ಭಾರತ-ಪಾಕ್ ಗಡಿಯಿಂದ Tv9 ಗ್ರೌಂಡ್ ರಿಪೋರ್ಟ್: ಸನ್ನದ್ಧವಾಗಿರುವ BSF ಯೋಧರು
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದಾಗಿ ಭಾರತ ಸರ್ಕಾರವು ಎಚ್ಚರಿಕೆಯನ್ನು ವಹಿಸಿದೆ. ಭೂ, ವಾಯು ಮತ್ತು ನೌಕಾ ಸೇನೆಗಳು ಸರ್ವ ಸನ್ನದ್ಧವಾಗಿವೆ. ರಾಜಸ್ಥಾನದ ಗಡಿಯಲ್ಲಿ ಬಿಎಸ್ಎಫ್ ಯೋಧರು ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ. ಈ ದಾಳಿಯನ್ನು ಖಂಡಿಸಿರುವ ಭಾರತ, ಪ್ರತಿಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದೆ. ಭದ್ರತಾ ಪರಿಸ್ಥಿತಿ ತೀವ್ರಗೊಂಡಿದೆ.
ಜಮ್ಮು-ಕಾಶ್ಮೀರದ (jammu and kashmir) ಪಹಲ್ಗಾಮ್‌ದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ (Pahalgam Terror Attack) ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಎಂದು ಭಾರತ ಸರ್ಕಾರ ಹೇಳಿದೆ. ಹೀಗಾಗಿ, ದೇಶದ ಮೂರು ಸೇನೆಗಳಾದ ಭೂ, ವಾಯು ಮತ್ತು ನೌಕಾ ಸೇನೆ ಸರ್ವ ಸನ್ನದ್ಧವಾಗಿವೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಎಸ್ಫ್ ಯೋಧರು ಯುದ್ಧಕ್ಕಾಗಿ ಸರ್ವ ಸನ್ನದ್ಧವಾಗಿದ್ದಾರೆ. BSF ಯೋಧರು ಮೇಲಧಿಕಾರಿಗಳ ಆದೇಶಕ್ಕೆ ಕಾದು ಕುಳಿತಿದ್ದಾರೆ. ಭಾರತ-ಪಾಕಿಸ್ತಾನ ಗಡಿಯಿಂದ ಟಿವಿ9 ಗ್ರೌಂಡ್ ರಿಪೋರ್ಟ್ ಇಲ್ಲಿದೆ.
