ಜಾತಿ ಪ್ರಮಾಣಪತ್ರ ವಿವಾದ: ಎಂ.ಪಿ ರೇಣುಕಾಚಾರ್ಯ ಸಹೋದರ ಸೇರಿ 11 ಮಂದಿ ವಿರುದ್ಧ FIR ದಾಖಲು

ಈ ಮೊದಲು ದ್ವಾರಕೇಶ್ವರಯ್ಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ 13 ಜನ ದಲಿತ ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ದ್ವಾರಕೇಶ್ವರಯ್ಯ ಸೇರಿದಂತೆ 11 ಜನರ ಮೇಲೆ ದಲಿತ ಸಂಘಟನೆ ಮುಖಂಡರಿಂದ ಪ್ರಕರಣ ದಾಖಲು ಮಾಡಲಾಗಿದೆ.

ಜಾತಿ ಪ್ರಮಾಣಪತ್ರ ವಿವಾದ: ಎಂ.ಪಿ ರೇಣುಕಾಚಾರ್ಯ ಸಹೋದರ ಸೇರಿ 11 ಮಂದಿ ವಿರುದ್ಧ FIR ದಾಖಲು
FIR
Follow us
TV9 Web
| Updated By: ganapathi bhat

Updated on: Apr 03, 2022 | 3:05 PM

ದಾವಣಗೆರೆ: ಬೇಡ ಜಂಗಮ ಮೀಸಲಾತಿ ಪತ್ರ ವಿವಾದಕ್ಕೆ ಸಂಬಂಧಿಸಿ ರೇಣುಕಾಚಾರ್ಯ ಸಹೋದರ ಸೇರಿ 11 ಜನರ ವಿರುದ್ಧ FIR ದಾಖಲು ಮಾಡಲಾಗಿದೆ. ದಾವಣಗೆರೆ ಕೆಟಿಜೆ ನಗರ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ದಲಿತ ಸಂಘಟನೆ ಮುಖಂಡ ಹೆಗ್ಗರೆ ರಂಗಪ್ಪ ದೂರು ನೀಡಿದ್ದರು. ದಲಿತ ಮುಖಂಡರು, ದ್ವಾರಕೇಶ್ವರಯ್ಯ ಮಧ್ಯೆ ವಾಗ್ವಾದ ನಡೆದಿತ್ತು. ಮಾರ್ಚ್​ 28 ರಂದು ಕೆ.ಬಿ. ಬಡಾವಣೆಯಲ್ಲಿ ಘಟನೆ ನಡೆದಿತ್ತು. ದ್ವಾರಕೇಶ್ವರಯ್ಯನಿಗೆ ದಲಿತ ಮುಖಂಡರು ಘೇರಾವ್ ಹಾಕಿದ್ದರು. ಇದೀಗ ರೇಣುಕಾಚಾರ್ಯ ಸೋದರರ ದ್ವಾರಕೇಶ್ವರಯ್ಯ ವಿರುದ್ಧ FIR ದಾಖಲಿಸಲಾಗಿದೆ. ದ್ವಾರಕೇಶ್ವರಯ್ಯ ಸೇರಿದಂತೆ 11 ಜನರ ವಿರುದ್ಧ FIR ದಾಖಲು ಮಾಡಲಾಗಿದೆ. 143, 147, 323, 504, 506, 149 ಐಪಿಸಿ ಸೆಕ್ಷನ್ ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ.

ಈ ಮೊದಲು ದ್ವಾರಕೇಶ್ವರಯ್ಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ 13 ಜನ ದಲಿತ ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ದ್ವಾರಕೇಶ್ವರಯ್ಯ ಸೇರಿದಂತೆ 11 ಜನರ ಮೇಲೆ ದಲಿತ ಸಂಘಟನೆ ಮುಖಂಡರಿಂದ ಪ್ರಕರಣ ದಾಖಲು ಮಾಡಲಾಗಿದೆ.

ಬೇಡ ಜಂಗಮ ಎಂದು ನಕಲಿ ಎಸ್ಸಿ ಜಾತಿ ಪ್ರಮಾಣ ಪತ್ರ (Caste Certificate) ಪಡೆದಿದ್ದಾರೆ ಎಂದು ಆರೋಪಿಸಿ ದ್ವಾರಕೇಶ್ವರಯ್ಯ ಅವರನ್ನು ದಲಿತ ಮುಖಂಡರು ಈ ಮೊದಲು ಮುತ್ತಿಗೆ ಹಾಕಿದ್ದರು. ಈ ಹಿನ್ನೆಲೆ ಮತ್ತೆ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರ ಎಂ.ಪಿ. ದ್ವಾರಕೇಶ್ವರಯ್ಯ ಹೋರಾಟಕ್ಕೆ ಮುಂದಾಗಿದ್ದಾರೆ. ಹೂವಿನಮಡು ಅಂಜನಪ್ಪ, ಹೆಗ್ಗೆರೆ ರಂಗಪ್ಪ ಸೇರಿ 13 ಜನ ದಲಿತ ಮುಖಂಡರ ವಿರುದ್ಧ ದ್ವಾರಕೇಶ್ವರಯ್ಯ ಎಫ್.ಐ.ಆರ್ ದಾಖಲಿಸಿದ್ದರು.

ಮಾರ್ಚ್ 28 ರಂದು ದಾವಣಗೆರೆ ಪ್ರೆಸ್ ಕ್ಲಬ್ ಎದುರು ನಡೆದ ಘಟನೆ ಹಿನ್ನೆಲೆ ಎಫ್ ಐ ಆರ್ ದಾಖಲು ಮಾಡಲಾಗಿತ್ತು.  ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದ್ವಾರಕೇಶ್ವರಯ್ಯ ದೂರು ದಾಖಲಿಸಿದ್ದರು. ರೇಣುಕಾಚಾರ್ಯ ವಿರುದ್ಧ ಹೋರಾಟಕ್ಕೆ ಸಜ್ಜಾದ ದಲಿತ ಸಂಘಟನೆಗಳು ರೇಣುಕಾಚಾರ್ಯ ಕುಟುಂಬ ಈಗಾಗಲೇ ಹಿಂದು ಲಿಂಗಾಯತ ಇದ್ದವರು ಬೇಡಜಂಗಮ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ವಿಚಾರ ಪ್ರಶ್ನೆ ಮಾಡಿದಕ್ಕೆ ರೇಣುಕಾಚಾರ್ಯ ಸಹೋದರನಮ್ಮ ಮೇಲೆ ದೂರು ದಾಖಲಿಸಿದ್ದಾರೆ. ರೇಣುಕಾಚಾರ್ಯ ಅವರನ್ನ ತಕ್ಷಣ ಗಡಿಪಾರು ಮಾಡಬೇಕು. ವಿಳಂಬವಾದ್ರೆ ದಲಿತ ಸಂಘಟನೆಗಳು ರಾಜ್ಯಾದ್ಯಂತ ಹೋರಾಟ ಆರಂಭಿಸುವುದಾಗಿ ದಲಿತರ ಸಂಘಟನೆಗಳ ಒಕ್ಕೂಟದಿಂದ ಎಚ್ಚರಿಕೆ ನೀಡಿದ್ದರು.

ಶಾಸಕ ರೇಣುಕಾಚಾರ್ಯ ವಿರುದ್ಧ ದಲಿತ ಸಂಘಟನೆಗಳು ವಿಭಿನ್ನ ಹೋರಾಟ ನಡೆಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿ ಶಾಸಕ ರೇಣುಕಾಚಾರ್ಯ ವಿರುದ್ದ ಹೋರಾಟ ಮಾಡಿದ್ದರು. ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಲಾಗಿತ್ತು. ಲಕ್ಷಣಕ್ಕೆ ರೇಣುಕಾಚಾರ್ಯ ಕುಟುಂಬ ಬೇಡ ಜಂಗಮ ಹೆಸರಿನಲ್ಲಿ ಪಡೆದ ಎಸ್ಸಿ ಪ್ರಮಾಣ ಪತ್ರ ವಾಪಸ್ಸು ಪಡೆಯಬೇಕು. ಅವರನ್ನ ಗಡಿ ಪಾರು ಮಾಡಬೇಕು. ಹಾಗೆ ಬಿಟ್ಟರೇ ಅಧಿಕಾರ ಬಳಿಸಿ ಮತ್ತೆ ದಬ್ಬಾಳಿಕೆ ಮಾಡುವ ಸಾದ್ಯತೆ ಇದೆ ಎಂದು ದಲಿತ ಮುಖಂಡರು‌ ಆರೋಪಿಸಿದ್ದರು.

ಇದನ್ನೂ ಓದಿ: ಇತ್ತೀಚಿಗೆ ನಡೆದ ಎಲ್ಲ ವಿದ್ಯಮಾನಗಳಲ್ಲಿ ಹಿನ್ನಡೆ ಕಂಡಿರುವ ಕಾಂಗ್ರೆಸ್ ದೈನೇಸಿ ಸ್ಥಿತಿ ತಲುಪಿದೆ: ಎಮ್ ಪಿ ರೇಣುಕಾಚಾರ್ಯ

ಇದನ್ನೂ ಓದಿ: ರೇಣುಕಾಚಾರ್ಯ ಸಹೋದರ ದಾರಕೇಶ್ವರಯ್ಯರನ್ನು ದಲಿತ ಸಂಘಟನೆ ಸದಸ್ಯರು ತರಾಟೆಗೆ ತೆಗೆದುಕೊಂಡರು

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ