2 ವರ್ಷ ಕಳೆದರೂ ರೈತನಿಗೆ ಪರಿಹಾರ ನೀಡದ ಪಾಂಡವಪುರ ಉಪವಿಭಾಗಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ

Edited By: ಸಾಧು ಶ್ರೀನಾಥ್​

Updated on: Aug 10, 2023 | 2:02 PM

2006 ರಲ್ಲಿ ಪಾಂಡವಪುರ ಪಟ್ಟಣದಲ್ಲಿ ಒಳಚರಂಡಿ ತ್ಯಾಜ್ಯ ಘಟಕಕ್ಕಾಗಿ ರೈತನ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆ ವೇಳೆ ರೈತನಿಗೆ ಕಡಿಮೆ ಮೊತ್ತದ ಪರಿಹಾರ ನೀಡಿ ಸ್ವಾಧೀನ ಮಾಡಲಾಗಿತ್ತು. ಹೀಗಾಗಿ ರೈತ ಹೆಚ್ಚಿನ ಪರಿಹಾರಕ್ಕೆ ಕೋರ್ಟ್ ಗೆ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ JMFC ಕೋರ್ಟ್ ನಿಂದ 4.89 ಕೋಟಿ ಪರಿಹಾರ ನೀಡಲು ಸೂಚನೆ ಮಾಡಿತ್ತು.

ಮಂಡ್ಯ, ಆಗಸ್ಟ್​ 10: ರೈತರೊಬ್ಬರ ಜಮೀನಿಗೆ ಪರಿಹಾರ (compensation) ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ಉಪ ವಿಭಾಗಾಧಿಕಾರಿ ಕಚೇರಿ (Pandavpur sub-divisional office) ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ಕೋರ್ಟ್ ಆದೇಶ ಮಾಡಿತ್ತು. ಕೋರ್ಟ್ ಆದೇಶದ ಅನ್ವಯ, ರೈತರ ಸಹಕಾರದೊಂದಿಗೆ ನಿನ್ನೆ ಬುಧವಾರ ಎಸಿ ಕಚೇರಿಗೆ ಆಗಮಿಸಿ ಎಸಿ ಕಚೇರಿ ಪೀಠೋಪಕರಣ ಜಪ್ತಿ (confiscation) ಮಾಡಲಾಯಿತು. ರೈತ ಸತ್ಯನಾರಾಯಣರಿಗೆ ಸೂಕ್ತ ಪರಿಹಾರ ಕೊಡಲು ಕೋರ್ಟ್ ಆದೇಶ ಮಾಡಿತ್ತು. ಕೋರ್ಟ್ ಆದೇಶ ಮಾಡಿದ್ದರೂ ಪರಿಹಾರ ನೀಡಲು ವಿಳಂಬಗೊಂಡ ಹಿನ್ನೆಲೆಯಲ್ಲಿ ಎಸಿ ಕಚೇರಿ ಸ್ಥಿರಾಸ್ತಿ ಜಪ್ತಿಗೆ ಆದೇಶ ಮಾಡಲಾಗಿತ್ತು.

ಅಂದಹಾಗೆ 2006 ರಲ್ಲಿ ಪಾಂಡವಪುರ ಪಟ್ಟಣದಲ್ಲಿ ಒಳಚರಂಡಿ ತ್ಯಾಜ್ಯ ಘಟಕಕ್ಕಾಗಿ ರೈತನ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆ ವೇಳೆ ರೈತನಿಗೆ ಕಡಿಮೆ ಮೊತ್ತದ ಪರಿಹಾರ ನೀಡಿ ಸ್ವಾಧೀನ ಮಾಡಲಾಗಿತ್ತು. ಹೀಗಾಗಿ ರೈತ ಹೆಚ್ಚಿನ ಪರಿಹಾರಕ್ಕೆ ಕೋರ್ಟ್ ಗೆ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ JMFC ಕೋರ್ಟ್ ನಿಂದ 4.89 ಕೋಟಿ ಪರಿಹಾರ ನೀಡಲು ಸೂಚನೆ ಮಾಡಿತ್ತು. ಆದರೆ ಆದೇಶ ನೀಡಿ 2 ವರ್ಷ ಕಳೆದರೂ ಪರಿಹಾರ ಕೊಡದೆ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶ ಮಾಡಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 10, 2023 02:02 PM
Loading...
Unable to load recommendations.
Follow Us
ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More