ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ; ಮೀನು ಹಿಡಿಯಲು ಹೋಗಿ ದುಸ್ಸಾಹಸ
ಮಳೆಗೆ ಬಹುತೇಕ ಎಲ್ಲಾ ನದಿ, ಜಲಾಶಯಗಳು ತುಂಬಿವೆ. ಅದರಂತೆ ಕೃಷ್ಣಾ ನದಿಯೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಆದರೂ ಕೃಷ್ಣಾ ನದಿ(Krishna river)ಯಲ್ಲಿ ಜನರು ಹುಚ್ಚಾಟ ಪ್ರದರ್ಶನ ಮಾಡುತ್ತಿದ್ದು, ನದಿಯ ದಂಡೆಯಲ್ಲಿ ಕುಳಿತು ಜನರು ಮೀನು ಹಿಡಿಯಲು ಹೋಗಿ ದುಸ್ಸಾಹಸ ಮೆರೆಯುತ್ತಿದ್ದಾರೆ. ಈ ಹಿನ್ನಲೆ ಕೂಡಲೇ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡುತ್ತಿದ್ದಾರೆ.
ಯಾದಗಿರಿ, ಜು.25: ಕರ್ನಾಟಕದ ಹಲವೆಡೆ ಆಗುತ್ತಿರುವ ಭರ್ಜರಿ ಮಳೆಗೆ ಬಹುತೇಕ ಎಲ್ಲಾ ನದಿ, ಜಲಾಶಯಗಳು ತುಂಬಿವೆ. ಅದರಂತೆ ಕೃಷ್ಣಾ ನದಿಯೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಆದರೂ ಕೃಷ್ಣಾ ನದಿ(Krishna river)ಯಲ್ಲಿ ಜನರು ಹುಚ್ಚಾಟ ಪ್ರದರ್ಶನ ಮಾಡುತ್ತಿದ್ದಾರೆ. ಹೌದು, ಕೃಷ್ಣಾ ನದಿಯ ದಂಡೆಯಲ್ಲಿ ಕುಳಿತು ಜನರು ಮೀನು ಹಿಡಿಯಲು ಹೋಗಿ ದುಸ್ಸಾಹಸ ಮೆರೆಯುತ್ತಿದ್ದಾರೆ. ಈಗಾಗಲೇ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಎರಡು 2.5 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಇದರಿಂದ ನಾರಾಯಣಪುರ ಜಲಾಶಯದ ಸೊಬಗು ಕಣ್ತುಂಬಿಕೊಳ್ಳಲು ಜನರು ಬರುತ್ತಿದ್ದಾರೆ. ಈ ಮಧ್ಯೆ ನಾರಾಯಣಪುರದ ಛಾಯಾ ಭಗವತಿ ದೇವಸ್ಥಾನದ ಬಳಿ ನದಿ ದಡಕ್ಕೆ ಇಳಿದು ಜನರ ಹುಚ್ಚಾಟ ಮಾಡುತ್ತಿದ್ಧಾರೆ. ಸ್ವಲ್ಪ ಯಾಮಾರಿದರೂ ಸಾವು ಕಟ್ಟಿಟ್ಟ ಬುತ್ತಿ. ಈ ಹಿನ್ನಲೆ ದೇವಸ್ಥಾನದ ಸುತ್ತಲಿನ ಕೃಷ್ಣಾ ನದಿಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos