Communal Harmony: ಎಲ್ಲವನ್ನು ಸರಿಪಡಿಸಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಒಂದು ತಿಂಗಳ ಗಡುವು

HD Kumaraswamy: ಇತ್ತೀಚೆಗೆ ಪ್ರತಿನಿತ್ಯ ಇವರು ಒಂದೊಂದು ವಿಚಾರವನ್ನು ಎತ್ತುತ್ತಿರುವುದನ್ನು ನೋಡಿದರೆ ಸರ್ಕಾರದ ಜಾಣಮೌನ ಎಲ್ಲದಕ್ಕೂ ಪ್ರೋತ್ಸಾಹ ಕೊಡುತ್ತಿದೆ ಅನಿಸುತ್ತಿದೆ. ಈ ರೀತಿ ವಾತಾವರಣವನ್ನು ಸೃಷ್ಟಿ ಮಾಡಿದವರನ್ನು ತಕ್ಷಣ ಸರ್ಕಾರ ಬಂಧಿಸಬೇಕು, ಇಲ್ಲದಿದ್ದರೆ ಸರ್ಕಾರ ಇದೆ ಅಂತ ಯಾರು ಹೇಳುತ್ತಾರೆ? ಎಂದು ಬಿಜೆಪಿ ಆಡಳಿತಾರೂಢ ರಾಜ್ಯ ಸರ್ಕಾರವನ್ನು ಹೆಚ್​ ಡಿ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ

Communal Harmony: ಎಲ್ಲವನ್ನು ಸರಿಪಡಿಸಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಒಂದು ತಿಂಗಳ ಗಡುವು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 08, 2022 | 3:21 PM

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ನಾಯಕ ಹೆಚ್​ ಡಿ ಕುಮಾರಸ್ವಾಮಿ ಅವರು (HD Kumaraswamy) ಒಂದು ತಿಂಗಳು ಗಡುವು ನೀಡಿದ್ದಾರೆ. ಆ ಒಂದು ತಿಂಗಳೊಳಗೆ ಎಲ್ಲವನ್ನೂ ಸರಿಪಡಿಸಿಕೊಳ್ಳಬೇಕು ಎಂದು ಕಟ್ಟೆಚ್ಚರಿಸಿದ್ದಾರೆ. ರಾಜ್ಯದಲ್ಲಿ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಸವುಸ್ತಾರವಾಗಿ ಮಾತನಾಡಿರುವ ಹೆಚ್​ ಡಿ ಕುಮಾರಸ್ವಾಮಿ ಅವರು ಹಲವಾರು ವರ್ಷಗಳಿಂದ ನಾವು ಸಾಮರಸ್ಯದಲ್ಲಿ ಬಾಳುತ್ತಿದ್ದೇವೆ (communal harmony). ಆದರೆ ಇತ್ತೀಚೆಗೆ ಪ್ರತಿನಿತ್ಯ ಇವರು ಒಂದೊಂದು ವಿಚಾರವನ್ನು ಎತ್ತುತ್ತಿರುವುದನ್ನು ನೋಡಿದರೆ ಸರ್ಕಾರದ ಜಾಣಮೌನ ಎಲ್ಲದಕ್ಕೂ ಪ್ರೋತ್ಸಾಹ ಕೊಡುತ್ತಿದೆ ಅನಿಸುತ್ತಿದೆ. ಈ ರೀತಿ ವಾತಾವರಣವನ್ನು ಸೃಷ್ಟಿ ಮಾಡಿದವರನ್ನು ತಕ್ಷಣ ಸರ್ಕಾರ ಬಂಧಿಸಬೇಕು, ಇಲ್ಲದಿದ್ದರೆ ಸರ್ಕಾರ ಇದೆ ಅಂತ ಯಾರು ಹೇಳುತ್ತಾರೆ? ಎಂದು ಬಿಜೆಪಿ ಆಡಳಿತಾರೂಢ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ (Basavaraj Bommai).

ಮುಸ್ಲಿಂ ಚಾಲಕರು ಓಡಿಸುವ ವಾಹನಗಳನ್ನು ಬಳಸಬಾರದು ಅಂದರೆ ಎಲ್ಲ ಜನರಿಗೂ, ಎಲ್ಲಿಂದ ವಾಹನಗಳ ವ್ಯವಸ್ಥೆ ಮಾಡಲು ಸಾಧ್ಯ? ಮುಂದಿನ ದಿನಗಳಲ್ಲಿ ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತೀರಿ? ರಾಜ್ಯವನ್ನು ಶಿಲಾಯುಗಕ್ಕೆ ತೆಗೆದುಕೊಂಡು ಹೋಗುತ್ತೀರಾ? ಧರ್ಮ ಸಂಘರ್ಷದ ವಾತಾವರಣ ನಿಜಕ್ಕೂ ರಾಜ್ಯದಲ್ಲಿ ಇದೆಯಾ? ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರು ಬಂದರೆ ರಾಜ್ಯದಲ್ಲಿರುವ ಶಾಂತಿಯುತ ವಾತಾವರಣವಿದೆಯಾ? ನಿಮ್ಮ ಸರ್ಕಾರದ ಕೊಡುಗೆ ಏನಿದೆ? ವೋಟ್ ಬ್ಯಾಂಕ್ ರಾಜಕಾರಣಕ್ಕೋಸ್ಕರ ಬಿಜೆಪಿ ಈ ರೀತಿಯಾಗಿ ಮಾಡುತ್ತಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಉತ್ತರ ಇಂಡಿಯಾದಲ್ಲಿ ಯಾವ ರೀತಿ ಹಿಂದೂ ಸಂಸ್ಕೃತಿಯ ಲ್ಯಾಬ್ ತೆರದಿದ್ದರೋ ಆ ಲ್ಯಾಬ್ ಅನ್ನು ಕರ್ನಾಟಕದಲ್ಲಿಯೂ ಚುನಾವಣೆಗೆ ತೆರೆಯಲು ಮುಂದಾಗಿದ್ದಾರೆ. ಆ ಲ್ಯಾಬ್ ಗಳು ಕರ್ನಾಟಕದಲ್ಲಿ ವರ್ಕ್ ಔಟ್ ಆಗಲ್ಲ. ಹಾಗಾಗಿ ಸರ್ಕಾರಕ್ಕೆ ಒಂದು ತಿಂಗಳು ಗಡುವು ಕೊಡುತ್ತಿದ್ದೇನೆ, ಆ ಒಂದು ತಿಂಗಳ ಒಳಗೆ ಎಲ್ಲವನ್ನು ಸರಿಪಡಿಸಿಕೊಳ್ಳಬೇಕು ಎಂದು ಹೆಚ್​ ಡಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಸರ್ಕಾರಕ್ಕೆ ನೇರ ಎಚ್ಚರಿಕೆ.. ಹುಷಾರ್.. ರಂಜಾನ್​ವರೆಗೂ ಗಡುವು ಕೊಡ್ತಿದ್ದೀನಿ

ಫ್ರೀಡಂ ಪಾರ್ಕ್​ನಲ್ಲಿ ಧರಣಿ ನಡೆಸಿದ ಜೆಡಿಎಸ್ ನಾಯಕರು: ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ ಖಂಡಿಸಿ ಇಂದು (ಏಪ್ರಿಲ್ 8) ಜೆಡಿಎಸ್ ಪ್ರತಿಭಟನೆ (JDS Protest) ನಡೆಸಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಧರಣಿ ನಡೆಸಿರುವ ಜೆಡಿಎಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಸೆಂಚುರಿ ಬಾರಿಸಿದ ಸಂಭ್ರಮದಲ್ಲಿರುವಂತೆ ವ್ಯಂಗ್ಯದ ಪೋಸ್ಟರ್ ಪ್ರದರ್ಶನ ಮಾಡಿದ್ದಾರೆ. ಗ್ಯಾಸ್ ಸಿಲಿಂಡರ್​ಗೆ ಮೋದಿ ಪೋಸ್ಟರ್ ಅಂಟಿಸಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಭಾಷಣ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾಡಿನ ಜನರ ದೃಷ್ಟಿ ಬೇರೆ ಕಡೆ ಡೈವರ್ಟ್ ಮಾಡಿ ಬಿಜೆಪಿ ಧರ್ಮ ಧರ್ಮದ ನಡುವೆ ಸಂಘರ್ಷವನ್ನು ಮಾಡುತ್ತಿದೆ ಎಂದು ಹೇಳಿದರು.

ಬೆಲೆ ಏರಿಕೆ ಗಗನಕ್ಕೆ ಹೋಗುತ್ತಿದೆ. 60 ಸಾವಿರ ಸ್ಟೀಲ್ ಬೆಲೆ ಇತ್ತು. ಇವತ್ತು ಒಂದು ಲಕ್ಷ ತಲುಪಿದೆ. ವಿದ್ಯುತ್ ಶಕ್ತಿ ಯೂನಿಟ್ ಬೆಲೆ ಹೆಚ್ಚು ಮಾಟಿದ್ದಾರೆ. ಹಾಲಿನ ದರ ಹೆಚ್ಚು ಮಾಡಲು ತೀರ್ಮಾನ ಮಾಡಿದ್ದಾರಂತೆ. ಹಿಜಾಬ್ ಸಣ್ಣ ಘಟನೆ ಅದನ್ನು ಬಿಜೆಪಿ ಮಾಡಿದ್ದರು. ಸರ್ಕಾರ ಜಾಣ ಮೌನಕ್ಕೆ ಹೋದರು. ಅಲ್ ಖೈದಾಗೆ ವಿಚಾರದಲ್ಲಿ ತನಿಖೆ ಮಾಡಲು ಹೇಳಿದ್ದಾರೆ. ಅವತ್ತಿನ ಮನಮೋಹನ್ ಸಿಂಗ್ ಅವರನ್ನು ಮೌನಿ ಎಂದಿದ್ರು. ಇವತ್ತು ಮೋದಿ, ಬೊಮ್ಮಯಿ ಮೌನಿಯಾಗಿದ್ದಾರೆ. ಮಂಕಿಬಾತ್​ನಲ್ಲಿ ಬರೀ ಭಾಷಣ ಮಾಡುವುದಾಯ್ತು ಜನಪರ ಕೆಲಸ ಮಾಡಲಿಲ್ಲ. ಧರ್ಮದ ಗಲಾಟೆ ಮಾಡಿದ್ದೀರಿ, ನೀತಿಗೆಟ್ಟ ಸರ್ಕಾರ ಇದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಜೆಡಿಎಸ್​ನಿಂದ ಪ್ರತಿಭಟನೆ! ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಕಿಡಿ

ಇದನ್ನೂ ಓದಿ: ಬಿಜೆಪಿ ಕುಮ್ಮಕ್ಕಿನಿಂದಲೇ ವಿವಾದ ಸೃಷ್ಟಿ; ಪರಿಸ್ಥಿತಿ ವಿಕೋಪಕ್ಕೂ ಮುನ್ನ ಬೊಮ್ಮಾಯಿ ರಾಜೀನಾಮೆ ನೀಡಿ ಮನೆಗೆ ಹೋಗಲಿ -ಸಿದ್ದರಾಮಯ್ಯ

Published On - 2:02 pm, Fri, 8 April 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ