ನಾಟಕ ಮಾಡ್ತಾನೆ… ಲೈವ್ನಲ್ಲೇ ಬಾಬರ್ ಆಝಂಗೆ ಅವಮಾನ
Pakistan vs South Africa, 1st Test: ಈ ವೇಳೆ ಕಾಮೆಂಟ್ರಿ ಮಾಡುತ್ತಿದ್ದ ರಮೀಝ್ ರಾಝ ಮೈಕ್ರೋಫೋನ್ ಆಫ್ ಮಾಡದೇ ಹೇಳಿದ ಮಾತೊಂದು ಇದೀಗ ವೈರಲ್ ಆಗಿದೆ. ಸಹ ಕಾಮೆಂಟೇರ್ ಜೊತೆ ಮಾತನಾಡುತ್ತಿದ್ದ ರಮೀಝ್, ಅದು ಔಟ್... ಇದೆಲ್ಲಾ ನಾಟಕ ಎಂದಿದ್ದಾರೆ. ಇತ್ತ ಮೈಕ್ರೊಫೋನ್ ಆನ್ ಆಗಿರುವುದನ್ನು ಮರೆತಿದ್ದರಿಂದ ರಮೀಝ್ ರಾಝ ಹೇಳಿದ ಮಾತುಗಳು ಲೈವ್ನಲ್ಲೇ ಪ್ರಸಾರವಾಗಿದೆ.
ಲಾಹೋರ್ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ನೀರಸ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದ ಕಾಮೆಂಟ್ರಿ ವೇಳೆ ರಮೀಝ್ ರಾಜಾ ನೀಡಿದ ಹೇಳಿಕೆಯ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ.
ಈ ಪಂದ್ಯದ 48ನೇ ಓವರ್ನ ಕೊನೆಯ ಎಸೆತದಲ್ಲಿ ಚೆಂಡು ಬಾಬರ್ ಆಝಂ ಬ್ಯಾಟ್ ಬದಿಯಿಂದ ವಿಕೆಟ್ ಕೀಪರ್ ಕೈ ಸೇರಿತ್ತು. ಇತ್ತ ಸೌತ್ ಆಫ್ರಿಕಾ ಆಟಗಾರರು ಔಟ್ಗಾಗಿ ಮನವಿ ಮಾಡಿದ್ದರು. ಅಂಪೈರ್ ಔಟ್ ನೀಡುತ್ತಿದ್ದಂತೆ ಬಾಬರ್ ಡಿಆರ್ಎಸ್ ಮೊರೆ ಹೋದರು.
ಈ ವೇಳೆ ಕಾಮೆಂಟ್ರಿ ಮಾಡುತ್ತಿದ್ದ ರಮೀಝ್ ರಾಜಾ ಮೈಕ್ರೋಫೋನ್ ಆಫ್ ಮಾಡದೇ ಹೇಳಿದ ಮಾತೊಂದು ಇದೀಗ ವೈರಲ್ ಆಗಿದೆ. ಸಹ ಕಾಮೆಂಟೇರ್ ಜೊತೆ ಮಾತನಾಡುತ್ತಿದ್ದ ರಮೀಝ್, ಇದು ಔಟಾದರೆ… ಅವನು ನಾಟಕ ಮಾಡ್ತಾನೆ ಎಂದಿದ್ದಾರೆ. ಇತ್ತ ಮೈಕ್ರೊಫೋನ್ ಆನ್ ಆಗಿರುವುದನ್ನು ಮರೆತಿದ್ದರಿಂದ ರಮೀಝ್ ರಾಜಾ ಹೇಳಿದ ಮಾತುಗಳು ಲೈವ್ನಲ್ಲೇ ಪ್ರಸಾರವಾಗಿದೆ. ಇದೀಗ ಬಾಬರ್ ಕುರಿತಾಗಿ ರಮೀಝ್ ರಾಜಾ ನೀಡಿದ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇನ್ನು ಈ ಪಂದ್ಯದಲ್ಲಿ 48 ಎಸೆತಗಳನ್ನು ಎದುರಿಸಿದ ಬಾಬರ್ ಆಝಂ 23 ರನ್ಗಳಿಸಿ ಔಟಾಗಿದ್ದಾರೆ. ಇದಾಗ್ಯೂ ಪಾಕಿಸ್ತಾನ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 313 ರನ್ ಪೇರಿಸಿದೆ.