ಡಿಕೆ ಸಹೋದರರ ವಿರುದ್ಧ ಹೋರಾಡುವಷ್ಟು ಶಕ್ತಿ ನಮ್ಮಲ್ಲಿಲ್ಲ ಎಂದು ಕಾರ್ಯಕರ್ತರು ಕುಮಾರಸ್ವಾಮಿಗೆ ಹೇಳಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 09, 2022 | 4:22 PM

ಕಾರ್ಯಕರ್ತರು ಯಾವ ಪ್ರಮಾಣದಲ್ಲಿ ರೊಚ್ಚಿಗೆದ್ದಿದ್ದರೆಂದರೆ, ಈ ಬಾರಿ ನಿಮ್ಮ ನಿಲುವು ಬದಲಾಯಿಸಿ ಇಲ್ಲದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿಯವರಿಗೆ ಹೇಳಿದರು.

ರಾಮನಗರ: ಮಾಜಿ ಮುಖ್ಯಮಂತ್ರಿ ಮತ್ತು ಜೆಡಿ (ಎಸ್) ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಶನಿವಾರ ತಮ್ಮದೇ ಪಕ್ಷದ ಕಾರ್ಯಕರ್ತರ ಅಸಮಾಧಾನ ಮತ್ತು ಅಕ್ರೋಶ ಎದುರಿಸಬೇಕಾಯಿತು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಕುಮಾರಸ್ವಾಮಿಯವರು ಪ್ರಯತ್ನಿಸದರಾದರೂ ಕೋಪಭರಿತ ಕಾರ್ಯಕರ್ತರು (workers) ಅವರು ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕುಮಾರಸ್ವಾಮಿಯವರು ಬಿಡದಿಯ ತೋಟದ ಮನೆಯೊಂದರಲ್ಲಿ (Bidadi farmhouse) ಕನಕಪುರದ ಜೆಡಿಎಸ್ ಕಾರ್ಯಕರ್ತರ ಸಭೆ ಕರೆದಿದ್ದರು. ಡಿಕೆ ಸಹೋದರರು ಪ್ರಾಬಲ್ಯ ಹೊಂದಿರುವ ಕನಕಪುರನಲ್ಲಿ ಜೆಡಿ(ಎಸ್) ಪಕ್ಷದ ಬಲವರ್ಧನೆ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಕಾರ್ಯಕರ್ತರು ಗಲಾಟೆ ಆರಂಭಿದರು. ಪಕ್ಷ ಕನಕಪುರನಲ್ಲಿ ಸದೃಢವಾಗಿದೆ ಅದರೆ ಸಂಘಟನಾತ್ಮಕ ಕೆಲಸಗಳು ನಡೆಯುತ್ತಿಲ್ಲ, ಎಂದು ಮಾತು ಶುರುಮಾಡಿದ ಕಾರ್ಯಕರ್ತರು ನಮ್ಮ ದೌರ್ಬಲ್ಯದ ಲಾಭ ಡಿಕೆ ಸಹೋದರರು ಮಾಡಿಕೊಳ್ಳುತ್ತಿದ್ದಾರೆ ಎಂದು ಜೋರು ಧ್ವನಿಯಲ್ಲಿ ಮಾತಾಡತೊಡಗಿದರು.

ಪ್ರತಿಬಾರಿಯ ಚುನಾವಣೆಯಲ್ಲಿ ಕನಕಪುರದಲ್ಲಿ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಲಾಗುತ್ತದೆ, ಆದರೆ ಅಭ್ಯರ್ಥಿಯ ಪರವಾಗಿ ಯಾರೂ ಪ್ರಚಾರ ಮಾಡುವುದಿಲ್ಲ, ಸಂಘಟನೆ ಕಾರ್ಯಗಳು ನಡೆಯುವುದಿಲ್ಲ. ಡಿಕೆ ಸಹೋದರರ ವಿರುದ್ಧ ಹೋರಾಡುವಷ್ಟು ತ್ರಾಣ ನಮ್ಮಲ್ಲಿಲ್ಲ. ಕಳೆದ 30 ವರ್ಷದಿಂದ ಇದೇ ರೀತಿ ಆಗುತ್ತಿದೆ, ನಿಮ್ಮ ಗಮನಕ್ಕೆ ವಿಷಯವನ್ನು ತಂದಾಗ್ಯೂ ನಡೆಯುತ್ತಿರುವ ಪ್ರಮಾದವನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿಲ್ಲ ಎಂದು ಕಾರ್ಯಕರ್ತರ ಒಂದು ಗುಂಪು ವಾದಿಸಿದಾಗ ಮತ್ತೊಂದು ಗುಂಪು ಅದನ್ನು ತೀವ್ರವಾಗಿ ವಿರೋಧಿಸಿತು. ಆಗಲೇ ಗಲಾಟೆಮಯ ವಾತಾವರಣ ಸೃಷ್ಟಿಯಾಯಿತು.

ಕಾರ್ಯಕರ್ತರು ಯಾವ ಪ್ರಮಾಣದಲ್ಲಿ ರೊಚ್ಚಿಗೆದ್ದಿದ್ದರೆಂದರೆ, ಈ ಬಾರಿ ನಿಮ್ಮ ನಿಲುವು ಬದಲಾಯಿಸಿ ಇಲ್ಲದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿಯವರಿಗೆ ಹೇಳಿದರು.

ಅವರ ಮಾತು ಮತ್ತು ಎರಡು ಗುಂಪುಗಳ ನಡುವೆ ನಿಲ್ಲದ ಗಲಾಟೆಯಿಂದ ಬೇಸತ್ತ ಕುಮಾರಸ್ವಾಮಿಯವರು ಸಭೆಯನ್ನು ಮೊಟಕುಗೊಳಿಸಿ ಹೊರನಡೆದರು.

ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಕುಮಾರಸ್ವಾಮಿಯವರು ಕನಕಪುರದಲ್ಲಿ ತಪ್ಪು ಜರುಗಿರುವುದು ನಿಜ, ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ಕನಕಪುರ ‌ಜನರನ್ನ ಬೀದಿಗೆ ನಿಲ್ಲಿಸಿದೆ. ಆದರೆ ಈ ಬಾರಿ ಆ ತಪ್ಪಿನ ಪುನರಾವರ್ತನೆ ಆಗಲ್ಲ. ಕನಕಪುರ ಈ ಬಾರಿ ಉತ್ತಮ ಮತ್ತು ಸಮರ್ಥ ಅಭ್ಯರ್ಥಿಯನ್ನೇ ನಿಲ್ಲಿಸುತ್ತೇವೆ ಎಂದರು.

ಇದನ್ನೂ ಓದಿ:   Communal Harmony: ಎಲ್ಲವನ್ನು ಸರಿಪಡಿಸಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಒಂದು ತಿಂಗಳ ಗಡುವು