ಅಫ್ಘಾನಿಸ್ತಾನದ ದಾಳಿ ವೇಳೆ ಆಗಸದೆತ್ತರ ಹಾರಿಬಿದ್ದ ಪಾಕ್ ಸೈನಿಕರ ಶವಗಳು

Updated on: Oct 12, 2025 | 4:11 PM

ಪಾಕಿಸ್ತಾನದ ಸೈನಿಕರ ಗುಂಪು ನಿಂತಿದ್ದ ಜಾಗಕ್ಕೆ ಅಫ್ಘಾನ್ ದಾಳಿ ನಡೆಸಿದೆ. ಆ ದಾಳಿಯ ಹೊಡೆತಕ್ಕೆ ಪಾಕಿಸ್ತಾನಿ ಸೈನಿಕರು ಛಿದ್ರವಾಗಿ, ಅವರ ದೇಹಗಳು ಆಕಾಶದೆತ್ತರಕ್ಕೆ ಹಾರಿ ಬಿದ್ದಿದೆ. ತಾಲಿಬಾನ್ ಪ್ರತೀಕಾರದ ದಾಳಿಯ ನಂತರ ಪಾಕಿಸ್ತಾನಿ ಸೈನಿಕರ ಮಾರಣಹೋಮವೇ ನಡೆದಿದೆ. ಇದುವರೆಗೂ ಪಾಕಿಸ್ತಾನದ 58 ಸೈನಿಕರನ್ನು ಕೊಂದಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.

ಇಸ್ಲಮಾಬಾದ್, ಅಕ್ಟೋಬರ್ 12: ಪಾಕಿಸ್ತಾನ-ಅಫ್ಘಾನಿಸ್ತಾನದ (Afghanistan) ನಡುವಿನ ಘರ್ಷಣೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಮೊಬೈಲ್​ನಲ್ಲಿ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ವಿಡಿಯೋ ಚಿತ್ರೀಕರಿಸುವಾತ ಅಲ್ಲಾಹು ಅಕ್ಬರ್ ಎಂದು ಪ್ರಾರ್ಥನೆ ಮಾಡುತ್ತಾ ಭಯಪಡುತ್ತಿರುವುದನ್ನು ಕೇಳಬಹುದು. ಪಾಕಿಸ್ತಾನದ ಸೈನಿಕರ ಗುಂಪು ನಿಂತಿದ್ದ ಜಾಗಕ್ಕೆ ಅಫ್ಘಾನ್ ದಾಳಿ ನಡೆಸಿದೆ. ಆ ದಾಳಿಯ ಹೊಡೆತಕ್ಕೆ ಪಾಕಿಸ್ತಾನಿ ಸೈನಿಕರು ಛಿದ್ರವಾಗಿ, ಅವರ ದೇಹಗಳು ಆಕಾಶದೆತ್ತರಕ್ಕೆ ಹಾರಿ ಬಿದ್ದಿದೆ. ತಾಲಿಬಾನ್ ಪ್ರತೀಕಾರದ ದಾಳಿಯ ನಂತರ ಪಾಕಿಸ್ತಾನಿ ಸೈನಿಕರ ಮಾರಣಹೋಮವೇ ನಡೆದಿದೆ. ಇದುವರೆಗೂ ಪಾಕಿಸ್ತಾನದ 58 ಸೈನಿಕರನ್ನು ಕೊಂದಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.

ರಾಜಧಾನಿ ಕಾಬೂಲ್ ಸೇರಿದಂತೆ ಅಫ್ಘಾನ್ ಪ್ರದೇಶದಲ್ಲಿ ತಾಲಿಬಾನ್ ಪಡೆಗಳು ಪಾಕಿಸ್ತಾನಿ ವಾಯುದಾಳಿಗಳಿಗೆ ಪ್ರತೀಕಾರ ತೀರಿಸಿಕೊಂಡಿದೆ. ಬಹ್ರಾಮ್‌ಪುರ ಜಿಲ್ಲೆಯ ಡುರಾಂಡ್ ಲೈನ್ ಬಳಿ ಅಫ್ಘಾನ್ ಪಡೆಗಳು ನಿನ್ನೆ ರಾತ್ರಿ ನಡೆಸಿದ ಪ್ರತೀಕಾರದ ಕಾರ್ಯಾಚರಣೆಯಲ್ಲಿ 15 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಫ್ಘಾನ್ ಪಡೆಗಳು ಮೂರು ಪಾಕಿಸ್ತಾನಿ ಸೇನಾ ಹೊರಠಾಣೆಗಳನ್ನು ವಶಪಡಿಸಿಕೊಂಡಿವೆ ಮತ್ತು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ