IND vs PAK: ಟೀಮ್ ಇಂಡಿಯಾದಿಂದ ಟಾಸ್ ಫಿಕ್ಸಿಂಗ್: ಗಂಭೀರ ಆರೋಪ..!
India vs Pakistan: ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಏಷ್ಯಾಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಏಷ್ಯಾಕಪ್ ಫೈನಲ್ ನಲ್ಲಿ ಟೀಮ್ ಇಂಡಿಯಾ ಟಾಸ್ ಫಿಕ್ಸಿಂಗ್ ಮಾಡಿಕೊಂಡಿದೆ… ಇಂತಹದೊಂದು ಗಂಭೀರ ಆರೋಪ ಮಾಡಿರೋದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್. ಇದಕ್ಕಾಗಿ ತನ್ವೀರ್, ಭಾರತ-ಪಾಕಿಸ್ತಾನ್ ನಡುವಣ ಫೈನಲ್ ಪಂದ್ಯದ ಟಾಸ್ ವಿಡಿಯೋ ಮುಂದಿಟ್ಟಿದ್ದಾರೆ.
ಈ ವಿಡಿಯೋದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಕಾಯಿನ್ ಚಿಮ್ಮಿಸಿರುವುದು ಕಾಣಬಹುದು. ಆದರೆ ಕಾಯಿನ್ ಅನ್ನು ನೋಡುವ ಮೊದಲೇ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ನಿಮ್ಮ ಆಯ್ಕೆಯೇನು ಎಂದು ಕೇಳಿದ್ದಾರೆ. ಅತ್ತ ಕಡೆಯಿಂದ ಸೂರ್ಯಕುಮಾರ್ ಕುಮಾರ್ ಯಾದವ್ ಬೌಲಿಂಗ್ ಎಂದಿದ್ದಾರೆ.
ರಿಚಿ ರಿಚರ್ಡ್ಸನ್ ಕಾಯಿನ್ ಅನ್ನು ಸ್ಪಷ್ಟವಾಗಿ ನೋಡುವ ಮೊದಲೇ, ಸೂರ್ಯಕುಮಾರ್ ಯಾದವ್ ಅವರತ್ತ ತಿರುಗಿದ್ದರು. ಕೂಡಲೇ ಸೂರ್ಯ ಬೌಲಿಂಗ್ ಮಾಡುತ್ತೇವೆ ಎಂದಿದ್ದಾರೆ. ಅಂದರೆ ಟಾಸ್ ಕಾಯಿನ್ ಹೆಡ್ ಆಗಿತ್ತಾ ಟೇಲ್ ಆಗಿತ್ತಾ ಎಂಬುದನ್ನು ತೋರಿಸಿಲ್ಲ. ಅಲ್ಲದೇ ಕಾಯಿನ್ ನೋಡುವ ಮೊದಲೇ ಮ್ಯಾಚ್ ರೆಫರಿ ಟೀಮ್ ಇಂಡಿಯಾ ನಾಯನನ ನಿರ್ಧಾರ ಕೇಳಿದ್ದರು. ಇವೆಲ್ಲವನ್ನೂ ಗಮನಿಸಿದರೆ ಟೀಮ್ ಇಂಡಿಯಾ ಟಾಸ್ ಫಿಕ್ಸಿಂಗ್ ಮಾಡಿರೋದು ಪಕ್ಕಾ ಎಂದು ತನ್ವೀರ್ ಅಹ್ಮದ್ ಗಂಭೀರ ಆರೋಪ ಮಾಡಿದ್ದಾರೆ.
ಇದೀಗ ತನ್ವೀರ್ ಅಹ್ಮದ್ ಮುಂದಿಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ಶುರುವಾಗಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಏಷ್ಯಾಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.