AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾಚಾರ್ಯ ಸಹೋದರ ದಾರಕೇಶ್ವರಯ್ಯರನ್ನು ದಲಿತ ಸಂಘಟನೆ ಸದಸ್ಯರು ತರಾಟೆಗೆ ತೆಗೆದುಕೊಂಡರು

ರೇಣುಕಾಚಾರ್ಯ ಸಹೋದರ ದಾರಕೇಶ್ವರಯ್ಯರನ್ನು ದಲಿತ ಸಂಘಟನೆ ಸದಸ್ಯರು ತರಾಟೆಗೆ ತೆಗೆದುಕೊಂಡರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 28, 2022 | 6:10 PM

Share

ತಾನು, 2012ರಲ್ಲೇ ತನಗೆ ಮತ್ತು ರೇಣುಕಾಚಾರ್ಯ ಅವರ ಮಗಳು ಎಮ್ ಪಿ ಚೇತನಾ ಅವರಿಗೆ ಬೇಡ ಜಂಗಮ ಎಸ್ ಸಿ ಪ್ರಮಾಣ ಪತ್ರ ಪಡೆದಿರುವುದು ನಿಜವಾದರೂ ಅದರಿಂದ ಯಾವುದೇ ಸರ್ಕಾರೀ ಸೌಲಭ್ಯ ಪಡೆದಿಲ್ಲ ಎಂದು ಹೇಳಿದರು.

ದಾವಣಗೆರೆ: ಹೊನ್ನಾಳಿ ಶಾಸಕ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರೇನೋ ತಮ್ಮ ಮಗಳಿಗೆ ಬೇಡ ಜಂಗಮ ಪರಿಶಿಷ್ಟ ಜಾತಿ ಸುಳ್ಳು ಜಾತಿ ಸರ್ಟಿಫಿಕೇಟ್ (False Caste Certificate) ಪಡೆದಿದ್ದು ತನ್ನ ಸಹೋದರ ಅಂತ ಸದನದಲ್ಲಿ ಹೇಳಿ ಕೈ ತೊಳೆದುಕೊಂಡುಬಿಟ್ಟರು. ಅದರೆ ಅವರ ಸಹೋದರ ಎಮ್ ಪಿ ದಾರಕೇಶ್ವರಯ್ಯ (MP Darakeshwaraiah) ತೊಂದರೆಗೆ ಸಿಕ್ಕಿಕೊಂಡಿದ್ದಾರೆ. ದಾವಣಗೆರೆಯಲ್ಲಿ ಸೋಮವಾರ ಅವರು ಸುದ್ದಿಗೋಷ್ಟಿಯೊಂದನ್ನು ನಡೆಸುವಾಗ ಸ್ಥಳಕ್ಕೆ ಆಗಮಿಸಿದ ದಲಿತ ಸಂಘಟನೆಗಳ ಸದಸ್ಯರು ಅವರನ್ನು ತರಾಟೆಗೆ ತೆಗೆದುಕೊಂಡರು ಮತ್ತು ಅವರ ಹಾಗೂ ರೇಣುಕಾಚಾರ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರು ಸ್ಥಳದಲ್ಲಿರದೇ ಹೋಗಿದ್ದರೆ, ದಾರಕೇಶ್ವರಯ್ಯ ಅವರ ಮೇಲೆ ಹಲ್ಲೆ ನಡೆಯಬಹುದಾದ ಸಾಧ್ಯತೆಯೂ ಇತ್ತು. ಅವರನ್ನು ಘೇರಾಯಿಸಿರುವ ಜನ ತಳ್ಳಾಟ ನೂಕಾಟ ಮಾಡುತ್ತಿರುವುದು ನಿಮಗೆ ವಿಡಿಯೋನಲ್ಲಿ ಕಾಣುತ್ತದೆ.

ಈ ಘಟನೆ ನಡೆಯುವ ಮೊದಲು ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ್ದ ದಾರಕೇಶ್ವರಯ್ಯ ಅವರು ಕಾಂಗ್ರೆಸ್ ಸದಸ್ಯರಿಗೆ ಸದನದ ಹೊರಗಡೆ ಬಂದು ಮಾತಾಡುವಂತೆ ಸವಾಲು ಹಾಕಿದರು. ತಾನು, 2012ರಲ್ಲೇ ತನಗೆ ಮತ್ತು ರೇಣುಕಾಚಾರ್ಯ ಅವರ ಮಗಳು ಎಮ್ ಪಿ ಚೇತನಾ ಅವರಿಗೆ ಬೇಡ ಜಂಗಮ ಎಸ್ ಸಿ ಪ್ರಮಾಣ ಪತ್ರ ಪಡೆದಿರುವುದು ನಿಜವಾದರೂ ಅದರಿಂದ ಯಾವುದೇ ಸರ್ಕಾರೀ ಸೌಲಭ್ಯ ಪಡೆದಿಲ್ಲ ಎಂದು ಹೇಳಿದರು.

ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ತಮಗೆ ಪ್ರಮಾಣ ಪತ್ರ ನೀಡಲಾಗಿದೆ, ತಮ್ಮ ವಿರುದ್ಧ ಕಾಂಗ್ರೆಸ್ ಶಾಸಕರು ಆರೋಪಗಳನ್ನು ಮಾಡಿದರೆ ನ್ಯಾಯಾಲಯದಲ್ಲಿ ಖಟ್ಲೆ ಹೂಡುವುದಾಗಿ ಆಖಿಲ ಕರ್ನಾಟಕ ಡಾ ಅಂಬೇಡ್ಕರ್ ಬೇಡಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಆಗಿರುವ ದಾರಕೇಶ್ವರಯ್ಯ ಹೇಳಿದರು.

ಸುದ್ದಿಗೋಷ್ಟಿಯ ಬಳಿಕ ದಲಿತ ಸಂಘಟನೆಯ ಸದಸ್ಯರು ಸಾವಿರಾರು ಕೋಟಿ ರೂಪಾಯಿ ಆಸ್ತಿ ಮಾಡಿಕೊಂಡಿದ್ದರೂ ಇವರಿಗೆ ಎಸ್ ಸಿ ಪ್ರಮಾಣ ಪತ್ರ ಬೇಕಾಗಿದೆ ಅನ್ನುತ್ತಾ ಅವರನ್ನು ಘೇರಾವ್ ಮಾಡಿ ಎಳೆದಾಡಿದರು. ಪೊಲೀಸರು ದಾರಕೇಶ್ವರಯ್ಯ ಅವರನ್ನು ತಮ್ಮ ವ್ಯಾನ್ ನೊಳಗೆ ಕೂರಿಸಿ ರಕ್ಷಣೆ ಒದಗಿಸದೆ ಹೋಗಿದ್ದರೆ ಪರಿಸ್ಥಿತಿ ನಿಸ್ಸಂದೇಹವಾಗಿ ವಿಕೋಪಕ್ಕೆ ಹೋಗುತಿತ್ತು.

ಇದನ್ನೂ ಓದಿ: ನನ್ನ ಮಗಳ ಜಾತಿ ಪ್ರಮಾಣ ಪತ್ರ ವಿಚಾರದಲ್ಲಿ ತನಿಖೆ ಆಗಲಿ, ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ -ಶಾಸಕ ಎಂ.ಪಿ.ರೇಣುಕಾಚಾರ್ಯ