ಇತ್ತೀಚಿಗೆ ನಡೆದ ಎಲ್ಲ ವಿದ್ಯಮಾನಗಳಲ್ಲಿ ಹಿನ್ನಡೆ ಕಂಡಿರುವ ಕಾಂಗ್ರೆಸ್ ದೈನೇಸಿ ಸ್ಥಿತಿ ತಲುಪಿದೆ: ಎಮ್ ಪಿ ರೇಣುಕಾಚಾರ್ಯ
ಮಾಜಿ ಸಚಿವರೂ ಆಗಿರುವ ರೇಣುಕಾಚಾರ್ಯ ತಮ್ಮ ಮಗಳಿಗೆ ಎಸ್ ಸಿ ಜಾತಿ ಪ್ರಮಾಣ ಪಡೆದ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಸದನದಲ್ಲಿ ಗಲಾಟೆ ಎಬ್ಬಿಸಿದ ಹಿನ್ನೆಲೆಯಲ್ಲಿ ಸ್ವಲ್ಪ ಜಾಸ್ತಿಯೇ ಗರಂ ಆಗಿದ್ದರು.
ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ (political secretary) ಮತ್ತು ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರು ಬುಧವಾರ ಬೆಂಗಳೂರಿನ ವಿಧಾನ ಸೌಧ ಆವರಣದಲ್ಲಿ ನಿಂತು ಕಾಂಗ್ರೆಸ್ (Congress) ಪಕ್ಷದ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಮುಖಂಡರಿಗೆ ಇತ್ತೀಚಿಗೆ ನಡೆದ ಎಲ್ಲ ಘಟನೆಗಳ ಬಗ್ಗೆ ಹಿನ್ನಡೆಯಾಗಿರುವುದಕ್ಕೆ ಮರ್ಮಾಘಾತವಾಗಿದೆ ಎಂದ ಹೇಳಿ ಯಾವ್ಯಾವ ಘಟನೆಗಳು ಅನ್ನೋದನ್ನು ಪಟ್ಟಿ ಮಾಡಿದರು. ಹಿಜಾಬ್, ಮುಸ್ಲಿಂ ವ್ಯಾಪಾರಿಗಳ ಮೇಲೆ ನಿಷೇಧ, ಕಾಶ್ಮೀರ್ ಫೈಲ್ಸ್, ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಪಾಠ, ಹಲಾಲ ಕಟ್ ಮುಂತಾದ ವಿಷಯಗಳಲ್ಲಿ ಕಾಂಗ್ರೆಸ್ ಗೆ ಭಾರಿ ಹಿನ್ನಡೆಯಾಗಿದೆ ಇದೇ ದೈನೇಸಿ ಸ್ಥಿತಿ ಮುಂದುವರಿದರೆ, ಅದು ಎಲ್ಲ ರಾಜ್ಯಗಳಲ್ಲಿ ನಿರ್ನಾಮವಾಗೋದು ನಿಶ್ಚಿತ ಅನ್ನುತ್ತಾರೆ.
ಮಾಜಿ ಸಚಿವರೂ ಆಗಿರುವ ರೇಣುಕಾಚಾರ್ಯ ತಮ್ಮ ಮಗಳಿಗೆ ಎಸ್ ಸಿ ಜಾತಿ ಪ್ರಮಾಣ ಪಡೆದ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಸದನದಲ್ಲಿ ಗಲಾಟೆ ಎಬ್ಬಿಸಿದ ಹಿನ್ನೆಲೆಯಲ್ಲಿ ಸ್ವಲ್ಪ ಜಾಸ್ತಿಯೇ ಗರಂ ಆಗಿದ್ದರು.
ಮಾಧ್ಯಮದವರೊಬ್ಬರು ಕಾಂಗ್ರೆಸ್ ನಿರ್ನಾಮಗೊಳ್ಳಲಿ ಅಂತ ಈ ಅಂಶಗಳನ್ನು ಕೆದಕುತ್ತಿದ್ದೀರಾ ಅಂತ ಕೇಳಿದಾಗ ಅದನ್ನು ನಿರೀಕ್ಷಿಸಿರದಿದ್ದ ಶಾಸಕರು ಸಿಡಿಮಿಡಿಗೊಳ್ಳುತ್ತಾರೆ. ಅಸಹನೆಯ ಧ್ವನಿಯಲ್ಲೇ ಅವರು, ರಾಜಕಾರಣ ನಾವು ಮಾಡುತ್ತಿಲ್ಲ; ಕಾಶ್ಮೀರ್ ಫೈಲ್ಸ್ ವಿರೋಧ ಮಾಡಿದ್ದು ಯಾರು, ಹಿಜಾಬ್ ವಿರೋಧ ಮಾಡಿದ್ದು ಯಾರು? ಅಂತ ಕೇಳುತ್ತಾರೆ. ಹಲಾಲ್ ಅಂದರೇನು, ನಮ್ಮ ಧರ್ಮಗ್ರಂಥಗಳಲ್ಲಿ ಉಗುಳಿದ್ದನ್ನು ತಿನ್ನಬೇಕು ಅಂತ ಹೇಳಿದೆಯಾ? ಎಂದು ರೇಣುಕಾಚಾರ್ಯ ಹೇಳುತ್ತಾರೆ.
ಹಲಾಲ್ ಕಟ್ ಮಾಂಸವನ್ನು ತಿನ್ನಬಾರದು, ಅದನ್ನು ನಿಷೇಧಿಸಬೇಕು ಅಂತ ನಮ್ಮ ಜನರಿಗೆ ಈಗ ಬುದ್ಧಿ ಬಂದಿದೆ ಎಂದು ಎಮ್ ಪಿ ರೇಣುಕಾಚಾರ್ಯ ಅವರು ವಿಧಾನ ಸಭೆ ಅಧಿವೇಶನದಲ್ಲಿ ಭಾಗವಹಿಸಲು ತೆರಳುವ ಮುನ್ನ ಹೇಳಿದರು.
ಇದನ್ನೂ ಓದಿ: ಹಲಾಲ್ ಗದ್ದಲದ ನಡುವೆಯೂ ಮಾದರಿಯಾದ ಮುಸ್ಲಿಂ ವ್ಯಕ್ತಿ; ನಿತ್ಯ ಹನುಮನಿಗೆ ಪೂಜೆ ಸಲ್ಲಿಸುತ್ತಿರುವ ಅಜೀಮ್