ಅಮೃತ ಮಹೋತ್ಸವ ಜಾಹೀರಾತಿನಲ್ಲಿ ಪಂಡಿತ್ ನೆಹರೂ ಚಿತ್ರ ಇರಬೇಕಿತ್ತು: ಬಿಸಿ ಪಾಟೀಲ್, ಸಚಿವರು
ರಾಷ್ಟ್ರಧ್ವಜಕ್ಕೆ ಗೌರವ ನೀಡುವುದನ್ನು ಕಾಂಗ್ರೆಸ್ ನಿಂದ ಕಲಿಯಬೇಕಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗಾ ಕರೆ ನೀಡಿದ್ದರಿಂದ ಇಂದು ಎಲ್ಲರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರುತ್ತಿದೆ ಎಂದರು.
ಚಿತ್ರದುರ್ಗ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ್ ಜಾಹೀರಾತಿನಲ್ಲಿ ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ ಲಾಲ್ ನೆಹರೂ (Pandit Jawaharlal Nehru) ಅವರು ಚಿತ್ರ ಹಾಕಬೇಕಿತ್ತು ಎಂದು ಸಚಿವ ಬಿಸಿ ಪಾಟೀಲ್ (BC Patil) ಇಂದು ಚಿತ್ರದುರ್ಗದಲ್ಲಿ ಹೇಳಿದರು. ಮೊದಲು ತಾವು ಜಾಹೀರಾತನ್ನು ನೋಡೇ ಇಲ್ಲವೆಂದ ಸಚಿವರು ಯಾಕೆ ಹಾಕಿಲ್ಲ ಅನ್ನೋದನ್ನು ಸರ್ಕಾರ ಮತ್ತು ವಾರ್ತಾ ಇಲಾಖೆಯನ್ನು ಕೇಳಬೇಕು ಎಂದರು. ಮುಂದುವರಿದು ಮಾತಾಡಿದ ಪಾಟೀಲ ರಾಷ್ಟ್ರಧ್ವಜಕ್ಕೆ ಗೌರವ ನೀಡುವುದನ್ನು ಕಾಂಗ್ರೆಸ್ ನಿಂದ ಕಲಿಯಬೇಕಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಹರ್ ಘರ್ ತಿರಂಗಾ ಕರೆ ನೀಡಿದ್ದರಿಂದ ಇಂದು ಎಲ್ಲರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರುತ್ತಿದೆ ಎಂದರು.