ಹಲಾಲ್ ಗದ್ದಲದ ನಡುವೆಯೂ ಮಾದರಿಯಾದ ಮುಸ್ಲಿಂ ವ್ಯಕ್ತಿ; ನಿತ್ಯ ಹನುಮನಿಗೆ ಪೂಜೆ ಸಲ್ಲಿಸುತ್ತಿರುವ ಅಜೀಮ್

ಅಜೀಮ್ ಸಾಬ್ ತಲೆಗೆ ಹಸಿರು ಟವೆಲ್ ಸುತ್ತಿ, ತಲೆಗೆ ಗಂಧ ಹಚ್ಚಿಕೊಂಡು ಹನುಮನ ಪೂಜೆ ಮಾಡುತ್ತಾರೆ. ಮೊಹರಂ ವೇಳೆ ಅಲಾಯಿ ದೇವರನ್ನು ಹೊರುತ್ತಾರೆ. ಅಲಾಯಿ ದೇವರ ಜತೆಗೆ, ಹನುಮನಿಗೂ ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನದ ಮುಂದೆ ವ್ಯಾಪರಕ್ಕಾಗಿ ವಿವಾದ ಎದ್ದಿರೋ ಹಿನ್ನಲೆ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.

ಹಲಾಲ್ ಗದ್ದಲದ ನಡುವೆಯೂ ಮಾದರಿಯಾದ ಮುಸ್ಲಿಂ ವ್ಯಕ್ತಿ; ನಿತ್ಯ ಹನುಮನಿಗೆ ಪೂಜೆ ಸಲ್ಲಿಸುತ್ತಿರುವ ಅಜೀಮ್
ಕೂಲಿ ಕೆಲಸಕ್ಕೆ ಹೋಗೋ ಮುಂಚೆ ಹನುಮನಿಗೆ ಪೂಜೆ ಸಲ್ಲಿಸುವ ಅಜೀಮ್ ಸಾಬ್
Follow us
TV9 Web
| Updated By: preethi shettigar

Updated on:Mar 30, 2022 | 4:28 PM

ಕೊಪ್ಪಳ:  ಹಲಾಲ್- ಹಿಜಾಬ್​ (Hijab) ಗದ್ದಲದ ನಡುವೆಯೂ ಮುಸ್ಲಿಂ ವ್ಯಕ್ತಿಯೊಬ್ಬರು ಸೌಹಾರ್ದಯುತ ಜೀವನ ನಡೆಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ನಿತ್ಯ ಹನುಮನಿಗೆ (Hanuman) ಪೂಜೆ ಸಲ್ಲಿಸುವ ಮೂಲಕ ಅಜೀಮ್ ಎಲ್ಲಾ ಧರ್ಮಗಳು (Religion) ಒಂದೇ ಎಂಬುವುದನ್ನು ಸಾರುತ್ತಿದ್ದಾರೆ. ಕೊಪ್ಪಳ ತಾಲೂಕಿನ ಕವಲೂರ ಗ್ರಾಮದ ಅಜೀಮ್​ ನಿತ್ಯವು ಹನುಮನಿಗೆ ಪೂಜೆ ಸಲ್ಲಿಸುತ್ತಾರೆ. ಕೂಲಿ ಕೆಲಸಕ್ಕೆ ಹೋಗೋ ಮುಂಚೆ ಹನುಮನಿಗೆ ಪೂಜೆ ಸಲ್ಲಿಸುವ ಅಜೀಮ್ ಸಾಬ್, ಧರ್ಮಗಳ ನಡುವೆ ವಿವಾದದ ಬಿರುಗಾಳಿ ಎದ್ದರು ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.

ಅಜೀಮ್ ಸಾಬ್ ತಲೆಗೆ ಹಸಿರು ಟವೆಲ್ ಸುತ್ತಿ, ತಲೆಗೆ ಗಂಧ ಹಚ್ಚಿಕೊಂಡು ಹನುಮನ ಪೂಜೆ ಮಾಡುತ್ತಾರೆ. ಮೊಹರಂ ವೇಳೆ ಅಲಾಯಿ ದೇವರನ್ನು ಹೊರುತ್ತಾರೆ. ಅಲಾಯಿ ದೇವರ ಜತೆಗೆ, ಹನುಮನಿಗೂ ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನದ ಮುಂದೆ ವ್ಯಾಪರಕ್ಕಾಗಿ ವಿವಾದ ಎದ್ದಿರೋ ಹಿನ್ನಲೆ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.

ಹಾಸನ: ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಮುಸ್ಲಿಂ ಕುಟುಂಬ; ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕ ಹಾಸನ ಜಿಲ್ಲೆಯ ಬೇಲೂರಿನಲ್ಲಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮುಸ್ಲಿಂ ಕುಟುಂಬವೊಂದು ಪೂಜೆ ಸಲ್ಲಿಸಿದೆ. ರಿಯಾಜ್ ಪಾಷಾ ಕುಟುಂಬಸ್ಥರು ನೇರಳೆ, ಆಲದ ಮರದ ಬುಡದಲ್ಲಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಪೂಜೆ ಸಲ್ಲಿಸಿದ್ದಾರೆ. ಹಿಂದೂ ಸಂಸ್ಕಾರ, ಸಂಪ್ರದಾಯದಂತೆ ರಿಯಾಜ್ ಪಾಷಾ ಕುಟುಂಬ ಪೂಜೆ, ಪುನಸ್ಕಾರ ನೆರವೆರಿಸಿದೆ. ಬೇಲೂರು ಚನ್ನಕೇಶವ ಸ್ವಾಮಿ ಕನಸಿನಲ್ಲಿ ಬಂದು ಜಮೀನು ಬಳಿ ಪೂಜೆ ಸಲ್ಲಿಸಲು ಸೂಚಿಸಿದ್ದಾನೆ. ಹೀಗಾಗಿ ಇಲ್ಲಿ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಿದ್ದೇವೆ ಎಂದು ರಿಯಾಜ್ ಪಾಷಾ ತಿಳಿಸಿದ್ದಾರೆ.

ಬೇಲೂರಿನ ದೀನ್ ದಯಾಳ್ ಬಡಾವಣೆಯಲ್ಲಿ ರಿಯಾಜ್ ಕುಟುಂಬ ಜಮೀನು ಹೊಂದಿದೆ. ರಿಯಾಜ್ ತಂದೆ ಭಾಷಾ ಸಾಹೇಬ್​ಗೆ ಉಳುವವನೇ ಭೂಮಿ‌ ಒಡೆಯ ಕಾನೂನಿನಿಂದ ಜಮೀನು ಸಿಕ್ಕಿತ್ತು. 8 ವರ್ಷಗಳ ಹಿಂದೆ ಮಲ್ಲಿಕಾರ್ಜುನ ಗ್ರೂಪ್ಸ್​ನ ನಾಗಣ್ಣ ಎಂಬುವವರಿಗೆ ಇದೇ ಜಮೀನನ್ನು ರಿಯಾಜ್ ಮಾರಾಟ ಮಾಡಿದ್ದರು. ಆದರೆ 3 ತಿಂಗಳಿನಿಂದ ರಿಯಾಜ್ ಸಹೋದರನ‌ ಮಗನ ಕನಸ್ಸಿನಲ್ಲಿ ಬಂದು‌ ಪೂಜೆ ಮಾಡಿಸುವಂತೆ ಚನ್ನಕೇಶವಸ್ವಾಮಿ ಸೂಚನೆ ನೀಡಿದ್ದಾನೆಯಂತೆ. ಹೀಗಾಗಿ ಪೂಜಾ ಕಾರ್ಯ ನೆರವೆರಿಸಿದ್ದಾರೆ.

ಚನ್ನಕೇಶವಸ್ವಾಮಿ ನಿರ್ದೆಶನದಂತೆ ಅಣತಿಯಂತೆ ಜಮೀನಿನ ಮರದ ಬಳಿ ಪೂಜೆ ಸಲ್ಲಿಸಲಾಗಿದೆ. ಅನ್ಯ ಧರ್ಮವಾದರೂ ದೇವರ ಸೂಚನೆ ಎಂದು ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದು ವಿಶೇಷ ಎಂದರೆ ಅರ್ಚಕ ಮಂಜುನಾಥ್ ಶಾಸ್ತ್ರಿ ಮಾರ್ಗದರ್ಶನದಲ್ಲಿ ಪೂಜೆ ನೆರವೆರಿಸಿದ್ದಾರೆ. ರಿಯಾಜ್ ಕುಟುಂಬ ಪೂಜೆ ಸಲ್ಲಿಸುವಾಗ ಹಿಂದೂ ಧರ್ಮದ ಹಲವು ಜನರು ಸಾಥ್ ನೀಡಿದ್ದಾರೆ. ಒಟ್ಟಾರೆ ಧರ್ಮ ಮೀರಿ ಭಕ್ತಿ ತೋರಿ ರಿಯಾಜ್ ಮತ್ತು ಅವರ ಕುಟುಂಬ ಮಾದರಿಯಾಗಿದೆ.

ಇದನ್ನೂ ಓದಿ: ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಮುಸ್ಲಿಂ ಕುಟುಂಬ; ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕ

ಸ್ವಾಮೀಜಿಗಳ ಬಟ್ಟೆ ಹಿಜಾಬ್​​ಗೆ ಹೋಲಿಸಿ ಹೇಳಿಕೆ ವಿಚಾರ: ಟ್ವೀಟ್​ ಮಾಡಿ, ಅಪಪ್ರಚಾರವೆಂದ ವಿಪಕ್ಷ ನಾಯಕ ಸಿದ್ದರಾಮಯ್ಯ!

Published On - 4:23 pm, Wed, 30 March 22

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!