Assembly Session: ಗ್ರೇಟರ್ ಬೆಂಗಳೂರು ರೂಪುರೇಷೆ ಚರ್ಚಿಸಲು ಸದನ ಸಮಿತಿ ರಚಿಸಲು ಆಗ್ರಹಿಸಿದ ಆರ್ ಅಶೋಕ

Assembly Session: ಗ್ರೇಟರ್ ಬೆಂಗಳೂರು ರೂಪುರೇಷೆ ಚರ್ಚಿಸಲು ಸದನ ಸಮಿತಿ ರಚಿಸಲು ಆಗ್ರಹಿಸಿದ ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 25, 2024 | 1:46 PM

Assembly Session: ಅಶೋಕ ಹೇಳಿದ್ದನ್ನು ಎಸ್ ಟಿ ಸೋಮಶೇಖರ್ ಅನುಮೋದಿಸಿ ಸದನ ಸಮಿತಿ ರಚಿಸಬೇಕೆಂದು ಹೇಳಿದರು. ಅಗಲೂ ಸ್ಪೀಕರ್ ಆಸನದ ಮುಂದೆ ಗಲಾಟೆ ಮಾಡುತ್ತಿದ್ದ ಬಿಜೆಪಿ ಸದಸ್ಯರ ಕಡೆ ನೋಡಿ ಶಿವಕುಮಾರ್, ನಿಮ್ಮ ನಾಯಕರು ಹೇಳೋದನ್ನಾದರೂ ಕೇಳಿಸಿಕೊಳ್ಳಿ ಎನ್ನುತ್ತಾರೆ.

ಬೆಂಗಳೂರು: ಮುಡಾ ಹಗರಣದ ವಿರುದ್ಧ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ ನಾಯಕರ ನಿಲುವು ರಾತ್ರೋರಾತ್ರಿ ಬದಲಾಯಿತೇ? ಹಾಗೆ ಸಂಶಯ ಮೂಡಲು ಕಾರಣವಿದೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಬಿಜೆಪಿ ಶಾಸಕ ಮಾತಾಡುವಾಗಲೂ ಕೆಲ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಗ್ರೇಟರ್ ಬೆಂಗಳೂರು ಬಿಲ್ ಮಂಡಿಸುವ ಮೊದಲು ವಿದೇಯಕದ ಬಗ್ಗೆ ಮಾತಾಡುತ್ತಾರೆ. ಬೆಂಗಳೂರು ನಗರದ ಜನಸಂಖ್ಯೆ 1.40 ಕೋಟಿ ದಾಟಿರುವುದರಿಂದ ಅದರ ಸ್ವರೂಪ ಬದಲಾಯಿಸುವ ಅವಶ್ಯಕತೆಯಿದೆ, ನಗರವೀಗ ಅಂತಾರಾಷ್ಟ್ರೀಯ ಖ್ಯಾತಿಯನ್ನೂ ಪಡೆದುಕೊಂಡಿದೆ, ನಗರದ ನಿವಾಸಿಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಹಾಗಾಗಿ ಅದಕ್ಕೆ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯವಿದೆ ಎನ್ನುತ್ತಾ ವಿಧೇಯಕ ಮಂಡಿಸುತ್ತಾರೆ. ವಿರೋಧ ಪಕ್ಷದ ಸದಸ್ಯರ ಆಕ್ಷೇಪಣೆಗಳನ್ನು ಸ್ಪೀಕರ್ ಕೇಳಿದಾಗ, ಅಶೋಕ ಒಬ್ಬ ಅಧಿಕಾರಿ ನೀಡಿರುವ ವರದಿಯನ್ನು ಆಧಾರವಾಗಿಟ್ಟುಕೊಂಡು ಗ್ರೇಟರ್ ಬೆಂಗಳೂರು ಮಾಡಲು ಮುಂದಾದರೆ ಅದು ಯೋಜನೆಗೆ ಕಂಟಕವಾಗುತ್ತದೆ, ಇದರ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲು ಎಲ್ಲ ಪಕ್ಷಗಳ ಶಾಸಕರನ್ನೊಳಗೊಂಡ ಸದನ ಸಮಿತಿ ರಚಿಸಬೇಕು, ಈ ಹಿನ್ನೆಲೆಯಲ್ಲಿ ವಿಧೇಯಕವನ್ನು ಕಾಯ್ದಿರಿಸಬೇಕೆಂದು ಆಗ್ರಹಿಸುತ್ತೇನೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಬಿಬಿಎಂಪಿ ಇನ್ಮುಂದೆ ಗ್ರೇಟರ್ ಬೆಂಗಳೂರು ಅಥಾರಿಟಿ? ರಾಮನಗರ, ಕನಕಪುರವನ್ನು ಬೆಂಗಳೂರಿಗೆ ಸೇರಿಸಲು ರೂಪುರೇಷೆ