Pak Maulana Viral Speech: ಪಾಕಿಸ್ತಾನದೊಳಗೆ ಭುಗಿಲೆದ್ದ ಆಕ್ರೋಶ; ಈ ಮುಸ್ಲಿಂ ಧರ್ಮಗುರು ವಿಡಿಯೋ ವೈರಲ್

Updated on: May 06, 2025 | 6:20 PM

Deobandi muslim cleric Maulana Abdul Aziz Ghazi viral speech: ಪಾಕಿಸ್ತಾನದ ದೇವೋಬಂದಿ ಧರ್ಮಗುರು ಮೌಲಾನ ಅಬ್ದುಲ್ ಅಜೀಜ್ ಘಾಜಿ ಅವರು ತಮ್ಮ ಭಾಷಣದಲ್ಲಿ ಪಾಕಿಸ್ತಾದದ ಆಡಳಿತದ ಮೇಲೆಯೇ ವಾಗ್ದಾಳಿ ಮಾಡಿದ್ದಾರೆ. ಪಾಕಿಸ್ತಾನವೇ ಹೆಚ್ಚು ಶೋಷಣೆ ಮಾಡುತ್ತದೆ. ವಜಿರಿಸ್ತಾನದಲ್ಲಿ ಲಾಲ್ ಮಸೀದಿಗೆ ಬಾಂಬ್ ಹಾಕಿದ್ದು ಭಾರತವಲ್ಲ, ಪಾಕಿಸ್ತಾನ ಎಂದು ಹೇಳಿದ ಅವರು, ಯುದ್ಧವಾದರೆ ಪಾಕಿಸ್ತಾನದ ಪರ ಯಾರು ನಿಲ್ಲುತ್ತೀರಿ ಎಂದಾದ ಸಭಿಕರಲ್ಲಿ ಒಬ್ಬರೂ ಕೈ ಎತ್ತಲಿಲ್ಲ.

ಇಸ್ಲಾಮಾಬಾದ್, ಮೇ 6: ಭಾರತದ ಜೊತೆ ಸದಾ ತಿಕ್ಕಾಟದಲ್ಲಿ ಇರುವ ಪಾಕಿಸ್ತಾನದಲ್ಲಿ ಆ ದೇಶದ ಜನರೇ ದಂಗೆ ಎದ್ದರೂ ಅಚ್ಚರಿ ಇಲ್ಲ. ಇದಕ್ಕೆ ಇಂಬುಕೊಡುವಂತೆ ಮೌಲಾನವೊಬ್ಬರ ಭಾಷಣ ವೈರಲ್ ಆಗಿದೆ. ಪಾಕಿಸ್ತಾನದ ದೇವೋಬಂದಿ ಧರ್ಮಗುರು ಮೌಲಾನ ಅಬ್ದುಲ್ ಅಜೀಜ್ ಘಾಜಿ (Maulana Abdul Aziz Ghazi) ಅವರು ತಮ್ಮ ಭಾಷಣದಲ್ಲಿ ಪಾಕಿಸ್ತಾದದ ಆಡಳಿತದ ಮೇಲೆಯೇ ವಾಗ್ದಾಳಿ ಮಾಡಿದ್ದಾರೆ. ಪಾಕಿಸ್ತಾನವೇ ಹೆಚ್ಚು ಶೋಷಣೆ ಮಾಡುತ್ತದೆ. ಬಲೂಚರು, ಪಶ್ತುನ್ನರು, ಪಿಟಿಐ ಕಾರ್ಯಕರ್ತರು, ಧಾರ್ಮಿಕ ಮುಖಂಡರು, ಪತ್ರಕರ್ತರನ್ನು ಪಾಕಿಸ್ತಾನ ಹತ್ತಿಕ್ಕುತ್ತಿದೆ. ವಜಿರಿಸ್ತಾನದಲ್ಲಿ ಲಾಲ್ ಮಸೀದಿಗೆ ಬಾಂಬ್ ಹಾಕಿದ್ದು ಭಾರತವಲ್ಲ, ಪಾಕಿಸ್ತಾನ ಎಂದು ಹೇಳಿದ್ದಾರೆ. ಇನ್ನೂ ಮುಂದುವರಿದ ಅವರು, ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧವಾದಲ್ಲಿ ಪಾಕಿಸ್ತಾನಕ್ಕೆ ಯಾರು ಬೆಂಬಲ ನೀಡುತ್ತೀರಿ ಎಂದು ಮೌಲಾನ ಅಬ್ದುಲ್ ಅಜೀಜ್ ಘಾಜಿ ಕೇಳಿದಾಗ, ಸಭಿಕರಲ್ಲಿ ಒಬ್ಬರೂ ಕೈ ಎತ್ತಲಿಲ್ಲ.

ಪಾಕಿಸ್ತಾನದಲ್ಲಿ ಬಲೂಚಿಸ್ತಾನದ ಬಂಡುಕೋರರು ಭಾರತಕ್ಕೆ ಮುಕ್ತವಾಗಿ ಬೆಂಬಲ ನೀಡುತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನ, ಗಿಲ್ಗಿಟ್ ಬಾಲ್ಟಿಸ್ತಾನ್, ಖೈಬರ್ ಪಖ್ತುಂಕ್ವ ಪ್ರದೇಶಗಳಲ್ಲಿ ಪಾಕಿಸ್ತಾನ ಹಿಡಿತ ಕಳೆದುಕೊಳ್ಳುತ್ತಿದೆ. ಆ ದೇಶ ಯಾವಾಗ ಬೇಕಾದರೂ ಛಿದ್ರಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ