PAK vs ENG: ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್

PAK vs ENG: ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್

ಪೃಥ್ವಿಶಂಕರ
|

Updated on:Oct 10, 2024 | 4:18 PM

PAK vs ENG: ನಸೀಮ್ ಶಾ ಎಸೆತದಲ್ಲಿ ಜೋ ರೂಟ್ ನೀಡಿದ ಸುಲಭ ಕ್ಯಾಚ್ ಅನ್ನು ಬಾಬರ್ ಕೈಚೆಲ್ಲಿದರು. ನಸೀಮ್ ಅವರ ಶಾರ್ಟ್ ಬಾಲ್‌ ಅನ್ನು ಜೋ ರೂಟ್ ಶಾರ್ಟ್ ಮಿಡ್ ವಿಕೆಟ್‌ ಕಡೆ ಆಡಿದರು. ಆದರೆ ಅಲ್ಲೇ ನಿಂತಿದ್ದ ಬಾಬರ್ ಆಝಂಗೆ ಸುಲಭ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. ಬಾಬರ್ ಅವರ ಕಳಪೆ ಫೀಲ್ಡಿಂಗ್ ನೋಡಿ ನಸೀಮ್ ಶಾ ಕೂಡ ನಿರಾಸೆಗೊಂಡರು.

ಪಾಕಿಸ್ತಾನ ಹಾಗೂ ಇಂಗ್ಲೆಂಡ್‌ ನಡುವೆ ಮುಲ್ತಾನ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಬೌಲರ್​ಗಳು ಹೈರಾಣಾಗುವಂತೆ ಮಾಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 556 ರನ್‌ ದಾಖಲಿಸಿದರೆ, ಇತ್ತ ಇಂಗ್ಲೆಂಡ್ ಕೂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 823 ರನ್ ಬಾರಿಸಿದೆ. ಒಂದೆಡೆ ಪಾಕಿಸ್ತಾನದ ಮೂವರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದರೆ, ಮತ್ತೊಂದೆಡೆ ಇಬ್ಬರು ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳಾದ ಜೋ ರೂಟ್ ದ್ವಿಶತಕ ಮತ್ತು ಹ್ಯಾರಿ ಬ್ರೂಕ್ ತ್ರಿಶತಕದ ಇನ್ನಿಂಗ್ಸ್ ಆಡಿದ್ದಾರೆ. ಇಂತಹ ಪಿಚ್​ನಲ್ಲಿ ವಿಕೆಟ್ ತೆಗೆಯಲು ಹೆಣಗಾಡುತ್ತಿರುವ ಬೌಲರ್​ಗೆ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರೆ ಹೇಗಾಗಬೇಡ ಹೇಳಿ. ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂ, ಜೋ ರೂಟ್ ನೀಡಿದ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ್ದಾರೆ. ಈ ಮೂಲಕ ರೂಟ್ ಅವರು ದ್ವಿಶತಕ ಸಿಡಿಸಲು ಬಾಬರ್ ನೆರವಾಗಿದ್ದಾರೆ.

ಸುಲಭ ಕ್ಯಾಚ್ ಕೈಬಿಟ್ಟ ಬಾಬರ್

ನಸೀಮ್ ಶಾ ಎಸೆತದಲ್ಲಿ ಜೋ ರೂಟ್ ನೀಡಿದ ಸುಲಭ ಕ್ಯಾಚ್ ಅನ್ನು ಬಾಬರ್ ಕೈಚೆಲ್ಲಿದರು. ನಸೀಮ್ ಅವರ ಶಾರ್ಟ್ ಬಾಲ್‌ ಅನ್ನು ಜೋ ರೂಟ್ ಶಾರ್ಟ್ ಮಿಡ್ ವಿಕೆಟ್‌ ಕಡೆ ಆಡಿದರು. ಆದರೆ ಅಲ್ಲೇ ನಿಂತಿದ್ದ ಬಾಬರ್ ಆಝಂಗೆ ಸುಲಭ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. ಬಾಬರ್ ಅವರ ಕಳಪೆ ಫೀಲ್ಡಿಂಗ್ ನೋಡಿ ನಸೀಮ್ ಶಾ ಕೂಡ ನಿರಾಸೆಗೊಂಡರು. ಬಾಬರ್, ರೂಟ್ ಅವರ ಕ್ಯಾಚ್ ಕೈಬಿಟ್ಟಾಗ ಅವರು 186 ರನ್ ಗಳಿಸಿ ಆಡುತ್ತಿದ್ದರು. ಬಾಬರ್‌ ನೀಡಿದ ಈ ಜೀವದಾನವನ್ನು ಸದುಪಯೋಗಪಡಿಸಿಕೊಂಡ ರೂಟ್, ದ್ವಿಶತಕ ಸಿಡಿಸಿದ್ದಲ್ಲದೆ 262 ರನ್​ಗಳ ಇನ್ನಿಂಗ್ಸ್ ಆಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 10, 2024 04:15 PM