ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡಿದ ಉಪೇಂದ್ರ
ಉಪೇಂದ್ರ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಈ ಬಗ್ಗೆ ಉಪೇಂದ್ರ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಉಪೇಂದ್ರ (Upednra) ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಉಪೇಂದ್ರ ಅವರು ಚಿತ್ರದ ಟೈಟಲ್ ಕೂಡ ಅನಾವರಣ ಮಾಡಿದ್ದರು. ಈ ಟೈಟಲ್ ನೋಡಿ ಪ್ರೇಕ್ಷಕರು ತಲೆಕೆಡಿಸಿಕೊಂಡಿದ್ದಾರೆ. ಟೈಟಲ್ಅನ್ನು ಕುದುರೆ ಲಾಳ ಎನ್ನಬೇಕೋ, ಮೂರು ನಾಮ ಎನ್ನಬೇಕೋ ಎಂಬುದು ಇನ್ನೂ ಬಗೆಹರಿದಿಲ್ಲ. ಈ ಟೈಟಲ್ ಅರ್ಥ ಏನು ಎಂಬ ಪ್ರಶ್ನೆಗೆ ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ‘ಅದು ತಲೆಗೆ ಕೆಲಸ ಕೊಡುವ ಸಿನಿಮಾ. ಸಾಮಾನ್ಯವಾಗಿ ಸಿನಿಮಾಗಳ ಟೈಟಲ್ಗಳು ನೇರವಾಗಿ ಇರುತ್ತವೆ. ಅದರ ಕ್ಯಾಟಗರಿ ಏನು ಎಂಬುದನ್ನೂ ಹೇಳುತ್ತಾರೆ. ಆದರೆ, ನಮ್ಮ ಸಿನಿಮಾ ಆ ರೀತಿ ಇಲ್ಲ. ನೀವೂ ಆಲೋಚನೆ ಮಾಡಲಿ ಎಂದು ಹಾಗೆ ಟೈಟಲ್ ಇಟ್ಟಿದ್ದೇವೆ’ ಎಂದರು ಉಪೇಂದ್ರ. ಅವರು ಸಿನಿಮಾ ಬಗ್ಗೆ ಹೇಳಿದ ಪೂರ್ತಿ ವಿವರ ಮೇಲಿನ ವಿಡಿಯೋದಲ್ಲಿದೆ.
ಇದನ್ನೂ ಓದಿ: ‘ಒಂದು ಗೋಲ್ಡನ್ ಅವಕಾಶ ಕೈ ತಪ್ಪಿದೆ’; ನಿರ್ದೇಶನದ ಬಗ್ಗೆ ಉಪೇಂದ್ರ ಹೀಗೆ ಹೇಳಿದ್ದೇಕೆ?
ಹಿಜಾಬ್ ಗೆಟಪ್ನಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದು ಏಕೆ? ಇದು ‘ಹೋಮ್ ಮಿನಿಸ್ಟರ್’ ವಿಷಯ