ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಮುಸ್ಲಿಂ ಕುಟುಂಬ; ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕ
ಬೇಲೂರು ಚನ್ನಕೇಶವ ಸ್ವಾಮಿ ಕನಸಿನಲ್ಲಿ ಬಂದು ಜಮೀನು ಬಳಿ ಪೂಜೆ ಸಲ್ಲಿಸಲು ಸೂಚಿಸಿದ್ದಾನೆ. ಹೀಗಾಗಿ ಇಲ್ಲಿ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಿದ್ದೇವೆ ಎಂದು ರಿಯಾಜ್ ಪಾಷಾ ತಿಳಿಸಿದ್ದಾರೆ.
ಹಾಸನ: ರಾಜ್ಯದಲ್ಲಿ ಹಿಜಾಬ್ (Hijab)- ಕೇಸರಿ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿರುವ ಈ ಸಂದರ್ಭದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ವಿನಾಯಕನ ಮೂರ್ತಿಯನ್ನು(Idol) ಪ್ರತಿಷ್ಠಾಪಿಸಿ ಮುಸ್ಲಿಂ ಕುಟುಂಬವೊಂದು(Muslim Family) ಪೂಜೆ ಸಲ್ಲಿಸಿದೆ. ರಿಯಾಜ್ ಪಾಷಾ ಕುಟುಂಬಸ್ಥರು ನೇರಳೆ, ಆಲದ ಮರದ ಬುಡದಲ್ಲಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಪೂಜೆ ಸಲ್ಲಿಸಿದ್ದಾರೆ. ಹಿಂದೂ ಸಂಸ್ಕಾರ, ಸಂಪ್ರದಾಯದಂತೆ ರಿಯಾಜ್ ಪಾಷಾ ಕುಟುಂಬ ಪೂಜೆ, ಪುನಸ್ಕಾರ ನೆರವೆರಿಸಿದೆ.
ಬೇಲೂರು ಚನ್ನಕೇಶವ ಸ್ವಾಮಿ ಕನಸಿನಲ್ಲಿ ಬಂದು ಜಮೀನು ಬಳಿ ಪೂಜೆ ಸಲ್ಲಿಸಲು ಸೂಚಿಸಿದ್ದಾನೆ. ಹೀಗಾಗಿ ಇಲ್ಲಿ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಿದ್ದೇವೆ ಎಂದು ರಿಯಾಜ್ ಪಾಷಾ ತಿಳಿಸಿದ್ದಾರೆ.
ಬೇಲೂರಿನ ದೀನ್ ದಯಾಳ್ ಬಡಾವಣೆಯಲ್ಲಿ ರಿಯಾಜ್ ಕುಟುಂಬ ಜಮೀನು ಹೊಂದಿದೆ. ರಿಯಾಜ್ ತಂದೆ ಭಾಷಾ ಸಾಹೇಬ್ಗೆ ಉಳುವವನೇ ಭೂಮಿ ಒಡೆಯ ಕಾನೂನಿನಿಂದ ಜಮೀನು ಸಿಕ್ಕಿತ್ತು. 8 ವರ್ಷಗಳ ಹಿಂದೆ ಮಲ್ಲಿಕಾರ್ಜುನ ಗ್ರೂಪ್ಸ್ನ ನಾಗಣ್ಣ ಎಂಬುವವರಿಗೆ ಇದೇ ಜಮೀನನ್ನು ರಿಯಾಜ್ ಮಾರಾಟ ಮಾಡಿದ್ದರು. ಆದರೆ 3 ತಿಂಗಳಿನಿಂದ ರಿಯಾಜ್ ಸಹೋದರನ ಮಗನ ಕನಸ್ಸಿನಲ್ಲಿ ಬಂದು ಪೂಜೆ ಮಾಡಿಸುವಂತೆ ಚನ್ನಕೇಶವಸ್ವಾಮಿ ಸೂಚನೆ ನೀಡಿದ್ದಾನೆಯಂತೆ. ಹೀಗಾಗಿ ಪೂಜಾ ಕಾರ್ಯ ನೆರವೆರಿಸಿದ್ದಾರೆ.
ಚನ್ನಕೇಶವಸ್ವಾಮಿ ನಿರ್ದೆಶನದಂತೆ ಅಣತಿಯಂತೆ ಜಮೀನಿನ ಮರದ ಬಳಿ ಪೂಜೆ ಸಲ್ಲಿಸಲಾಗಿದೆ. ಅನ್ಯ ಧರ್ಮವಾದರೂ ದೇವರ ಸೂಚನೆ ಎಂದು ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದು ವಿಶೇಷ ಎಂದರೆ ಅರ್ಚಕ ಮಂಜುನಾಥ್ ಶಾಸ್ತ್ರಿ ಮಾರ್ಗದರ್ಶನದಲ್ಲಿ ಪೂಜೆ ನೆರವೆರಿಸಿದ್ದಾರೆ. ರಿಯಾಜ್ ಕುಟುಂಬ ಪೂಜೆ ಸಲ್ಲಿಸುವಾಗ ಹಿಂದೂ ಧರ್ಮದ ಹಲವು ಜನರು ಸಾಥ್ ನೀಡಿದ್ದಾರೆ. ಒಟ್ಟಾರೆ ಧರ್ಮ ಮೀರಿ ಭಕ್ತಿ ತೋರಿ ರಿಯಾಜ್ ಮತ್ತು ಅವರ ಕುಟುಂಬ ಮಾದರಿಯಾಗಿದೆ.
ಇದನ್ನೂ ಓದಿ: ಹಿಜಾಬ್‌ಗೂ ಈ ಕೊಲೆಗೂ ಲಿಂಕ್ ಇಲ್ಲ ಅನಿಸುತ್ತಿದೆ, ಆರೋಪಿಗಳು ಯಾರು ಅಂತಾ ಗೊತ್ತಾಗಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ
Hijab Row: ಹಿಜಾಬ್ ಹಾಕುವುದು ಅಥವಾ ಹಾಕದಿರುವುದು ಮುಸ್ಲಿಂ ಮಹಿಳೆಯರ ಹಕ್ಕು: ಹೈಕೋರ್ಟ್ನಲ್ಲಿ ಎಜಿ ವಾದ
Published On - 8:59 am, Wed, 23 February 22