ಅಮೆರಿಕ ಬಿಟ್ಟು ಹೋಗಿರುವ ಯುದ್ಧ ಟ್ಯಾಂಕರ್​ಗಳಲ್ಲಿ ನಿಂತು ಊರೆಲ್ಲ ಮೆರವಣಿಗೆ ಹೊರಟ ತಾಲಿಬಾನಿಗಳು!

ಅಮೆರಿಕ, ಅಫ್ಘನ್ನರ ಜೊತೆ ಸ್ನೇಹವಿಟ್ಟುಕೊಂಡಿತ್ತೇ ಹೊರತು ತಾಲಿಬಾನಿಗಳ ಜೊತೆಗಲ್ಲ. ಹಾಗಾಗಿ, ಸದರಿ ವಾಹನಗಳನ್ನು ಅವರು ತಾಲಿಬಾನಿಗಳಿಗೆ ಉಡುಗೊರೆಯಾಗಿ ಕೊಟ್ಟು ಹೋಗಿರಲಾರರು.

ಅಮೇರಿಕ ದೇಶದ ಸೈನಿಕರು ಸ್ವದೇಶಕ್ಕೆ ಕೊಂಡೊಯ್ಯಲು ಸಾಧ್ಯವಾಗದ ಯುದ್ದ ಟ್ಯಾಂಕರ್, ಯುದ್ದದಲ್ಲಿ ಬಳಸುವ ಟ್ರಕ್ಗಳನ್ನು ಅಪ್ಘಾನಿಸ್ತಾನದಲ್ಲೇ ಬಿಟ್ಟು ಹೋಗಿದ್ದಾರೆ. ಆದರೆ ಅವುಗಳನ್ನು ನಿಷ್ಕ್ರಿಯಗೊಳಿಸದೆ ಔದಾರ್ಯತೆ ಮೆರೆದಿದ್ದಾರೆ. ಅಂದರೆ ಅವು ಉಪಯೋಗಿಸಬಹುದಾದ ಸ್ಥಿತಿಯಲ್ಲಿವೆ. ಅವರು ಬಿಟ್ಟು ಹೋಗಿರುವ ಟ್ರಕ್ಗಳನ್ನು ತಾಲಿಬಾನಿಗಳು ತಾವೇ ಹೋರಾಡಿ ವಶಪಡಿಸಿಕೊಂಡಿರುವ ಹಾಗೆ ಅವುಗಳಲ್ಲಿ ಕೂತು ಮೆರವಣಿಗೆ ಮಾಡುತ್ತಿದ್ದಾರೆ.

ಅಮೆರಿಕ, ಅಫ್ಘನ್ನರ ಜೊತೆ ಸ್ನೇಹವಿಟ್ಟುಕೊಂಡಿತ್ತೇ ಹೊರತು ತಾಲಿಬಾನಿಗಳ ಜೊತೆಗಲ್ಲ. ಹಾಗಾಗಿ, ಸದರಿ ವಾಹನಗಳನ್ನು ಅವರು ತಾಲಿಬಾನಿಗಳಿಗೆ ಉಡುಗೊರೆಯಾಗಿ ಕೊಟ್ಟು ಹೋಗಿರಲಾರರು. ಅಸಲಿಗೆ ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ಎರಡು ದಶಕಗಳ ಕಾಲ ನೆಲೆಸಿದ್ದು ತಾಲಿಬಾನ್ ಉಗ್ರರು ಮತ್ತು ಅಲ್ಖೈದಾ ಸಂಘಟನೆಯನ್ನು ಹೊಸಕಿ ಹಾಕುವ ಉದ್ದೇಶದಿಂದ.

ಒಸಾಮಾ ಬಿನ್ ಲಾದೆನ್ ನನ್ನು ಕೊಂದ ನಂತರ ಅವರ ಉದ್ದೇಶ ಈಡೇರಿತ್ತು. ಆದರೂ ಅವರು ಮತ್ತೊಂದು ದಶಕದವರೆಗೆ (2011 ರಿಂದ 2021) ಅಫ್ಘಾನಿಸ್ತಾನದಲ್ಲೇ ಬೀಡು ಬಿಟ್ಟಿದ್ದರು. ಅದಾದ ಮೇಲೆ ದೋಹಾದಲ್ಲಿ ಅಮೆರಿಕಾ ಮತ್ತು ತಾಲಿಬಾನಿಗಳ ನಡುವೆ ಮಾತುಕತೆ ನಡೆದು ಒಂದು ಒಪ್ಪಂದಕ್ಕೆ ಬರಲಾಯಿತು. ಒಪ್ಪಂದದ ಅನುಸಾರವೇ, ಅಮೆರಿಕ ಅಫ್ಘಾನಿಸ್ತಾನದಿಂದ ಜಾಗ ಖಾಲಿ ಮಾಡಿದೆ.

ಅವರು ಬಿಟ್ಟು ಹೋಗಿರುವ ವಾಹನಗಳ ಮೆರವಣಿಗೆ ಹೇಗೆ ನಡೆಯುತ್ತಿದೆ ಅತ ನೀವೇ ನೋಡಿ. ಯುದ್ಧ ಗೆದ್ದ ಪರಾಕ್ರಮಿಗಳಂತೆ ತಾಲಿಬಾನಿಗಳು ಮೆರೆಯುತ್ತಿದ್ದಾರೆ. ಇಡೀ ದೇಶವನ್ನು ಅವರು ಸುತ್ತು ಹಾಕಿರುವ ಬಗ್ಗೆ ಮಾಹಿತಿಯಿದೆ.

ಅಲ್ಪನಿಗೆ ಐಶ್ವರ್ಯ ಸಿಕ್ಕರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದನಂತೆ!

ಇದನ್ನೂ ಓದಿ: Rakhi Sawant: ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆಯಲು ಪ್ರಯತ್ನಿಸಿ ಸುದ್ದಿಯಲ್ಲಿದ್ದಾರೆ ರಾಖಿ ಸಾವಂತ್; ವಿಡಿಯೊ ನೋಡಿ

Click on your DTH Provider to Add TV9 Kannada