Yatnal takes on Nirani; ಪಂಚಮಸಾಲಿ ಲಿಂಗಾಯತರಿಗೆ 2ಡಿ ಮೀಸಲಾತಿ ಸಿಕ್ಕಿದ್ದು ಶ್ರೀಗಳಿಂದ, ಇದರಲ್ಲಿ ಯಾವುದೇ ಅಯೋಗ್ಯನ ಕೊಡುಗೆ ಇಲ್ಲ: ಬಸನಗೌಡ ಯತ್ನಾಳ್

|

Updated on: Mar 30, 2023 | 5:04 PM

ಕೆಲ ಸಮುದಾಯಗಳು ಪ್ರವರ್ಗ 1, 2ಎ ಮತ್ತು 2ಬಿ ಮೂರರಲ್ಲೂ ಮೀಸಲಾತಿ ಗಿಟ್ಟಿಸುತ್ತಿದ್ದವು. ಅವರಿಂದ ಶೇಕಡ 4 ರಷ್ಟನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ ಎಂದು ಯತ್ನಾಳ್ ಹೇಳಿದರು.

ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಮತ್ತು ಸಚಿವ ಮುರುಗೇಶ್ ಆರ್ ನಿರಾಣಿ (Murugesh R Nirani ) ನಡುವಿನ ವೈರತ್ವ ಚುನಾವಣೆ ನೆತ್ತಿ ಮೇಲಿರುವಾಗಲೂ ನಿಲ್ಲುತ್ತಿಲ್ಲ. ಬೆಂಗಳೂರಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯತ್ನಾಳ್, ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಸಿಕ್ಕಿದ್ದು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ (Basava Jaya Mruthyunjaya Swamiji) ಹೋರಾಟದ ಫಲವೇ ಹೊರತು ಇದರಲ್ಲಿ ಯಾವುದೇ ಅಯೋಗ್ಯನ ಕಾಣಿಕೆ ಇಲ್ಲ ಅಂತ ಪರೋಕ್ಷವಾಗಿ ನಿರಾಣಿ ಮೇಲೆ ದಾಳಿ ನಡೆಸಿದರು. ಕೆಲ ಸಮುದಾಯಗಳು ಪ್ರವರ್ಗ 1, 2ಎ ಮತ್ತು 2ಬಿ ಮೂರರಲ್ಲೂ ಮೀಸಲಾತಿ ಗಿಟ್ಟಿಸುತ್ತಿದ್ದವು. ಅವರಿಂದ ಶೇಕಡ 4 ರಷ್ಟನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ ಎಂದು ಯತ್ನಾಳ್ ಹೇಳಿದರು. ಮುಖ್ಯಮಂತ್ರಿಗಳ ಘೋಷಣೆಯಿಂದ ಯಾವ ಸಮುದಾಯಕ್ಕೂ ಅನ್ಯಾಯವಾಗಿಲ್ಲ ಎಂದು ವಿಜಯಪುರ ಶಾಸಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ