ಪಹಲ್​ಗಾಮ್ ದಾಳಿ: ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್

Updated on: Apr 23, 2025 | 11:19 AM

ಜಮ್ಮು ಮತ್ತು ಕಾಶ್ಮೀರದ ಪಹಲ್​​ಗಾಮ್​​ನಲ್ಲಿ ನಡೆದ ಉಗ್ರ ದಾಳಿ ಅತ್ಯಂತ ಭೀಕರವಾದದ್ದು ಮತ್ತು ಪುಲ್ವಾಮಾ ದಾಳಿ ನಂತರದಲ್ಲೇ ಅತಿದೊಡ್ಡದು. ಇದಕ್ಕೆ ಕಾರಣವಾದ ಉಗ್ರ ಸಂಘಟನೆ ವಿರುದ್ಧ ಕೇಂದ್ರ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 23: ಭಯೋತ್ಪಾದಕರು ಪಹಲ್​ಗಾಮ್​ನಲ್ಲಿ ನಡೆಸಿದ ದಾಳಿ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರವಾದ ಉಗ್ರ ದಾಳಿ ಎಂದು ಕರ್ನಾಟಕ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಉಗ್ರರು, ‘ನೀವು ಹಿಂದೂಗಳೇ’ ಎಂದು ಪ್ರಶ್ನಿಸಿ ದಾಳಿ ಮಾಡಿರುವುದು ನಿಜಕ್ಕೂ ಅತ್ಯಂತ ಆತಂಕಕಾರಿ. ಅಂಥವರ ವಿರುದ್ಧ ಕೇಂದ್ರ ಸರ್ಕಾರ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ