗೂ ರಾಮಾಯಣದ 3,000ಕ್ಕೂ ಹೆಚ್ಚು ವಿಭಿನ್ನ ಆವೃತ್ತಿಗಳಿವೆ. ಈ ಗ್ರಂಥಾಲಯ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಒಂದು ದೊಡ್ಡ ಸಂಪನ್ಮೂಲ ಕೇಂದ್ರವಾಗಿದೆ. ಪದ್ಮಶ್ರೀ ಪ್ರಶಸ್ತಿ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಮತ್ತು ಹಣವೇ ಮುಖ್ಯವಲ್ಲ ಎಂಬುದನ್ನು ಸಮಾಜಕ್ಕೆ ಸಾರಿದೆ ಎಂದು ಅಂಕೇಗೌಡರು ಹೇಳುತ್ತಾರೆ. ಸರ್ಕಾರಕ್ಕೆ ನಿಮ್ಮ ಬೇಡಿಕೆಯೇನು ಎಂದು ಕೇಳಲಾದ ಪ್ರಶ್ನೆಗೆ ಅಂಕೇಗೌಡರು ಹೇಳಿದ್ದೇನು? ವಿಡಿಯೋದಲ್ಲಿದೆ ನೋಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ