ಬೆಳಗಾವಿ ನಂದಿನಿ ಹಾಲು ಪೊಟ್ಟಣಗಳ ಮೇಲೆ ಹಿಂದಿ ಭಾಷೆಯಲ್ಲಿ ವಿವರಗಳು! ಹಿಂದಿ ಹೇರಿಕೆ ಆರಂಭಗೊಂಡಿತೇ?

ಬೆಳಗಾವಿಯಲ್ಲಿ ಈ ಮೊದಲು ಮಾರಾಟವಾಗುತ್ತಿದ್ದ ನಂದಿನಿ ಹಾಲಿನ ಪೊಟ್ಟಣಗಳ ಮೇಲೆ ಕನ್ನಡದಲ್ಲಿ ಮುದ್ರಿತಗೊಂಡ ವಿವರಗಳಿರುತ್ತಿದ್ದವು. ಆದರೆ ಈಗ ಇದ್ದಕ್ಕಿದ್ದಂತೆ ವಿವರಗಳನ್ನು ಹಿಂದಿಯಲ್ಲಿ ಮುದ್ರಿಸಲು ಆರಂಭಿಸಲಾಗಿದೆ.

TV9kannada Web Team

| Edited By: Arun Belly

Apr 09, 2022 | 7:11 PM

ಬೆಳಗಾವಿ: ನಂದಿನಿ ಹಾಲು (Nandini milk) ನಮ್ಮ ರಾಜ್ಯದ ಅತಿದೊಡ್ಡ ಗ್ರಾಹಕ ಬಳಕೆ ಬ್ರ್ಯಾಂಡ್ ಗಳಲ್ಲಿ ಒಂದು. ರಾಜ್ಯದ ಪ್ರತಿ ಮನೆಯಲ್ಲಿ ನಿಮಗೆ ನಂದಿನಿ ಹಾಲು ಪೊಟ್ಟಣಗಳು (packets) ಸಿಗುತ್ತವೆ. ನಂದಿನಿ ಹಾಲಿನಲ್ಲಿ ಹಲವಾರು ವಿಧಗಳಿವೆ, ಮತ್ತು ಪೊಟ್ಟಣಗಳನ್ನು ನೋಡಿ ನಾವು ಅದು ಯಾವ ವೆರೈಟಿ ಅಂತ ಹೇಳಿಬಿಡುತ್ತೇವೆ. ಯಾಕೆಂದರೆ ನಂದಿನಿ ಹಾಲು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹಾಲಿನ ಪೊಟ್ಟಣಗಳ ಮೇಲೆ ಎಲ್ಲವೂ ಕನ್ನಡದಲ್ಲೇ (Kannada) ಮುದ್ರಿತವಾಗಿರುತ್ತದೆ. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ವಾಸಮಾಡುವ ಜನ ಪೊಟ್ಟಣದ ಮೇಲೆ ಬರೆದಿರುವುದನ್ನು ಸುಲಭವಾಗಿ ಓದಿ ಅರ್ಥಮಾಡಿಕೊಳ್ಳುತ್ತಾರೆ. ಆದರೆ ನೀವು ಬೆಳಗಾವಿಗೆ ಹೋಗಿದ್ದೇಯಾದರೆ, ಇದೇ ಮಾತನ್ನು ಹೇಳಲು ಸಾಧ್ಯವಾಗುವುದಿಲ್ಲ. ಯಾಕೆ ಅಂತ ನಿಮಗೆ ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ.

ಹೌದು, ಮಾರಾಯ್ರೇ. ಬೆಳಗಾವಿಯಲ್ಲಿ ಸಿಗುವ ಕನ್ನಡದ ಹೆಮ್ಮೆಯ ನಂದಿನಿ ಹಾಲಿನ ಪೊಟ್ಟಣಗಳ ಮೇಲೆ ವಿವರಗಳನ್ನೆಲ್ಲ ಹಿಂದಿಯಲ್ಲಿ ಮುದ್ರಿಸಲಾಗಿದೆ.

ಭಾರತದಲ್ಲಿರುವ ಸಂಪರ್ಕ ಭಾಷೆಯಾಗಿ (ಕಮ್ಯುನಿಕೇಶನ್) ಹಿಂದಿ ಬಳಸಲು ಮೊನ್ನೆಯಷ್ಟೇ ಕೇಂದ್ರ ಗೃಹಸಚಿವ ಅಮಿತ್ ಶಾ ಕರೆ ನೀಡಿದ್ದಾರೆ. ಕರ್ನಾಟಕವಲ್ಲದೆ ಬೇರೆ ಹಲವಾರು ರಾಜ್ಯಗಳಲ್ಲಿ (ಹಿಂದಿ ಮಾತಾಡುವ ರಾಜ್ಯಗಳನ್ನು ಬಿಟ್ಟು) ಶಾ ಅವರ ಹೇಳಿಕೆಗೆ ತೀವ್ರ ಸ್ವರೂಪದ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಅಭಿಯಾನಗಳು ಆರಂಭಗೊಂಡಿವೆ.

ಬೆಳಗಾವಿಯಲ್ಲಿ ಈ ಮೊದಲು ಮಾರಾಟವಾಗುತ್ತಿದ್ದ ನಂದಿನಿ ಹಾಲಿನ ಪೊಟ್ಟಣಗಳ ಮೇಲೆ ಕನ್ನಡದಲ್ಲಿ ಮುದ್ರಿತಗೊಂಡ ವಿವರಗಳಿರುತ್ತಿದ್ದವು. ಆದರೆ ಈಗ ಇದ್ದಕ್ಕಿದ್ದಂತೆ ವಿವರಗಳನ್ನು ಹಿಂದಿಯಲ್ಲಿ ಮುದ್ರಿಸಲು ಆರಂಭಿಸಲಾಗಿದೆ. ಇದ್ಯಾಕೆ ಹೀಗೆ ಅಂತ ಸಂಬಂಧಪಟ್ಟ ಕರ್ನಾಟಕ ಹಾಲು ಒಕ್ಕೂಟದ ಪದಾಧಿಕಾರಿಗಳು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು. ಪ್ರತಿಯೊಂದು ಜಿಲ್ಲೆ ತನ್ನದೇ ಆದ ಹಾಲು ಉತ್ಪಾದಕ ಸಂಘಗಳ ಒಕ್ಕೂಟ ಹೊಂದಿರುತ್ತದೆ ಮತ್ತು ಎಲ್ಲಾ ಒಕ್ಕೂಟಗಳ ಮಹಾಮಂಡಳ ಬೆಂಗಳೂರಲ್ಲಿದೆ.

ಹಿಂದಿ ಪೊಟ್ಟಣಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಹಾಲು ಉತ್ಪಾದಕ ಸಂಘಗಳ ಒಕ್ಕೂಟ ಎಲ್ಲಿರಿಗಿಂತ ಮೊದಲು ಕಾರ್ಯಪ್ರವೃತ್ತಗೊಳ್ಳಬೇಕು.

ಇದನ್ನೂ ಓದಿ:   ಕೊರೊನಾ ಲಸಿಕೆ 3ನೇ ಡೋಸ್ ನೀಡುವ ಖಾಸಗಿ ಕೇಂದ್ರಗಳು ಸೇವಾಶುಲ್ಕವನ್ನು 150 ರೂ.ಗಿಂತ ಹೆಚ್ಚು ಪಡೆಯುವಂತಿಲ್ಲ: ಕೇಂದ್ರ ಸರ್ಕಾರ

Follow us on

Click on your DTH Provider to Add TV9 Kannada