ಕಾಂಗ್ರೆಸ್‌ ಅಂದ್ರೆ ಸೈತಾನರನ್ನೇ ಪೋಷಿಸಿಕೊಂಡು ಬಂದ ಪಕ್ಷ: ಟ್ವೀಟ್ ಮೂಲಕ ಕಿಡಿಕಾರಿದ ಎಂಪಿ ರೇಣುಕಾಚಾರ್ಯ

ಆಲ್ ಖೈದಾ ಉಗ್ರಗಾಮಿ ಸಂಘಟನೆ ಹಾಗೂ ಮುಖ್ಯಸ್ಥ ಆಯ್ಯನ್ ಜವಾಹಾರಿ ಮುಂದೊಂದು ದಿನ ವೀರ ಸ್ವತಂತ್ರ ಹೋರಾಟಗಾರರಾಗಿ ಕಂಡರೂ ಅಚ್ಚರಿಯಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷ ಇಂತಹ ಸೈತನಾರನ್ನೇ ಪೋಷಿಸಿಕೊಂಡು ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ! ಎಂದು ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಕಾಂಗ್ರೆಸ್‌ ಅಂದ್ರೆ ಸೈತಾನರನ್ನೇ ಪೋಷಿಸಿಕೊಂಡು ಬಂದ ಪಕ್ಷ: ಟ್ವೀಟ್ ಮೂಲಕ ಕಿಡಿಕಾರಿದ ಎಂಪಿ ರೇಣುಕಾಚಾರ್ಯ
ಎಂ.ಪಿ ರೇಣುಕಾಚಾರ್ಯ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Apr 07, 2022 | 4:01 PM

ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ​ ವಿರುದ್ಧ ಶಾಸಕ ರೇಣುಕಾಚಾರ್ಯ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಅಂದ್ರೆ ಸೈತಾನರನ್ನೇ ಪೋಷಿಸಿಕೊಂಡು ಬಂದ ಪಕ್ಷ. ನಿಮ್ಮ ಹೇಳಿಕೆ ಏನು ಹೊಸದಲ್ಲ. 2018 ರಲ್ಲಿ ಜನರು ನಿಮಗೆ ಪಾಠ ‌ಕಲಿಸಿದರು, ನೆನಪಿಟ್ಟುಕೊಳ್ಳಿ. ಸಿದ್ದರಾಮಯ್ಯ ಜವಾಹಿರಿಯನ್ನ ಹೋರಾಟಗಾರ ಅಂದ್ರು ಅಚ್ಚರಿಯಿಲ್ಲ. RSS ಗೂ ಅಲ್​ಖೈದಾಗೂ ಹೋಲಿಸುವುದು ಆತ್ಮಸಾಕ್ಷಿಗೆ ಸರಿನಾ? ಎಂದು ಪ್ರಶ್ನೆ ಮಾಡಿ ಸಿದ್ದರಾಮಯ್ಯ​ ವಿರುದ್ಧ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಕಾಮಾಲೆ ಕಣ್ಣಿಗೆ ಕಾಣುವುದೆಲ್ಲವೂ ಹಳದಿ ಎಂಬಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಲ್ ಖೈದಾ ಉಗ್ರಗಾಮಿ ಸಂಘಟನೆ ಹಾಗೂ ಮುಖ್ಯಸ್ಥ ಆಯ್ಯನ್ ಜವಾಹಾರಿ ಮುಂದೊಂದು ದಿನ ವೀರ ಸ್ವತಂತ್ರ ಹೋರಾಟಗಾರರಾಗಿ ಕಂಡರೂ ಅಚ್ಚರಿಯಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷ ಇಂತಹ ಸೈತನಾರನ್ನೇ ಪೋಷಿಸಿಕೊಂಡು ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ! ಎಂದು ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ನಿಮ್ಮ ಹೇಳಿಕೆಯಲ್ಲಿ ನಮಗೆ ಹೊಸದೇನು ಕಾಣುತ್ತಿಲ್ಲ. ಅತಿಯಾದ ಓಲೈಕೆಯ ಪರಿಣಾಮ 2018 ರ ಚುನಾವಣೆಯಲ್ಲಿ ನಿಮ್ಮ ಪಕ್ಷದ ಸ್ಥಿತಿ ಏನಾಯಿತು ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಿ. ಇದು ಆರ್ ಎಸ್ ಎಸ್ ಸೃಷ್ಟಿ ಎನ್ನುವ ನಿಮಗೆ ಆತ್ಮಸಾಕ್ಷಿ ಎಂಬುದಿದ್ದರೆ. ಅಲ್​ಖೈದಾದ ಮುಖವಾಣಿ ಅಸ್​-ಸಾಹಬ್​ ಎಂಬ ಸಾಮಾಜಿಕ ಜಾಲತಾಣದಲ್ಲಿ ಅಮನ್-ಅಲ್​-ಜವಾಹಿರಿಯ ಮಾತನಾಡಿರುವ ವಿಡಿಯೋ ಒಂದು ಬಾರಿ ನೋಡಿ ನಂತರ ಸಂಘಪರಿವಾರದ ಬಗ್ಗೆ ಮಾತನಾಡಿ. ಅಲ್ಪಸಂಖ್ಯಾತರ ಓಲೈಕೆಗಾಗಿ ಇನ್ನು ಎಷ್ಟು ದಿನ ಇಂತಹ ಹಸಿ-ಬಿಸಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತೀರಿ? ಎಂದು ರೇಣುಕಾಚಾರ್ಯ ಟ್ವೀಟ್ ಮೂಲಕ ಕೇಳಿದ್ದಾರೆ.

ನೀವು ಹೇಳಿದ್ದನ್ನೆಲ್ಲಾ ಒಪ್ಪಲು ಕರ್ನಾಟಕದ ಜನ ಕಿವಿಮೇಲೆ ಲಾಲ್ ಭಾಗ್ ಹೂವು ಇಟ್ಟುಕೊಂಡಿದ್ದಾರೆ ಎಂದು ಭಾವಿಸಿದ್ದೀರಾ? ಎಷ್ಟೇ ಆಗಲಿ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿ ಬಂದವರು ನೀವು. 2018ರ ಚುನಾವಣೆಯಲ್ಲಿ ಆದ ಗತಿಯೇ 2023 ರ ಚುನಾವಣೆ ಯಲ್ಲಿ ಆಗುತ್ತದೆ. ನಿಮ್ಮ ತುಷ್ಟೀಕರಣಕ್ಕೆ ಜನತೆ ತಕ್ಕ ಪಾಠ ಕಲಿಸುವುದರಲ್ಲಿ ಸಂದೇಹವೇ ಬೇಡ. ಕಾದು ನೋಡಿ ಎಂದು 5 ಟ್ವೀಟ್​ಗಳ ಮೂಲಕ ಆನ್ಸರ್ ಸಿದ್ದರಾಮಯ್ಯ ಎಂಬ ಹ್ಯಾಷ್ ಟ್ಯಾಗ್ ಬಳಸಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ನಕಲಿ ಜಾತಿ ಪ್ರಮಾಣಪತ್ರ ಪಡೆದ ಆರೋಪ; ಶಾಸಕ ರೇಣುಕಾಚಾರ್ಯ ಪುತ್ರಿ ಚೇತನಾ ವಿರುದ್ಧ ದೂರು ದಾಖಲು

ಇದನ್ನೂ ಓದಿ: ಜಾತಿ ಪ್ರಮಾಣಪತ್ರ ವಿವಾದ: ಎಂ.ಪಿ ರೇಣುಕಾಚಾರ್ಯ ಸಹೋದರ ಸೇರಿ 11 ಮಂದಿ ವಿರುದ್ಧ FIR ದಾಖಲು

Published On - 4:00 pm, Thu, 7 April 22