ನಿಶಾಚರ ಜೀವಿಗಳಾದ ಮುಳ್ಳುಹಂದಿಗಳು ಮಡಿಕೇರಿಯಲ್ಲಿ ಕಂಪೌಂಡೊಂದರಲ್ಲಿ ಹಗಲು ಹೊತ್ತು ಕಾಣಿಸಿದ್ದು ಸೋಜಿಗವೇ!

ನಿಶಾಚರ ಜೀವಿಗಳಾದ ಮುಳ್ಳುಹಂದಿಗಳು ಮಡಿಕೇರಿಯಲ್ಲಿ ಕಂಪೌಂಡೊಂದರಲ್ಲಿ ಹಗಲು ಹೊತ್ತು ಕಾಣಿಸಿದ್ದು ಸೋಜಿಗವೇ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 28, 2022 | 9:55 PM

ಇವು ಮಡಿಕೇರಿಯಲ್ಲಿ ಹಗಲು ಸಮಯ ಕಾಣಿಸಿಕೊಂಡಿದ್ದು ಕೂಡ ಆಶ್ಚರ್ಯದ ಸಂಗತಿಯೇ. ಯಾಕೆಂದರೆ ಇವು ನಿಶಾಚರ ಜೀವಿಗಳು. ಅಂದರೆ ಹಗಲು ಸಮಯದಲ್ಲಿ ನಿದ್ರೆ ಮಾಡಿ ರಾತ್ರಿ ಸಮಯದಲ್ಲಿ ಆಹಾರವನ್ನು ಅರಸುತ್ತಾ ಓಡಾಡುವ ಪ್ರಾಣಿಗಳು.

ಮಡಿಕೇರಿ:  ಮುಳ್ಳುಹಂದಿಯನ್ನು (porcupine) ನೀವು ನೋಡಿಲ್ಲವಾದರೆ ಇಲ್ಲೊಂದು ಅವಕಾಶ ಇದೆ. ಮಡಿಕೇರಿ ನಗರದ ಹೊರವಲಯದಲ್ಲಿರುವ ಮ್ಯಾನ್ಸ್ ಕಂಪೌಂ ಡ್ ನೊಳಗೆ ಒಂದಲ್ಲ ಎರಡೆರಡು ಮುಳ್ಳುಹಂದಿಗಳು ಬಂದುಬಿಟ್ಟಿವೆ. ಮುಳ್ಳುಹಂದಿಗಳಲ್ಲಿ ಎರಡು ಬಗೆ ಮಾರಾಯ್ರೇ. ಇಂಗ್ಲಿಷ್ ನಲ್ಲಿ ಅವುಗಳನ್ನು ಪಾರ್ಕುಪೈನ್ ಮತ್ತು ಹೆಜ್ ಹಾಗ್ (hedgehog) ಅಂತ ಬೇರೆ ಬೇರೆ ಹೆಸರುಗಳಿವೆ. ಆದರೆ ಕನ್ನಡದಲ್ಲಿ ಎರಡನ್ನೂ ಮುಳ್ಳುಹಂದಿಗಳೆಂದೇ ಉಲ್ಲೇಖಿಸಲಾಗುತ್ತದೆ. ಇವುಗಳ ನಡುವೆ ಮೂಲಭೂತ ವ್ಯತ್ಯಾಸವೆಂದರೆ, ಹೆಜ್ ಹಾಗ್ ಗಾತ್ರದಲ್ಲಿ ಪಾರ್ಕುಪೈನ್ ಕ್ಕಿಂತ ಚಿಕ್ಕದು. ಇನ್ನೊಂದು ಬಹುಮುಖ್ಯ ವ್ಯತ್ಯಾಸವನ್ನು ನಾವು ತಿಳಿದುಳೊಳ್ಳಬೇಕಿದೆ. ಪಾರ್ಕುಪೈನ್ ಗಳು ಇಲಿಗಳ (rodent) ಪ್ರಬೇಧಕ್ಕೆ ಸೇರಿದ ಪ್ರಾಣಿಗಳಾಗಿವೆ, ಅದರೆ ಹೆಜ್ ಹಾಗ್ ಗಳನ್ನು ಈ ಪ್ರಭೇದದಲ್ಲಿ ವರ್ಗೀಕರಿಸಲಾಗಿಲ್ಲ. ಪಾರ್ಕುಪೈನ್ ಗಳಿಗೆ ಮೈಮೇಲೆ ಹೆಚ್ಚು ಮುಳ್ಳುಗಳಳಿರುತ್ತವೆ ಮತ್ತು ಹೆಜ್ ಹಾಗ್ ಮೈಮೇಲೆ ಕಾಣುವ ಮುಳ್ಳುಗಳಿಗಿಂತ ಜಾಸ್ತಿ ಉದ್ದ ಇರುತ್ತವೆ.

ಹಾಗಾಗಿ, ನಿಮಗೆ ಈ ವಿಡಿಯೋನಲ್ಲಿ ಕಾಣುತ್ತಿರೋದು ಪಾರ್ಕುಪೈನ್ ಗಳ ಜೋಡಿ. ಸಾಮಾನ್ಯವಾಗಿ ಉಷ್ಣಪ್ರದೇಶದಲ್ಲಿ ವಾಸಮಾಡುವ ಜೀವಿಗಳು, ಕೊಡಗಿನಂಥ ಮಲೆನಾಡು ಪ್ರದೇಶಕ್ಕೆ ಹೇಗೆ ಬಂದವೋ? ಏಷ್ಯಾ ಸೇರಿದಂತೆ, ದಕ್ಷಿಣ ಯುರೋಪ್, ಆಫ್ರಿಕಾ ಹಾಗೂ ಉತ್ತರ ಮತ್ತು ದಕ್ಷಿಣ ಅಮೆರಿಕಾನಲ್ಲಿ ಕಂಡುಬರುತ್ತವೆ. ಮರಗಿಡಗಳಲ್ಲಿ ವಾಸಮಾಡುವ ಮುಳ್ಳುಹಂದಿಗಳೂ ಇವೆಯಾದರೂ ಅವರು ಹೆಚ್ಚು ಇರೋದು ಕಲ್ಲುಬಂಡೆಗಳಿಂದ ಅವೃತವಾಗಿರುವ ಕಂದಕಗಳಲ್ಲಿ.

ಇವು ಮಡಿಕೇರಿಯಲ್ಲಿ ಹಗಲು ಸಮಯ ಕಾಣಿಸಿಕೊಂಡಿದ್ದು ಕೂಡ ಆಶ್ಚರ್ಯದ ಸಂಗತಿಯೇ. ಯಾಕೆಂದರೆ ಇವು ನಿಶಾಚರ ಜೀವಿಗಳು. ಅಂದರೆ ಹಗಲು ಸಮಯದಲ್ಲಿ ನಿದ್ರೆ ಮಾಡಿ ರಾತ್ರಿ ಸಮಯದಲ್ಲಿ ಆಹಾರವನ್ನು ಅರಸುತ್ತಾ ಓಡಾಡುವ ಪ್ರಾಣಿಗಳು.

ಇದನ್ನೂ ಓದಿ:   ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್​ ಬಗ್ಗೆ ಗೊತ್ತಾ? ಆ್ಯಪಲ್ ಏರ್ಫೋಡ್​ 2ಗಿಂತ ದುಬಾರಿ; ಇಲ್ಲಿದೆ ವೈರಲ್ ವಿಡಿಯೋ