ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಜೆಡಿಎಸ್ನಿಂದ ಪ್ರತಿಭಟನೆ! ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕಿಡಿ
ಬೆಲೆ ಏರಿಕೆ ಗಗನಕ್ಕೆ ಹೋಗುತ್ತಿದೆ. 60 ಸಾವಿರ ಸ್ಟೀಲ್ ಬೆಲೆ ಇತ್ತು. ಇವತ್ತು ಒಂದು ಲಕ್ಷ ತಲುಪಿದೆ. ವಿದ್ಯುತ್ ಶಕ್ತಿ ಯೂನಿಟ್ ಬೆಲೆ ಹೆಚ್ಚು ಮಾಟಿದ್ದಾರೆ. ಹಾಲಿನ ದರ ಹೆಚ್ಚು ಮಾಡಲು ತೀರ್ಮಾನ ಮಾಡಿದ್ದಾರಂತೆ.
ಬೆಂಗಳೂರು: ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ ಖಂಡಿಸಿ ಇಂದು (ಏಪ್ರಿಲ್ 8) ಜೆಡಿಎಸ್ ಪ್ರತಿಭಟನೆ (JDS Protest) ನಡೆಸಿದೆ. ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಧರಣಿ ನಡೆಸಿರುವ ಜೆಡಿಎಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಸೆಂಚುರಿ ಬಾರಿಸಿದ ಸಂಭ್ರಮದಲ್ಲಿರುವಂತೆ ವ್ಯಂಗ್ಯದ ಪೋಸ್ಟರ್ ಪ್ರದರ್ಶನ ಮಾಡಿದ್ದಾರೆ. ಗ್ಯಾಸ್ ಸಿಲಿಂಡರ್ಗೆ ಮೋದಿ ಪೋಸ್ಟರ್ ಅಂಟಿಸಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಭಾಷಣ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy), ನಾಡಿನ ಜನರ ದೃಷ್ಟಿ ಬೇರೆ ಕಡೆ ಡೈವರ್ಟ್ ಮಾಡಿ ಬಿಜೆಪಿ ಧರ್ಮ ಧರ್ಮದ ನಡುವೆ ಸಂಘರ್ಷವನ್ನು ಮಾಡುತ್ತಿದೆ ಎಂದು ಹೇಳಿದರು.
ಬೆಲೆ ಏರಿಕೆ ಗಗನಕ್ಕೆ ಹೋಗುತ್ತಿದೆ. 60 ಸಾವಿರ ಸ್ಟೀಲ್ ಬೆಲೆ ಇತ್ತು. ಇವತ್ತು ಒಂದು ಲಕ್ಷ ತಲುಪಿದೆ. ವಿದ್ಯುತ್ ಶಕ್ತಿ ಯೂನಿಟ್ ಬೆಲೆ ಹೆಚ್ಚು ಮಾಟಿದ್ದಾರೆ. ಹಾಲಿನ ದರ ಹೆಚ್ಚು ಮಾಡಲು ತೀರ್ಮಾನ ಮಾಡಿದ್ದಾರಂತೆ. ಹಿಜಾಬ್ ಸಣ್ಣ ಘಟನೆ ಇದನ್ನು ಬಿಜೆಪಿ ಮಾಡಿದ್ದರು. ಸರ್ಕಾರ ಜಾಣ ಮೌನಕ್ಕೆ ಹೋದರು. ಅಲ್ ಖೈದಾಗೆ ವಿಚಾರದಲ್ಲಿ ತನಿಖೆ ಮಾಡಲು ಹೇಳಿದ್ದಾರೆ. ಅವತ್ತಿನ ಮನಮೋಹನ್ ಸಿಂಗ್ ಅವರನ್ನು ಮೌನಿ ಎಂದಿದ್ರು. ಇವತ್ತು ಮೋದಿ, ಬೊಮ್ಮಯಿ ಮೌನಿಯಾಗಿದ್ದಾರೆ. ಮಂಕಿಬಾತ್ನಲ್ಲಿ ಬರೀ ಭಾಷಣ ಮಾಡುವುದಾಯ್ತು ಜನಪರ ಕೆಲಸ ಮಾಡಲಿಲ್ಲ. ಧರ್ಮದ ಗಲಾಟೆ ಮಾಡಿದ್ದೀರಿ, ನೀತಿಗೆಟ್ಟ ಸರ್ಕಾರ ಇದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಅವತ್ತಿನ ಮೈತ್ರಿ ಸರ್ಕಾರ ಪತನ ಮಾಡಿದ್ರು. ಅವತ್ತು ಕಾಂಗ್ರೆಸ್ ನಾಯಕರು ಸರಿಯಾಗಿ ನಡೆದುಕೊಂಡಿದ್ದರೆ ಇಂತಹ ಸರ್ಕಾರ ಬರುತ್ತಿರಲಿಲ್ಲ. ಇಂತಹ ಕೆಟ್ಟ ಸರ್ಕಾರ ಬರಲು ಕಾಂಗ್ರೆಸ್ ಕಾರಣ. ನಾನು ಹೋಟೆಲ್ನಲ್ಲಿ ಇದ್ದೆ ಎಂದು ಹೇಳುತ್ತಿದ್ದರು. ನಾನು ಬೆಳಗ್ಗೆ 9 ರಿಂದ 12 ಗಂಟೆವರೆಗೂ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ನೀವು ಈ ರೀತಿಯಲ್ಲಿ ಮಾಡಿರುವ ಒಂದು ಉದಾಹರಣೆ ತೋರಿಸಿ ಅಂತ ಹೆಚ್ಡಿಕೆ ಹೇಳಿದ್ದಾರೆ.
ನಮ್ಮ ರಾಜ್ಯದ ದುರಂತ- ಶರವಣ : ಇನ್ನು ಪ್ರತಿಭಟನೆಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಟಿಎ ಶರವಣ ಕೊವಿಡ್ ನೆಪದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಸಿಎಂ ಬೊಮ್ಮಾಯಿ 2 ದಿನ ದೆಹಲಿ ಪ್ರವಾಸ ಹೋಗಿದ್ದರು. ಹೈಕಮಾಂಡ್ ನಾಯಕರ ಭೇಟಿಗೆ ಅವಕಾಶ ಕೊಡಲಿಲ್ಲ. ಇದು ನಮ್ಮ ರಾಜ್ಯದ ದುರಂತ. ಕೊವಿಡ್ ಹೆಸರಲ್ಲಿ ರಾಜ್ಯವನ್ನು ಲೂಟಿ ಮಾಡಿದ್ದಾರೆ. ದಿನೇದಿನೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗ್ತಿಗುತ್ತಿದೆ. ಮುಂದೆ ಏನ್ ಆಗುತ್ತೆ ಅನ್ನೋ ಆತಂಕ ಶುರುವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ
ದೆಹಲಿಗಿಂತ ಹೆಚ್ಚು ತೆರಿಗೆ ಪಾವತಿಸಿದರೂ ಬೆಂಗಳೂರು ನಿರ್ಲಕ್ಷ್ಯ: ಮೋಹನ್ ದಾಸ್ ಪೈ ವಿಷಾದ
Rishabh Pant: ಸತತ ಎರಡು ಸೋಲು: ಪಂದ್ಯ ಮುಗಿದ ಬಳಿಕ ರಿಷಭ್ ಪಂತ್ ಆಡಿದ ಮಾತುಗಳೇನು?
Published On - 1:08 pm, Fri, 8 April 22