ತಾಲಿಬಾನಿಗಳ ಸಂಧಾನ ಮಾತುಕತೆ ತಿರಸ್ಕರಿಸುತ್ತಿರುವ ಪಂಜಶೀರ್ ಜನ ಯುದ್ಧಕ್ಕೆ ಅಣಿಯಾಗುತ್ತಿದ್ದಾರೆ!

ತಾಲಿಬಾನಿಗಳ ಸಂಧಾನ ಮಾತುಕತೆ ತಿರಸ್ಕರಿಸುತ್ತಿರುವ ಪಂಜಶೀರ್ ಜನ ಯುದ್ಧಕ್ಕೆ ಅಣಿಯಾಗುತ್ತಿದ್ದಾರೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2021 | 1:10 AM

ಪಂಜಶೀರ್ ನೊಂದಿಗೆ ಯುದ್ಧ ಮಾಡುವುದಕ್ಕಿಂತ ರಾಜಿ ಮಾಡಿಕೊಳ್ಳುವುದರಲ್ಲೇ ತಮ್ಮ ಶ್ರೇಯಸ್ಸು ಅಡಗಿದೆ ಅಂತ ತಾಲಿಬಾನಿಗಳಿಗೆ ಗೊತ್ತಿದೆ. ಹಾಗಾಗೇ ಅವರು ಸಂಧಾನಕ್ಕಾಗಿ ತಮ್ಮ ಪ್ರತಿನಿಧಿಗಳನ್ನು ಕಳಿಸುತ್ತಿದ್ದಾರೆ.

ತಾಲಿಬಾನಿಗಳು ಕಂದಹಾರ್ನಲ್ಲಿ ಮಿಲಿಟರಿ ವಾಹನಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಪರೇಡ್ ಮಾಡುತ್ತಿರಬಹುದು. ಹಾಗೆಯೇ, ಕಾಬೂಲ್ನಲ್ಲಿ ಅಮೆರಿಕದ ಸೇನೆಗಳು ಬಿಟ್ಟು ಹೋಗಿರುವ ಯುದ್ಧ ವಾಹನಗಳ ಮೆರವಣಿಗೆಯನ್ನೂ ನಡೆಸಿರಬಹುದು. ಆದರೆ ವಾಸ್ತವ ಸಂಗತಿಯೇನೆಂದರೆ, ಪರಾಕ್ರಮಿ ಮತ್ತು ಸ್ವಾಭಿಮಾನಿಗಳ ನಾಡು ಪಂಜಶೀರ್ ಅವರಿಗೆ ಇನ್ನು ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಅದನ್ನು ವಶಪಡಿಸಿಕೊಳ್ಳದೆ ಅಫ್ಘಾನಿಸ್ತಾನದ ಮೇಲೆ ತಾಲಿಬಾನಿಗಳ ಸಾರ್ವಭೌಮತೆ ಸಂಪೂರ್ಣವೆನಿಸದು. ಆದರೆ ಅದನ್ನು ವಶಪಡಿಸಿಕೊಳ್ಳವುದು ಅಫ್ಘಾನಿಸ್ತಾನವನ್ನು ಮಣಿಸಿದಷ್ಟು ಸುಲಭವಲ್ಲ!

ಅಸಲಿಗೆ ತಾಲಿಬಾನಿಗಳೇ, ಪಂಜಶೀರ್ ಜನರಿಗೆ ಹೆದರುತ್ತಿದ್ದಾರೆ. ಅವರ ನಾಯಕ ಅಹ್ಮದ್ ಮಸ್ಸೂದಿ ಅಪ್ರತಿಮ ಶೂರ ಮತ್ತು ತಾಲಿಬಾನಿಗಳಿಗೆ ಕಿಂಚಿತ್ತೂ ಹೆದರದ ಜಾಯಮಾನದವರು. ಅವರೊಂದಿಗೆ ಅಫ್ಘಾನಿಸ್ತಾನದ ಉಪಾಧ್ಯಕ್ಷರಾಗಿದ್ದ ಅಮ್ರುಲ್ಲಾಹ್ ಸಾಲೇಹ್ ಕೈ ಜೋಡಿಸಿದ್ದಾರೆ. ಒಂದು ಪಕ್ಷ ತಾಲಿಬಾನಿಗಳು ಪಂಜಶೀರ್ ಕಣಿವೆ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡು ತಾವು ಅವರಿಗೆ ಸೆರೆ ಸಿಕ್ಕರೆ ನಡುಬೀದಿಯಲ್ಲಿ ತಮ್ಮ ರುಂಡ ತುಂಡರಿಸುತ್ತಾರೆ ಅಂತ ಮಸ್ಸೂದ್ ಅವರಿಗೆ ಗೊತ್ತಿದೆ. ಆದರೆ ಅವರು ಕೊನೆ ಉಸಿರು ಇರುವವರೆಗೆ ಹೋರಾಡುವ ಪಣವನ್ನು ಅವರು ತೊಟ್ಟಿದ್ದಾರೆ.

ಪಂಜಶೀರ್ ನೊಂದಿಗೆ ಯುದ್ಧ ಮಾಡುವುದಕ್ಕಿಂತ ರಾಜಿ ಮಾಡಿಕೊಳ್ಳುವುದರಲ್ಲೇ ತಮ್ಮ ಶ್ರೇಯಸ್ಸು ಅಡಗಿದೆ ಅಂತ ತಾಲಿಬಾನಿಗಳಿಗೆ ಗೊತ್ತಿದೆ. ಹಾಗಾಗೇ ಅವರು ಸಂಧಾನಕ್ಕಾಗಿ ತಮ್ಮ ಪ್ರತಿನಿಧಿಗಳನ್ನು ಕಳಿಸುತ್ತಿದ್ದಾರೆ. ಅದರೆ, ಅವರ ಎಲ್ಲ ಷರತ್ತು ಗಳನ್ನು ತಿರಸ್ಕರಿಸುತ್ತಿರುವ ಮಸ್ಸೂದ್ ವಾಪಸ್ಸು ಕಳಿಸುತ್ತಿದ್ದಾರೆ.

ಪಂಜಶೀರ್ ಹೋರಾಟಗಾರಲ್ಲಿ ಹೆಲಿಕಾಪ್ಟರ್ ಗಳಿವೆ ಮತ್ತು ಅವುಗಳನ್ನು ಉಡಾಯಿಸಲು ಗೊತ್ತಿರುವ ನುರಿತ ಪೈಲಟ್ಗಳು ಇದ್ದಾರೆ. ಆಫ್ಘಾನಿಸ್ತಾನದ ಮೇಲೆ ಸುತ್ತು ಹಾಕುತ್ತಾ ತಾಲಿಬಾನಿಗಳು ಏನು ಮಾಡುತ್ತಿದ್ದಾರೆ ಅನ್ನೋದನ್ನು ಪ್ರತಿದಿನ ಗಮನಿಸುತ್ತಿದ್ದಾರೆ.

ಈ ವಿಡಿಯೋನಲ್ಲಿ ಕಾಣುತ್ತಿರುವ ಹೆಲಿಕಾಪ್ಟರ್ ಪಂಜಶೀರ್ ಜನಕ್ಕೆ ಸೇರಿದ್ದು. ಅವರು ಮೇಲಿಂದ ತಾಲಿಬಾನಿಗಳ ಚಟುವಟಿಕೆಗಳನ್ನು ಗಮನಿಸುತ್ತಿದ್ದಾರೆ.

ಇದನ್ನೂ ಓದಿ:  Viral Video: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇಗೆ ತಲೆ ಸ್ನಾನ ಮಾಡುತ್ತಾರೆ?; ವೈರಲ್ ವಿಡಿಯೋ ಇಲ್ಲಿದೆ