Darshan Thoogudeepa: 13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. 13 ವರ್ಷದ ಹಿಂದೆಯೂ ದರ್ಶನ್ ಜೈಲು ಪಾಲಾಗಿದ್ದರು. ಆಗ ಜೈಲಿನ ಅಧಿಕಾರಿ ಆಗಿದ್ದ ಸತೀಶ್, ಆಗ ದರ್ಶನ್ ಹೇಗೆ ನಡೆದುಕೊಂಡಿದ್ದರು. ಆಗ ದರ್ಶನ್ ತಮ್ಮ ಬಳಿ ಹೇಳಿದ್ದ ಮಾತುಗಳನ್ನು ಸತೀಶ್ ನೆನಪು ಮಾಡಿಕೊಂಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ದಿನ ಕಳೆಯುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲು ದರ್ಶನ್ಗೆ ಹೊಸದಲ್ಲ. 13 ವರ್ಷಗಳ ಹಿಂದೆ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ, ದರ್ಶನ್ ಜೈಲು ಸೇರಿದ್ದರು. ಆಗ ಜೈಲು ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಸತೀಶ್ ಅವರು ಈಗ ನಿವೃತ್ತರಾಗಿದ್ದು, 13 ವರ್ಷಗಳ ಹಿಂದೆ ದರ್ಶನ್ ಜೈಲಿನಲ್ಲಿ ಹೇಗಿರುತ್ತಿದ್ದರು. ಜೈಲು ಸಿಬ್ಬಂದಿ ಜೊತೆಗೆ, ಸಹಕೈದಿಗಳ ಜೊತೆಗೆ ಹೇಗೆ ನಡೆದುಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಆಗ ತಮಗೆ ದರ್ಶನ್ ನೀಡಿದ್ದ ಭರವಸೆ ಒಂದರ ಬಗ್ಗೆಯೂ ನಿವೃತ್ತ ಅಧಿಕಾರಿ ಸತೀಶ್ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ