ಚೆನೈನಿಂದ ಶ್ರೀಲಂಕಾ ಪರಾರಿಯಾದರೇ ಪಹಲ್ಗಾಮ್ ನಲ್ಲಿ 26 ಅಮಾಯಕರನ್ನು ಕೊಂದ ಉಗ್ರರು?

ಅರುಣ್​ ಕುಮಾರ್​ ಬೆಳ್ಳಿ

Updated on: May 03, 2025 | 7:23 PM

ಉಗ್ರರು ಯಾವುದೇ ಬಿಲದಲ್ಲಿ ಅಡಗಿ ಕೂತಿದ್ದರೂ ಹುಡುಕಿ ಗಲ್ಲಿಗೇರಿಸುತ್ತೇವೆ ಎಂದು ಭಾರತ ಸರ್ಕಾರ ಹೇಳಿದೆ. ಪಾಕಿಸ್ತಾನ ಬಿಟ್ಟರೆ ಬೇರೆ ಯಾವದೇ ದೇಶದಲ್ಲೂ ಅವರಿಗೆ ನೆಲೆ ಸಿಕ್ಕಲಾರದು, ಏತನ್ಮಧ್ಯೆ, ಅಮೇರಿಕವು ಭಾರತದದೊಂದಿಗೆ ಇದ್ದೇನೆ ಎಂಬ ಸಂದೇಶವನ್ನು ನೀಡಿದೆ, ಅಮೆರಿಕದ ಸಂದೇಶ ಬಳಿಕ ಪಾಕಿಸ್ತಾನ ಭಯೋತ್ಪಾದಕರಿಗೆ ತನ್ನ ನೆಲದಲ್ಲೂ ಆಶ್ರಯ ಕೊಡಲಾರದು.

ಬೆಂಗಳೂರು, ಮೇ 3: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗಳ ಮೇಲೆ ಗುಂಡಿನ ದಾಳಿ ನಡೆಸಿ 26 ಜನರನ್ನು ಕೊಂದ ಉಗ್ರಗಾಮಿಗಳು ಶ್ರೀಲಂಕಾಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಉಗ್ರರು ಯುಎಲ್-122 ವಿಮಾನದಲ್ಲಿ ಚೆನೈಯಿಂದ ಶ್ರೀಲಂಕಾಗೆ (Sri Lanka) ಹೋಗಿರಬಹುದೆಂದು ಅನುಮಾನಿಸಲಾಗುತ್ತಿದೆ. ಭಾರತದಿಂದ ಶ್ರೀಲಂಕಾಗೆ ಸಂದೇಶ ರವಾನೆಯಾದ ಬಳಿಕ ಉಗ್ರರೆಂದು ಶಂಕಿಸಲಾಗುತ್ತಿರುವ 6 ಜನ ಇಳಿದ ವಿಮಾನ ನಿಲ್ದಾಣವನ್ನು ಬಂದ್ ಮಾಡಿ ವಿಮಾನದಿಂದ ಇಳಿದ ಪ್ರಯಾಣಿಕರ ಪರೀಶೀಲನೆ ನಡೆಸಲಾಗುತ್ತಿದೆ. ಉಗ್ರರ ಸ್ಕೆಚ್​ಗಳನ್ನು ಸರ್ಕಾರ ಬಿಡುಗಡೆ ಮಾಡಿರುವುದರಿಂದ ಪಾಪಿಗಳು ತಪ್ಪಿಸಿಕೊಳ್ಳುವ ಚಾನ್ಸೇ ಇಲ್ಲ.

ಇದನ್ನೂ ಓದಿ:  ಪಹಲ್ಗಾಮ್ ದಾಳಿಕೋರರು ಶಸ್ತ್ರಾಸ್ತ್ರಗಳನ್ನು ಎಲ್ಲಿ ಅಡಗಿಸಿಟ್ಟಿದ್ರು? ಎನ್​ಐಎಯಿಂದ ಮಾಹಿತಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 03, 2025 07:23 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.